
ದರ್ಶನ್ ಅಭಿಮಾನಿಗಳಿಗೆ ಇದು ದೊಡ್ಡ ಸಂಭ್ರಮದ ಸುದ್ದಿ. ಕೊನೆಗೂ ಬಹು ನಿರೀಕ್ಷೆಯ ‘ರಾಬರ್ಟ್’ ಚಿತ್ರದ ಬಿಡುಗಡೆಗೆ ದಿನಾಂಕ್ ಫಿಕ್ಸ್ ಆಗಿದೆ. ಏಪ್ರಿಲ್ 10ಕ್ಕೆ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗುತ್ತಿರುವುದು ಪಕ್ಕಾ ಆಗಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ದರ್ಶನ್ ಈ ಬಾರಿ ಸದ್ದು ಮಾಡಲಿದ್ದಾರೆ.
ಸದ್ಯಕ್ಕೆ ತೆಲುಗಿಗೆ ಮಾತ್ರ ಡಬ್ ಮಾಡುವ ಪ್ಲಾನ್ ಚಿತ್ರತಂಡದ್ದು. ‘ಏಪ್ರಿಲ್ 10ಕ್ಕೆ ನಮ್ಮ ಸಿನಿಮಾ ತೆರೆ ಮೇಲೆ ಬರುತ್ತಿದೆ. ಅಂದು ಗುಡ್ ಫ್ರೈಡೇ. ರಾಬರ್ಟ್ ಚಿತ್ರಕ್ಕೆ ಇದೇ ಸೂಕ್ತವಾದ ದಿನ ಎನಿಸಿದೆ.
ಫೈಟರ್‌ಗೆ ಡೈಲಿ ಪೇಮೆಂಟ್, ವಿನೋದ್‌ಗೆ ಹೈ ಪೇಮೆಂಟ್; ನಿರ್ಮಾಪಕರಿಗೆ ದರ್ಶನ್ ಖಡಕ್ ಮಾತು!
ನಮ್ಮ ಚಿತ್ರಕ್ಕೂ ಗುಡ್ ಫ್ರೈಡೇ ಆಗಲಿದೆ. ಕನ್ನಡದ ಜತೆಗೆ ತೆಲುಗಿಗೂ ಈ ಚಿತ್ರವನ್ನು ಡಬ್ ಮಾಡುತ್ತಿದ್ದೇವೆ’ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳುತ್ತಾರೆ.
ಒಟ್ಟಿನಲ್ಲಿ ದರ್ಶನ್ ಅವರ ‘ರಾಬರ್ಟ್’ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಪದೇ ಪದೇ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಂದ ಕೇಳುತ್ತಿದ್ದ ಪ್ರಶ್ನೆಗೆ ನಿರ್ದೇಶಕರೇ ಉತ್ತರ ಕೊಟ್ಟಿದ್ದಾರೆ. ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ. ದೇವರಾಜ್, ಜಗಪತಿ ಬಾಬು, ರವಿ ಕಿಶನ್, ಐಶ್ವರ್ಯ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಮ್ಮ ರಾಬರ್ಟ್ ಸಿನಿಮಾ ಏಪ್ರಿಲ್ 10ರ ಗುಡ್ ಫ್ರೈಡೇ ದಿನ ಚಿತ್ರಮಂದಿರಕ್ಕೆ ಬರುವುದು ಖಚಿತ. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಏಕಕಾಲದಲ್ಲಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಸಿನಿಮಾ ಸಾಕಷ್ಟುನಿರೀಕ್ಷೆ ಮತ್ತು ಭರವಸೆ ಹುಟ್ಟಿಸಿದ್ದು, ಈ ನಿರೀಕ್ಷೆ ಹುಸಿ ಆಗಲ್ಲ.
-ತರುಣ್ ಸುಧೀರ್, ನಿರ್ದೇಶಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.