
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟಿಸಿರುವ ಹಿರಿಯ ಕಲಾವಿದ ಉಮೇಶ್ ಹೆಗ್ಡೆ (Umesh Hegde) ಅಕ್ಟೋಬರ್ 10 ಹೃದಯಘಾತದಿಂದ (Heartattack) ಆಸ್ಪತ್ರೆಗೆ ದಾಖಲಾದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಉಮೇಶ್ ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು (October 11th) ಬೆಳಗ್ಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಉಮೇಶ್ ಅವರು ಪಾರ್ಥೀವ ಶರೀರವನ್ನು ಅವರ ನಿವಾದಸಲ್ಲಿ ಇಡಲಾಗಿದೆ. ಅಂತಿಮ ದರ್ಶನ ಪಡೆದ ನಂತರ ಕುಟುಂಬಸ್ಥರು ಸಂಪ್ರದಾಯದ ಪ್ರಕಾರ ವಿಧಿವಿಧಾನಗಳನ್ನು ನಿರವೇರಿಸಲಿದ್ದಾರೆ.
ಕನ್ನಡ ಚಿತ್ರರಂಗದವರು ಹಿರಿಯ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಮೇಶ್ ಇನ್ನಿಲ್ಲ ಎಂಬ ವಿಚಾರ ಅನೇಕರಿಗೆ ಶಾಕ್ ನೀಡಿದೆ. ನೂರಾರು ಧಾರಾವಾಹಿಗಳು, ಹತ್ತಾರೂ ಸಿನಿಮಾಗಳಲ್ಲಿ ನಟಿಸಿರುವ ಉಮೇಶ್ ಅವರು ರಂಗಭೂಮಿಯ (Theater Artist) ಕಲಾವಿದನಾಗಿದ್ದರು. 71 ವರ್ಷದ ಉಮೇಶ್ ಅವರ ಆತ್ಮಕ್ಕೆ ಶಾಂತಿ (RIP) ಸಿಗಲಿ ಎಂದು ಪ್ರಾರ್ಥಿಸೋಣ.
ಕೆಲವು ದಿನಗಳ ಹಿಂದೆ ಹಿರಿಯ ನಟ ಸತ್ಯಜೀತ್ (Sathyajith) ಅವರು ಗ್ಯಾಂಗ್ರಿನ್ ಮತ್ತು ಹಾರ್ಟ್ ಸ್ಟ್ರೋಕ್‌ನಿಂದ (Heart Stroke) ಕೊನೆ ಉಸಿರೆಳೆದ್ದರು. ಬೆಂಗಳೂರಿನಲ್ಲಿ ಇಸ್ಲಾಂ ಧರ್ಮದಂತೆ ಅಂತಿಮ ಕಾರ್ಯಗಳನ್ನು ನೆರವೇರಿಸಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.