
ಸಿನಿಮಾ ಮಾಡುವುದು ಎಷ್ಟು ಸಂಭ್ರಮವೋ ಅಷ್ಟೇ ಸಾಹಸ ಮತ್ತು ಕಷ್ಟದ ಕೆಲಸ. ಆದರೂ ಸಿನಿಮಾ ರೂಪಿಸುವ ನಿಟ್ಟಿನಲ್ಲಿ ಎದುರಿಸುವ ಕಷ್ಟಗಳು, ಆಗುವ ಅವಮಾನಗಳು ಹೇಗಿರುತ್ತವೆ ಎಂಬುದು ಒಬೊಬ್ಬರದ್ದು ಒಂದೊಂದು ಅನುಭವ. ಅಂಥದ್ದೇ ಅನುಭವದ ಕತೆಯನ್ನು ‘ಓಶೋ’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ ಜಿಯಾಉಲ್ಲಾ ಖಾನ್.
ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಕುರಿತು ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಓಶೋ ಎಂಬುದು ಚಿತ್ರದ ನಾಯಕನ ಹೆಸರು. ಚಿತ್ರದಲ್ಲಿ ನಾಯಕ ಸಹಾಯಕ ನಿರ್ದೇಶಕನಾಗಿರುತ್ತಾನೆ.
ಗಣೇಶ ಹಬ್ಬದಂದು ತೆರೆಗೆ ಬರಲಿದೆ ಲಂಕೆ..!
ಈ ಹಂತದಲ್ಲಿ ಸಿನಿಮಾ ನಿರ್ದೇಶನ ಮಾಡಬೇಕು ಎಂದುಕೊಂಡಾಗ ಏನೆಲ್ಲ ಆಗುತ್ತದೆ ಎಂಬುದನ್ನು ಒಳಗೊಂಡ ಸಿನಿಮಾ ಇದು.ಈ ಚಿತ್ರದಲ್ಲಿ ನಿರ್ದೇಶಕ ಜಟ್ಟ ಗಿರಿರಾಜ್ ಸೆನ್ಸಾರ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕರಿಸುಬ್ಬು, ಮಧುಗಿರಿ ಪ್ರಕಾಶ್, ವೀನಸ್ ನಾಗರಾಜ್, ಕಾರ್ತಿಕ್ ಕಾಟೇಕರ್ ನಟಿಸಿದ್ದಾರೆ. ರಮೇಶ್ ಗ್ಯಾನಗೌಡರ್ ಹಾಗೂ ಅನಂತ್ ಇಟಗಿ ಚಿತ್ರದ ನಿರ್ಮಾಪಕರು. ಅನಂತ್ ಇಟಗಿ ಸೋದರ ಆನಂದ್ ಇಟಗಿ ಚಿತ್ರದ ನಾಯಕ. ದೀಪಾಶ್ರೀ ಗೌಡ ಚಿತ್ರದ ನಾಯಕಿ. ಪ್ರದೀಪ್ ಕ್ಯಾಮೆರಾ, ಕೀರ್ತನ್ ಸಂಗೀತ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.