ಗಣೇಶ ಹಬ್ಬದಂದು ತೆರೆಗೆ ಬರಲಿದೆ ಲಂಕೆ..!

Published : Sep 08, 2021, 05:07 PM IST
ಗಣೇಶ ಹಬ್ಬದಂದು ತೆರೆಗೆ ಬರಲಿದೆ ಲಂಕೆ..!

ಸಾರಾಂಶ

ಕೊರೋನಾ ಎರಡನೇ ಅಲೆ ನಂತರ ಚಿತ್ರಮಂದಿರಗಳಿಗೆ ಬರುತ್ತಿರುವ ಮೊದಲ ದೊಡ್ಡ ಸಿನಿಮಾ ‘ಲಂಕೆ’ ಸೆ. 10ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ

ಕೊರೋನಾ ಎರಡನೇ ಅಲೆ ನಂತರ ಚಿತ್ರಮಂದಿರಗಳಿಗೆ ಬರುತ್ತಿರುವ ಮೊದಲ ದೊಡ್ಡ ಸಿನಿಮಾ ‘ಲಂಕೆ’. ಲೂಸ್‌ಮಾದ ಯೋಗೀಶ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ರಾಮಪ್ರಸಾದ್ ನಿರ್ದೇಶನ ಮಾಡಿದ್ದು, ಸೆ. 10ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ತರುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಆಯಿತು.

ಕೃಷಿ ತಾಪಂಡ, ಕಾವ್ಯ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ‘ಚಿತ್ರದ ಆರಂಭದಿಂದಲೂ ಯಾವುದೇ ತೊಂದರೆ ಇಲ್ಲದೆ ಇಷ್ಟು ಅದ್ದೂರಿಯಾಗಿ ಸಿನಿಮಾ ಮೂಡಿ ಬರಲು ಕಾರಣ ನಿರ್ಮಾಪಕ ಪಟೇಲ್ ಶ್ರೀನಿವಾಸ್. ಈ ಚಿತ್ರದ ನಿರ್ಮಾಣದಲ್ಲಿ ಬೆನ್ನೆಲುಬಾಗಿ ನಿಂತ ಮತ್ತೊಬ್ಬರು ನನ್ನ ಪತ್ನಿ ಸುರೇಖ ರಾಮಪ್ರಸಾದ್. ಒಳ್ಳೆಯ ರೀತಿಯಲ್ಲಿ ಸಿನಿಮಾ ಮಾಡಿದ್ದೇವೆ. ಹಬ್ಬದ ದಿನ ಪ್ರೇಕ್ಷಕರ ಮುಂದೆ ಸಿನಿಮಾ ಮೂಡಿ ಬರುತ್ತಿದೆ. ಚಿತ್ರವನ್ನು ನೋಡಿ ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ’ ಎನ್ನುತ್ತಾರೆ ರಾಮಪ್ರಸಾದ್.

ಸೆ.17ಕ್ಕೆ ತೆರೆ ಮೇಲೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ

ನಟ ಲೂಸ್ ಮಾದ ಯೋಗೀಶ್ ಅವರು ಅವರ ತಂದೆ ನಿರ್ಮಾಣದ ಚಿತ್ರಕ್ಕೂ ಇಷ್ಟು ಪತ್ರಿಕಾಗೋಷ್ಟಿಗಳನ್ನು ಮಾಡಿರಲಿಲ್ಲ. ಮಾಡಿದ್ದರೂ ಅವರು ಪಾಲ್ಗೊಂಡಿರಲಿಲ್ಲವಂತೆ. ‘ನಮ್ಮ ‘ಲಂಕೆ’ ಸಿನಿಮಾ ಅದ್ದೂರಿಯಾಗಿ ಸಿನಿಮಾ ನಿರ್ಮಿಸುವ ಜತೆಗೆ ಅದ್ದೂರಿಯಾಗಿ ಪ್ರಚಾರ ಕೂಡ ಮಾಡುತ್ತಿದೆ. ಇದು ಚಿತ್ರಕ್ಕೆ ಉತ್ಸಾಹ ತುಂಬುವ ಕೆಲಸ. ಪ್ರೇಕ್ಷಕರಿಗೆ ನಮ್ಮ ಸಿನಿಮಾ ಇಷ್ಟವಾಗುತ್ತದೆಂಬ ಭರವಸೆ ಇದೆ’ ಎಂದು ಲೂಸ್‌ಮಾದ ಹೇಳಿಕೊಂಡರು.

‘ಗಣೇಶನ ಹಬ್ಬಕ್ಕೆ 200 ಚಿತ್ರಮಂದಿರಗಳಲ್ಲಿ ‘ಲಂಕೆ’ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಚಿತ್ರವನ್ನು ನೋಡಲಿ ಎಂಬುದು ನಮ್ಮ ಆಸೆ’ ಎಂದು ನಿರ್ಮಾಪಕರು ಇಬ್ಬರು ಹೇಳಿದರು. ಸಂಚಾರಿ ವಿಜಯ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಶೋಭ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್, ಮಿಥುನ್ ಗೌಡ, ಬೇಬಿ ಜನ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ