ವೈಫೈ ಪಾಸ್​ವರ್ಡ್​ ಸೇರಿದಂತೆ ಜೀವನದ ಇಷ್ಟೊಂದು ರಹಸ್ಯ ಹೇಳಿಯೇ ಬಿಟ್ರಲ್ಲಾ ಸಪ್ತಮಿ ಗೌಡ!

Published : Jul 29, 2024, 03:21 PM IST
ವೈಫೈ ಪಾಸ್​ವರ್ಡ್​ ಸೇರಿದಂತೆ ಜೀವನದ ಇಷ್ಟೊಂದು ರಹಸ್ಯ ಹೇಳಿಯೇ ಬಿಟ್ರಲ್ಲಾ ಸಪ್ತಮಿ ಗೌಡ!

ಸಾರಾಂಶ

ಕಾಂತಾರ ನಟಿ ಸಪ್ತಮಿ ಗೌಡ ಹಲವಾರು ಸೀಕ್ರೆಟ್​ಗಳನ್ನು ರಿವೀಲ್​  ಮಾಡಿದ್ದಾರೆ. ಅವರಿಗೆ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರಗಳೇನು?  

ಕಾಂತಾರ ಸಿನಿಮಾದ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರೋ  ನಟಿ ಸಪ್ತಮಿ ಗೌಡ (sapthami gowda) ಸದ್ಯ ಸುದ್ದಿಯಲ್ಲಿದ್ದಾರೆ.  ಯುವ (Yuva) ಸಿನಿಮಾದಲ್ಲಿ ಸಪ್ತಮಿ ಗೌಡ ಜೊತೆ ನಟಿಸಿದ್ದ ಯುವ ರಾಜ್‌ಕುಮಾರ್‌ (Yuva RajKumar) ಹಾಗೂ ಶ್ರೀದೇವಿ ಭೈರಪ್ಪ (Sridevi byrappa) ನಡುವಿನ ವಿಚ್ಛೇದನಕ್ಕೆ ಸಪ್ತಮಿ ಗೌಡ (Divorce) ಅವರೇ ಕಾರಣ ಎನ್ನುವ ಮಾತಗಳು ಕೇಳಿ ಬಂದಿದ್ದು, ಈ ವಿವಾದ ಸದ್ಯ ತಣ್ಣಗಾಗಿದೆ.  ಕಾಂತಾರ ಸಿನಿಮಾದ ಹಿಟ್​ ಬಳಿಕ  ಬಾಲಿವುಡ್ ಸಿನಿಮಾಕ್ಕೂ ಪದಾರ್ಪಣೆ ಮಾಡಿದರು ನಟಿ.  ವಿದೇಶಕ್ಕೆ ತೆರಳಿ ಓದಬೇಕು ಎಂದುಕೊಳ್ಳುವಷ್ಟರಲ್ಲಿಯೇ  ಕೊರೋನಾ ಲಾಕ್‌ಡೌನ್ ನಿಂದಾಗಿ ಇಲ್ಲೇ ಉಳಿದುಕೊಳ್ಳುವಂತಾಗಿದ್ದೇ ಇವರ ಬದುಕಿನ ದೊಡ್ಡ ಟರ್ನ್​ ಆಗಿತ್ತು.  'ಕಾಂತಾರ' ಸಿನಿಮಾ ಅವಕಾಶ ಸಿಕ್ಕಿತ್ತು.  ಅಭಿಷೇಕ್ ಅಂಬರೀಶ್ ಜೊತೆ 'ಕಾಳಿ' ಚಿತ್ರದಲ್ಲಿಯೂ ನಾಯಕಿಯಾದರು.  'ತಮ್ಮುಡು' ಸಿನಿಮಾ ಮೂಲಕ ಸಪ್ತಮಿ ಗೌಡ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 

ಇಂತಿಪ್ಪ ನಟಿಯ ಪಟಾಪಟ್​ ಸಂದರ್ಶನವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರಲ್ಲಿ ನಟಿ, ಜೀವನದ ಕೆಲವು ಬೇಕು-ಬೇಡ, ಇಷ್ಟಾನಿಷ್ಟಗಳ ಕುರಿತು ಮಾತನಾಡಿದ್ದಾರೆ. ಇವರಿಗೆ ಕೇಳಿರುವ ಜಟಾಪಟ್​ ಪ್ರಶ್ನೆಯಲ್ಲಿ ನಟಿ ಪಟಾಪಟ್​ ಉತ್ತರ ಕೊಟ್ಟಿದ್ದಾರೆ. ನಿಮಗೆ ಇಷ್ಟವಾಗಿರುವ ಸೋಷಿಯಲ್​ ಮೀಡಿಯಾ ಯಾವುದು ಎಂಬ ಪ್ರಶ್ನೆಗೆ ನಟಿ ಇನ್​ಸ್ಟಾಗ್ರಾಮ್​ ಎಂದಿದ್ದಾರೆ. ಫೆವರೆಟ್​ ಕ್ರಿಕೆಟ್​ ಪ್ಲೇಯರ್​ ವಿರಾಟ್​ ಕೊಹ್ಲಿ ಎಂದಿರುವ ನಟಿ, ಈ ಶೂಟಿಂಗ್​ ಮಾಡುವ ಸಮಯದಲ್ಲಿನ  ಪೆವರೆಟ್​ ಸಾಂಗ್ ಯಾವುದು ಎಂದು ಕೇಳಿದಾಗ ಕವಿತೆ ಕವಿತೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಇಷ್ಟದ ಅಡ್ಡಾ ಯಾವುದು ಎಂಬ ಪ್ರಶ್ನೆಗೆ ಸಪ್ತಮಿ ಅವರು, ನಮ್ಮ ಮನೆ ಎಂದು ಹೇಳುವ ಮೂಲಕ ಮನೆಯ ಮೇಲಿನ ಪ್ರೀತಿ ತೋರಿಸಿದ್ದಾರೆ.

71ನೇ ವಯಸ್ಸಿಗೆ ಸಾಯೋ ಆಸೆ... ಏಕೆಂದ್ರೆ.... ನಟ ರಣಬೀರ್​ ಕಪೂರ್​ ವಿಚಿತ್ರ ಬಯಕೆ...

ಇದೇ ವೇಳೆ ವೈ ಫೈಗೆ ವಿಚಿತ್ರ ಯಾವುದಾದರೂ ಪಾಸ್​ವರ್ಡ್​ ಇಟ್ಟಿದ್ರಾ ಎನ್ನುವ ಪ್ರಶ್ನೆಗೆ ನಟಿ, ಸದಾ ನನ್ನ ವೈಫೈ ಪಾಸ್​ವರ್ಡ್​ ಒಂದೇ ಆಗಿರುತ್ತದೆ. ಅದು ನನ್ನ ನಾಯಿಯ ಹೆಸರು  ಸಿಂಬಾ (simba) ಎಂದು ವೈಫೈ ಪಾಸ್​ವರ್ಡ್​ ರಿವೀಲ್​ ಮಾಡಿದ್ದಾರೆ. ಇದೇ ವೇಳೆ ಕಪಲ್ಸ್​ಗೆ ಒಂದು ರಿಲೇಷನ್​ಷಿಪ್​ ಅಡ್ವೈಸ್​ ಕೊಡುವುದಾದರೆ ಏನು ಕೊಡುತ್ತೀರಿ ಎಂದು ಕೇಳಿದಾಗ ನಟಿ, ನಾನು ಅಷ್ಟು ದೊಡ್ಡವಳಲ್ಲ, ಮುಂದಕ್ಕೆ ಹೋಗೋಣ ಎಂದು ಜೋರಾಗಿ ನಕ್ಕಿದ್ದಾರೆ. ನೀವು ಇಷ್ಟಪಟ್ಟು ತಿನ್ನುವ ಐದು ಕುರುಕುರು ತಿಂಡಿ ಯಾವುದು ಎಂಬ ಪ್ರಶ್ನೆ ಎದುರಾದಾಗ ಸಪ್ತಮಿ ಅವರು, ನನಗೆ ಕುರುಕಲು ತಿಂಡಿ ಎಲ್ಲಾ ಇಷ್ಟ ಎನ್ನುತ್ತಲೇ ಡೇರಿ ಮಿಲ್ಕ್​ ಇಷ್ಟ, ದೊಡ್ಡಮ್ಮ ಮಾಡುವ ರವೆ ಉಂಡೆ ಇಷ್ಟ, ಚಕ್ಕಲಿ ಇಷ್ಟ, ಕೋಡುಬಳಿ, ನಿಪ್ಪಟ್ಟು ಎಲ್ಲವೂ ಇಷ್ಟ ಎಂದಿದ್ದಾರೆ.

 
ಮುಂದಿನ ಜನ್ಮದಲ್ಲಿ ಹಕ್ಕಿ ಆದ್ರೆ ಯಾವ ಹಕ್ಕಿ ಆಗೋಕೆ ಇಷ್ಟಪಡ್ತೀರಾ ಎನ್ನುವ ಪ್ರಶ್ನೆಗೆ ಕಿಂಗ್​ಫಿಷರ್​ ಎಂದಿದ್ದಾರೆ. ಈ ವಿಡಿಯೋ ಅವರ ಯುವ ಸಿನಿಮಾ ಬಿಡುಗಡೆಯಾಗುವ ವೇಳೆ ನಡೆದದ್ದು.  ಆದ್ದರಿಂದ ಯುವ ಫಿಲ್ಮ್ಂ ಕುರಿತು  ಒಂದು ಲೈನ್​ನಲ್ಲಿ ಹೇಳಿ ಎಂದಾಗ ನಟಿ ಪವರ್​ ಪ್ಯಾಕ್ಡ್ ಎಂದಿದ್ದಾರೆ. ಇನ್ನು “ಯುವ' ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಸಿರಿ ಎಂಬ ಹೆಸರಿನ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾ ಹೇಳಿಕೊಳ್ಳುವಷ್ಟು ಗಳಿಕೆ ಮಾಡಲಿಲ್ಲ. ಇದೇ ವೇಳೆ, ಈ ಹಿಂದೆ ಸಪ್ತಮಿ ಅವರು,  ಮಯೂರ ರಾಘವೇಂದ್ರ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡುತ್ತಾ, ಸಹ ಕಲಾವಿದರ ಜೊತೆ ಲವ್, ಕ್ರಶ್ ಆಗಿದ್ಯಾ ಎಂಬ ಪ್ರಶ್ನೆಗೆ,   ಪ್ರೇಕ್ಷಕರನ್ನು ಕನ್ವಿನ್ಸ್ ಮಾಡಬೇಕು ಅಂದ್ರೆ ನಟಿಯಾದವಳು  ಅದನ್ನು ಫೀಲ್ ಮಾಡಿ ತೋರಿಸಬೇಕು. ಆಕೆ ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದರೆ ಪ್ರೀತಿಲಿ ಬಿದ್ದಂತೆ ನಟಿಸಬೇಕು ಹಾಗೆಂದು ಅವಳಿಗೆ ಲವ್​ ಕ್ರಶ್​ ಆಗಿದೆ ಅಂತಲ್ಲ...  ಬ್ರೇಕಪ್ ಸೀನ್ ಅಂದ್ರೆ, ನಿಜವಾಗಿಯೂ ಬ್ರೇಕ್ ಅಪ್ ಆಗಿದೆ ಅನ್ನುವಂತೆ ಮಾಡಿ ತೋರಿಸಬೇಕು ಎಂದಿದ್ದರು.

ಸೆಕ್ಸ್ ಕುರಿತು ಮಾತನಾಡಿದ್ದ 'ಕಿರಾತಕ' ಬೆಡಗಿ ಫುಲ್​ ಟೈಟಾಗಿ ಯುವಕರಿಗೆ ಬಿಟ್ಟಿ ಸಲಹೆ ಕೊಟ್ಟಿದ್ದು ಹೀಗೆ...


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!