ಕಾಂತಾರ ಪ್ರೀಕ್ವೆಲ್ ಬಗ್ಗೆ ಇಡೀ ದೇಶದ ಕಣ್ಣಿದೆ. ಕಾಂತಾರ ಸಿನಿಮಾ ಬಗ್ಗೆ ಹೇಳಿದ್ರೆ ಮೊದಲು ಕಣ್ಮುಂದೆ ಬರೋದೆ ರಿಷಬ್ ಶೆಟ್ಟಿ. ಇದರ ಜತೆಗೆ ನಾಯಕಿ ಸಪ್ತಮಿ ಗೌಡ. ಈ ಜೋಡಿ ಸಿನಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗ್ಬಿಟ್ಟಿದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಕೆತ್ತನೆಯಲ್ಲಿ ಬ್ಯುಸಿ ಆಗಿದ್ದಾರೆ. ಕರಾವಳಿ ಕಾಡು ಸೇರಿರೊ ರಿಷಬ್ ಈ ಸಿನಿಮಾದ ಟೈಟಲ್ ಟೀಸರ್ ಕೊಟ್ಟಿದ್ದಷ್ಟೆ. ಆ ನಂತ್ರ ಸಿನಿಮಾ ಬಗ್ಗೆ ಯಾವ್ದೇ ಅಪ್ಡೇಟ್ ಕೊಟ್ಟಿಲ್ಲ. ತನ್ನ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆ ಅನ್ನೋ ಮಾಹಿತಿ ಬಚ್ಚಿಟ್ಟಿಲ್ಲ. ಆದ್ರೂ ಕಾಂತಾರ ಪ್ರೀಕ್ಚೆಲ್ ಹೀರೋಯಿನ್ಸ್ ಯಾರಾಗ್ತಾರೆ ಅನ್ನೋ ಬಗ್ಗೆ ಸಾಕಷ್ಟು ಸುದ್ದಿಗಳು ಬಂದಿದ್ವು. ಈ ಸಿನಿಮಾದ 5 ಜನ ನಾಯಕಿಯರು ನಟಿಸುತ್ತಾರೆ ಅಂತ ಟಾಕ್ ಆಗಿತ್ತು'
ಕಾಂತಾರ ಪ್ರೀಕ್ವೆಲ್ ಬಗ್ಗೆ ದೊಡ್ಡ ನ್ಯೂಸ್ ಕೊಟ್ಟ ಸಿಂಗಾರ ಸಿರಿ: ಕಾಂತಾರ ಪ್ರೀಕ್ವೆಲ್ ಬಗ್ಗೆ ಇಡೀ ದೇಶದ ಕಣ್ಣಿದೆ. ಕಾಂತಾರ ಸಿನಿಮಾ ಬಗ್ಗೆ ಹೇಳಿದ್ರೆ ಮೊದಲು ಕಣ್ಮುಂದೆ ಬರೋದೆ ರಿಷಬ್ ಶೆಟ್ಟಿ. ಇದರ ಜತೆಗೆ ನಾಯಕಿ ಸಪ್ತಮಿ ಗೌಡ. ಈ ಜೋಡಿ ಸಿನಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗ್ಬಿಟ್ಟಿದೆ. ಕಾಡುಬೆಟ್ಟದ ಶಿವ ಹಾಗು ಲೀಲಾ ಪ್ರೇಮಿಗಳ ಫೇವರಿಟ್ ಜೋಡಿಯಾಗಿದ್ರು. ಈ ಸಿಂಗಾರ ಸಿರಿ ಸಪ್ತಮಿ ಗೌಡಗೆ ದೊಡ್ಡ ಕ್ರೇಜ್ ತಂದುಕೊಟ್ಟಿದ್ದು ಕಾಂತಾರ ಸಿನಿಮಾ. ಹೀಗಾಗಿ ಕಾಂತಾರ ಪ್ರೀಕ್ವೆಲ್ನಲ್ಲಿ ನಾಯಕಿಯ ವಿಚಾರ ಬಂದ್ರೆ ಮೊದಲು ಕೇಳಿ ಬರುತ್ತಿದ್ದ ಹಸರು ನಟಿ ಸಪ್ತಮಿ ಗೌಡ.
ಕಿಚ್ಚ ಸುದೀಪ್ ಬಾಡಿಗಾರ್ಡ್ ಜತೆ ಕನ್ನಡದಲ್ಲಿ ಮಾತನಾಡಿದ ದೀಪಿಕಾ ಪಡುಕೋಣೆ ವೀಡಿಯೋ ವೈರಲ್!
ಕಾಂತಾರ ಪ್ರೀಕ್ವೆಲ್ನಲ್ಲಿ ನಟಿಸುತ್ತಿಲ್ಲ ಎಂದ ಸಪ್ತಮಿ ಗೌಡ: ಕಾಂತಾರ ಪ್ರೀಕ್ವೆಲ್ ಶುರುವಾಗ್ತಿದ್ದ ಹಾಗೆ ನಟಿ ಸಪ್ತಮಿ ಗೌಡ ರೋಲ್ ಏನು ಹೇಗಿರುತ್ತೆ ಅನ್ನೋ ಬಗ್ಗೆ ದೊಡ್ಡ ಚರ್ಚೆ ಆಗುತ್ತಿತ್ತು. ಆದರೆ ಈಗ ನಟಿ ಸಪ್ತಮಿ ಗೌಡ ಆ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ. 'ನಾನು ನಟಿಸುತ್ತಿಲ್ಲ. ಆ ಪಾತ್ರಕ್ಕೆ ಬೇರೆಯವರು ಬಂದಿದ್ದಾರೆ. ಈಗ ಸಿದ್ಧವಾಗುತ್ತಿರುವುದು ಪ್ರೀಕ್ವೆಲ್. ಆ ಪಾತ್ರವೇ ಇಲ್ಲ ಎಂದಾಗ ನಾನು ನಟಿಸೋದು ಹೇಗೆ' ಎಂದಿದ್ದಾರೆ ನಟಿ ಸಪ್ತಮಿ ಗೌಡ. ಈ ಮೂಲಕ ಕಾಂತಾರ ಪ್ರೀಕ್ವೆಲ್ನಲ್ಲಿ ಸಪ್ತಮಿ ಇರೋದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ.
ನಾನು ಅನ್ವೇಷಣೆ, ಹೋರಾಟ ಮಾಡೋಕೆ ಬಂದವ್ನು, ಮ್ಯಾನೇಜ್ಮೆಂಟ್ ನನ್ನ ಕೆಲಸವಲ್ಲ ಅಂದ್ರು ಯಶ್!
ಒಟ್ಟಿನಲ್ಲಿ, ಕೆಜಿಎಫ್ ಬಳಿಕ ಬಂದ 'ಕಾಂತಾರ' ಸಿನಿಮಾ ನಿಜವಾಗಿಯೂ ಸ್ಯಾಂಡಲ್‌ವುಡ್ ಉದ್ಯಮಕ್ಕೆ ಟಾನಿಕ್ ಕೊಟ್ಟಿದೆ. ಕೆಜಿಎಫ್ ಸಿನಿಮಾ ಬಿಗ್ ಬಜೆಟ್ ಹಾಗೂ ಬಿಗ್ ಬಿಸನೆಸ್ ಚಿತ್ರವಾಗಿ ಕನ್ನಡ ಸಿನಿಮಾ ಉದ್ಯಮವನ್ನು ಬೇರೆಯದೇ ಹಂತಕ್ಕೆ ತೆಗೆದುಕೊಂಡು ಹೋಗಿದ್ದು ಗೊತ್ತೇ ಇದೆ. ಅದರೆ, ಕಾಂತಾರ ಸಣ್ಣ ಬಜೆಟ್‌ನಲ್ಲಿ, ಅಂದ್ರೆ ಕೇವಲ 15-16 ಕೋಟಿ ಬಜೆಟ್ ಇಟ್ಟಕೊಂಡು ಸಿನಿಮಾ ಮಾಡಿ ಇಡೀ ಜಗತ್ತೇ ತಿರುಗಿ ನೋಡುವಂಥ ಸಿನಿಮಾ ಕೊಟ್ಟಿದೆ. ಹೀಗಾಗಿ ಸಹಜವಾಗಿಯೇ ಮುಂಬರುವ 'ಕಾಂತಾರ- ಪ್ರೀಕ್ವೆಲ್'ಗೆ ಭಾರೀ ನಿರೀಕ್ಷೆ ಮೂಡಿದೆ.
ಮಹಿಳೆಯರು ಇನ್ನೂರು ಫೌಂಡ್ ಭಾರವನ್ನು ಇನ್ನೊಬ್ಬರ ಮೇಲೆ ಎಸೆಯಲಾರರು; ನಟಿ ಪ್ರಿಯಾಂಕಾ ಚೋಪ್ರಾ!