ನಟ v/s ನಟಿ: ಲೋಕಸಭೆ ಕಣಕ್ಕಿಳಿದ 'ಪ್ರೀತ್ಸು ತಪ್ಪೇನಿಲ್ಲ' ಬೆಡಗಿ ರಚನಾ ಬ್ಯಾನರ್ಜಿ! ಯಾವ ಪಕ್ಷ ಗೊತ್ತಾ?

By Suvarna News  |  First Published Mar 11, 2024, 5:47 PM IST

ಕ್ರೇಜಿಸ್ಟಾರ್​ ರವಿಚಂದ್ರನ್​ ಜೊತೆಗೆ ಉಸಿರೆ ಹಾಗೂ ಪ್ರೀತ್ಸು ತಪ್ಪೇನಿಲ್ಲ ಚಿತ್ರ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ರಚನಾ ಬ್ಯಾನರ್ಜಿಗೆ ಲೋಕಸಭಾ ಸೀಟ್​ ಸಿಕ್ಕಿದೆ.  ಫುಲ್​ ಡಿಟೇಲ್ಸ್​ ಇಲ್ಲಿದೆ...
 


ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ಉಸಿರೆ ಹಾಗೂ ಪ್ರೀತ್ಸು ತಪ್ಪೇನಿಲ್ಲ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿರುವ ಬಹುಭಾಷಾ ತಾರೆ ರಚನಾ ಬ್ಯಾನರ್ಜಿ ಲೋಕಸಭೆಯ ಅಖಾಡಕ್ಕಿಳಿದಿದ್ದಾರೆ. ಜನಪ್ರಿಯ ಬಂಗಾಳಿ ಟಿವಿ ಶೋ ದೀದಿ ನಂ. 1 ರ ನಿರೂಪಕಿಯೂ ಆಗಿರುವ ರಚನಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಹೂಗ್ಲಿ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಯಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರು ಮಾಜಿ ನಟ ಮತ್ತು ಹಾಲಿ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಬಹುಭಾಷಾ ತಾರೆಯಾಗಿರುವ ರಚನಾ ಬ್ಯಾನರ್ಜಿ, ಹಲವಾರು ಬೆಂಗಾಲಿ ಚಲನಚಿತ್ರಗಳಲ್ಲಿ ನಾಯಕಿಯಾಗಿರುವುದು ಮಾತ್ರವಲ್ಲದೆ, ಒಡಿಯಾ ಮತ್ತು ದಕ್ಷಿಣದ ಮನರಂಜನಾ ಉದ್ಯಮಗಳಲ್ಲಿ ಪ್ರಸಿದ್ಧರಾಗಿದ್ದಾರೆ.  ಅವರು ಸದ್ಯ ಚಿತ್ರಗಳಲ್ಲಿ ನಟಿಸುತ್ತಿಲ್ಲ, ಕಿರುತೆರೆ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.  ಅವರ ಕಾರ್ಯಕ್ರಮ ದೀದಿ ನಂ. 1 ಭಾರಿ ಹಿಟ್ ಆಗಿದ್ದು, ಹತ್ತು ವರ್ಷಗಳಿಂದ ನಡೆಯುತ್ತಿದೆ.  ಅಕ್ಟೋಬರ್ 2, 1974 ರಂದು ಜನಿಸಿದ ಜುಂಝುಮ್ ಬ್ಯಾನರ್ಜಿ ಅಲಿಯಾಸ್ ರಚನಾ ಬ್ಯಾನರ್ಜಿ ಅವರು ಫೇಸ್‌ಬುಕ್‌ನಲ್ಲಿ 3.8 ಮಿಲಿಯನ್ ಅನುಯಾಯಿಗಳನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 891 ಕೆ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು 1994 ರಲ್ಲಿ ಮಿಸ್ ಕೋಲ್ಕತಾ ಕಿರೀಟವನ್ನು ಪಡೆದುಕೊಂಡಿದ್ದಾರೆ.  ಅವರು ಆ ವರ್ಷ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಐದು ಉಪ-ಸ್ಪರ್ಧೆಗಳನ್ನು ಗೆದ್ದರು. ನಿರ್ದೇಶಕ ಸುಖೇನ್ ದಾಸ್ ಅವರ ಸಲಹೆಯ ಮೇರೆಗೆ ಜುಂಝುಮ್ ಬ್ಯಾನರ್ಜಿ  ರಚನಾ ಆಗಿ ಬದಲಾದರು.  ಅವರು ಸುಮಾರು 40 ಚಲನಚಿತ್ರಗಳಲ್ಲಿ ಒಡಿಯಾ ಚಲನಚಿತ್ರ ನಟ ಸಿದ್ಧಾಂತ್ ಮಹಾಪಾತ್ರ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ. ಅವರು ಸೂರ್ಯವಂಶಂನಲ್ಲಿ ಅಮಿತಾಭ್​ ಬಚ್ಚನ್ ಜೊತೆಗೂ ಕಾಣಿಸಿಕೊಂಡಿದ್ದಾರೆ.  

Tap to resize

Latest Videos

ಆಸ್ಕರ್​ನಲ್ಲಿ 87 ವರ್ಷಗಳ ದಾಖಲೆ ಮುರಿದ 22 ವರ್ಷದ ಗಾಯಕಿ: ವಿಜೇತರ ಫುಲ್​ ಡಿಟೇಲ್ಸ್ ಇಲ್ಲಿದೆ...

ಗಮನಾರ್ಹವಾಗಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾರ್ಚ್ 3 ರಂದು ರಚನಾ ಬ್ಯಾನರ್ಜಿ ನಡೆಸಿಕೊಡುವ ದೀದಿ ನಂ. 1 ಕಾರ್ಯಕ್ರಮದ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದು ತುಂಬಾ ವಿಶೇಷವಾಗಿತ್ತು. 2000ರಲ್ಲಿ ಬಿಡುಗಡೆಯಾಗಿದ್ದ ಪ್ರೀತ್ಸು ತಪ್ಪೇನಿಲ್ಲ ಮತ್ತು 2001ರಲ್ಲಿ ಬಿಡುಗಡೆಯಾಗಿದ್ದ ರವಿಚಂದ್ರನ್​ ಅಭಿನಯದ ಉಸಿರೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.  ರಚನಾ ಬ್ಯಾನರ್ಜಿ ಅವರು ತಮ್ಮ ಸಹನಟ ಸಿಧಾಂತ್ ಮೊಹಾಪಾತ್ರ ಅವರನ್ನು ವಿವಾಹವಾಗಿ  2004 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಬಳಿಕ 2007 ರಲ್ಲಿ ಪ್ರೊಬಲ್ ಬಸು ಅವರನ್ನು ವಿವಾಹವಾಗಿ  2016 ರಲ್ಲಿ ಅವರಿಂದ ಬೇರ್ಪಟ್ಟಿದ್ದಾರೆ. ಇವರಿಗೆ  ಒಬ್ಬ ಮಗನಿದ್ದಾನೆ.  

ರಚನಾ ಬ್ಯಾನರ್ಜಿ,  ಅವರು ಸೌತ್ ಸಿಟಿ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ಕೋರ್ಸ್‌ನಲ್ಲಿದ್ದಾಗ 1994 ರಲ್ಲಿ ಮಿಸ್ ಕೋಲ್ಕತಾ ಸ್ಪರ್ಧೆಯನ್ನು ಗೆದ್ದರು. ಅವರು ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸುವ ಮೊದಲು ಹಲವಾರು ಸೌಂದರ್ಯ ಸ್ಪರ್ಧೆಗಳನ್ನು ಪ್ರವೇಶಿಸಿದರು ಮತ್ತು ಆಗಾಗ್ಗೆ 'ಮಿಸ್ ಬ್ಯೂಟಿಫುಲ್ ಸ್ಮೈಲ್' ಎಂದು ಘೋಷಿಸಲ್ಪಟ್ಟರು. 1994 ರಲ್ಲಿ ಅವರು ಮಿಸ್ ಇಂಡಿಯಾ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಿಂದ ಜಸ್ಟ್​ ಮಿಸ್​ ಆಗಿದ್ದರು.  ಅಲ್ಲಿ ಮಧು ಸಪ್ರೆ ಪ್ರಶಸ್ತಿಯನ್ನು ಪಡೆದರು.  ಇವರು  ಸುಮಾರು 40 ಚಲನಚಿತ್ರಗಳಲ್ಲಿ ಸಿದ್ಧಾಂತ್ ಮಹಾಪಾತ್ರ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದು, ಈ ಸಂದರ್ಭದಲ್ಲಿ  ವೃತ್ತಿಜೀವನದಲ್ಲಿ  ದೊಡ್ಡ ಯಶಸ್ಸು ಪಡೆದುಕೊಂಡರು.   ಅವರು ತಮ್ಮ ನೆಚ್ಚಿನ ನಟ ಪ್ರೊಸೆನ್‌ಜಿತ್ ಚಟರ್ಜಿ ಅವರೊಂದಿಗೆ 35 ಬಂಗಾಳಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ .

ಈ ಬಾರಿಯೂ ಆಸ್ಕರ್​ ವೇದಿಕೆ ಮೇಲೆ ಮಿಂಚಿದ ನಾಟು ನಾಟು! RRRಗೆ ಸಂದಿತು ವಿಶೇಷ ಗೌರವ

click me!