
ಡ್ರಗ್ಸ್ ವಿವಾದದಲ್ಲಿ ಜೈಲು ಸೇರಿ ಈಗ ಮನೆ ಸೇರಿರುವ ನಟಿ ಸಂಜನಾ ಗಲ್ರಾನಿ ಏನ್ಮಾಡ್ತಿದ್ದಾರೆ..? ವಿಡಿಯೋ ಮಾಡ್ತಾ, ಫೋಟೋಸ್ ಪೋಸ್ಟ್ ಮಡ್ತಾ, ಆಗಾಗ ಲೈವ್ ಬರ್ತಾ ಜಾಲಿಯಾಗಿದ್ದಾರೆ.
ನಟಿ ಇತ್ತೀಚೆಗಷ್ಟೇ ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾದ ವಾತಿ ಕಮ್ಮಿಂಗ್ ಸಾಂಗ್‌ಗೆ ರೀಲ್ಸ್ ಮಾಡಿದ್ದಾರೆ. ಮಲಗಿದ್ದಲ್ಲಿಂದಲೇ ಎದ್ದು ವಿಡಿಯೋ ಮಾಡಿದ್ದು, ವಿಡಿಯೋ ಡಿಫರೆಂಟಾಗಿದೆ.
ಶಂಕರ್‌ನಾಗ್ ಹಾಡಿಗೆ ಡಿಂಪಲ್ ಕ್ವೀನ್ ಸ್ಟೆಪ್: ಹುಚ್ಚು ಹಿಡೀತಾ ಎಂದ ಫ್ಯಾನ್
ಇನ್ಸ್ಟಾಗ್ರಾಂ ಫಿಲ್ಟರ್ ಬಳಸಿಕೊಂಡು ಕಣ್ಣಿನ ಕಪ್ಪನ್ನು ಬದಲಾಯಿಸಿ ದೆವ್ವದಂತೆ ಫಿಲ್ಟರ್ ಮಾಡಿದ್ದಾರೆ. ನೋಡೋದಕ್ಕೆ ಭಯಪಡಿಸುವಂತಿದ್ದರೂ ಫ್ಯಾನ್ಸ್ ನೋಡಿ ಖುಷಿ ಪಟ್ಟಿದ್ದಾರೆ.
ನೈಟ್ ಡ್ರೆಸ್‌ನಲ್ಲಿ ಬೆಡ್ ಶೀಟ್ ತೆಗೆದು ಎದ್ದು ನಿಂತು ವಿಡಿಯೋ ಮಾಡುವಾಗ ತಲೆ ಕೂದಲನ್ನೂ ಬಿಚ್ಚಿ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಯೊಬ್ಬರು ಅವ್ವಾ ದೆವ್ವಾ ಎಂದು ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.