ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗ ಕಮೀಷನ್ ವಿಚಾರದ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ....
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್ ಸಿನಿಮಾ ದಸರ ಹಬ್ಬಕ್ಕೆ ಅಬ್ಬರಿಸಲಿದೆ. ಈ ನಡುವೆ ಎಪಿ ಆರ್ಜುನ್ ಕಮಿಷನ್ ತೆಗೆದುಕೊಂಡ ವಿಚಾರ ಹೊರ ಬಂದಿದ್ದು ದೊಡ್ಡ ವಿವಾದ ಸೃಷ್ಟ ಆಗಿತ್ತು. ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಉದಯ್ ಮೆಹ್ತಾ ದೂರು ದಾಖಲಿಸಿದ್ದರು. ಈಗಾಗಲೆ ವಿಎಫ್‌ಎಕ್ಸ್ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದಾಗೆ. ಬಂಧಿತ ವ್ಯಕ್ತಿ ಅರ್ಜುನ್ 50 ಲಕ್ಷ ರೂಪಾಯಿ ಕಮಿಷನ್ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
'ಅವರಿಬ್ಬರ ಕಿತ್ತಾಟ ಹೊಸತೇನು ಅಲ್ಲ ಆದರೆ ಮಾಧ್ಯಮಗಳಿಗೆ ಹೊಸದಾಗಿ ಗೊತ್ತಾಗಿದೆ ಅಷ್ಟೇ. ಅದರ ಪಾಡಿಗೆ ಅದು ನಡೀತಾನೇ ಇದೆ. ಇದರಿಂದ ಸಿನಿಮಾಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಮಾರ್ಟಿನ್ ಸಿನಿಮಾದ ಸಿಜಿ ಆಗಿದೆ. ಅಕ್ಟೊಬರ್ 18ಕ್ಕೆ ನಮ್ಮ ನಾಡ ಹಬ್ಬ ದಸರಾಗೆ ಮಾರ್ಟಿನ್ ಸಿನಿಮಾ ಬಿಡುಗಡೆಯಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಸದ್ಯ ರೀ ರೆಕಾರ್ಡಿಂಗ್ ಸೆಕೆಂಡ್ ಹಾಫ್ ಕೂಡ ಮುಗಿದು ಹೋಗಿದೆ' ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ ಎಂದು ಖಾಸಗಿ ವೆಬ್ ವರದಿ ಮಾಡಿದೆ.
ದರ್ಶನ್ ಬ್ಯಾನರ್‌ಗೆ ಚಪ್ಪಲಿ ಪೂಜೆ, ಹಂದಿ ಸಗಣಿ ಎಸೆದು ಮನನೊಂದ ಅಭಿಮಾನಿಗಳು; ವಿಡಿಯೋ ವೈರಲ್!
'ಅವರಿಬ್ಬರ ವಿವಾದದ ಮಧ್ಯೆ ನಾನು ಹೋಗಿಲ್ಲ ಯಾಕಂದ್ರೆ ನನಗೆ ಮೊದಲು ಚಾನ್ಸ್ ಕೊಟ್ಟ ನಿರ್ದೇಶಕ ಎಪಿ ಅರ್ಜುನ್. ಮತ್ತೆ ನಮ್ಮ ಪ್ರಡ್ಯೂಸರ್ ಉದಯ್ ಮೆಹ್ತಾ. ಇಬ್ಬರೂ ನನಗೆ ಒಳ್ಳೆಯ ಸ್ನೇಹಿತರೇ. ಇವರಿಬ್ಬರ ಮಧ್ಯೆ ನಾನು ಇದುವರೆಗೂ ಹೋಗಿಲ್ಲ ಬ್ಯಾಲೆನ್ಸ್ ಆಗುತ್ತೆ ಏನೇ ಇದ್ರೂ. ಸಿನಿಮಾಗೇನು ಮೋಸ ಆಗುವುದಿಲ್ಲ ಸಿನಿಮಾಗೆ ಮಾಡಿರುವ ಖರ್ಚು ಕಾಣಿಸುತ್ತದೆ' ಎಂದು ನಿರ್ದೇಶಕ ಎಪಿ ಅರ್ಜುನ್ ಭರವೆ ಕೊಟ್ಟಿದ್ದರು.