ಕಿಚ್ಚ ಸುದೀಪ್ 'ಪ್ರೇಮದ ಕಾದಂಬರಿ' ಫೋಟೋ ಪೋಸ್ಟ್‌ ಮಾಡಿದ 'ಎವರ್‌ಗ್ರೀನ್ ಬ್ಯೂಟಿ'ಗೆ ನೆಟ್ಟಿಗರ ಮಸ್ತ್ ರಿಯಾಕ್ಷನ್ಸ್!

Published : Aug 05, 2026, 02:44 PM IST
Sangeetha Anil

ಸಾರಾಂಶ

ವೈರಲ್ ಆಗಿರುವ  26 ವರ್ಷಗಳ ಹಿಂದಿನ ಈ ಫೋಟೋ ಸುದೀಪ್ ಅವರ ಪರಿಶ್ರಮದ ಹಾದಿಯನ್ನು ನೆನಪಿಸುವಂತಿದೆ. ಬಿಗ್ ಬಾಸ್ ಮೂಲಕ ಕಿರುತೆರೆಯನ್ನು ಆಳುತ್ತಿರುವ ಸುದೀಪ್, ಅಂದು ಸೀರಿಯಲ್ ಮೂಲಕವೇ ತಮ್ಮ ಪಯಣಕ್ಕೆ ಭದ್ರ ಬುನಾದಿ ಹಾಕಿದ್ದರು. ನಟಿ ಸಂಗೀತಾಗೆ ಬಂದಿರುವ ಕಾಮೆಂಟ್ಸ್ ಏನು ನೋಡಿ!

Kichcha Sudeepa and Sangeetha Photo Viral, Netizens Reactions to Know here: ಬಾದ್‌ಷಾ ಸುದೀಪ್ ಅವರ ಅಚ್ಚರಿಯ 'ಫ್ಲ್ಯಾಶ್‌ಬ್ಯಾಕ್'! ನಟಿ ಸಂಗೀತಾ ಪೋಸ್ಟ್‌ಗೆ ಬಂದ ಕಾಮೆಂಟ್ಸ್‌ ನೋಡಿ!

ಸ್ಯಾಂಡಲ್‌ವುಡ್‌ನ 'ಅಭಿನಯ ಚಕ್ರವರ್ತಿ' ಸೀರಿಯಲ್ ಬಗ್ಗೆ ಈಗ ಶುರುವಾದ ಚರ್ಚೆ!

ಸ್ಯಾಂಡಲ್‌ವುಡ್ 'ಅಭಿನಯ ಚಕ್ರವರ್ತಿ; ಖ್ಯಾತಿಯ ನಟ ಸುದೀಪ್ ಇಂದು ಜಗತ್ತೇ 'ಕಿಚ್ಚ ಸುದೀಪ್' (Kichcha Sudeep) ಎಂದು ಗುರುತಿಸುವ ನಟ. ಸುದೀಪ್ ಅಂದಾಕ್ಷಣ ನಮಗೆ ನೆನಪಾಗುವುದು ಅವರ ಗತ್ತಿನ ನಟನೆ, ವಿಶಿಷ್ಟ ಧ್ವನಿ ಮತ್ತು ಕಳೆದ ಹತ್ತು ವರ್ಷಗಳಿಂದ 'ಬಿಗ್ ಬಾಸ್' ವೇದಿಕೆಯನ್ನು ಅದ್ಭುತವಾಗಿ ನಡೆಸಿಕೊಡುತ್ತಿರುವ ಅವರ ಸ್ಟೈಲ್. ಆದರೆ, ಈ 'ಬಾದ್‌ಷಾ' ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಕೇವಲ ಬೆಳ್ಳಿ ತೆರೆಯಿಂದ ಮಾತ್ರವಲ್ಲ, ಕಿರುತೆರೆಯಿಂದಲೂ ಹೌದು ಎಂಬ ಸತ್ಯ ಅನೇಕರಿಗೆ ಇಂದಿಗೂ ಗೊತ್ತಿಲ್ಲ!

26 ವರ್ಷಗಳ ಹಿಂದಿನ ಆ 'ಪ್ರೇಮದ' ನೆನಪು!

ಹೌದು, ಸುದೀಪ್ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗುವ ಮೊದಲು ಕಿರುತೆರೆಯಲ್ಲಿ ನಟಿಸುವ ಮೂಲಕ ತಾವು 'ಎಲ್ಲಾ ಮಾಧ್ಯಮಕ್ಕೂ ಸೈ' ಎಂದು ಸಾಬೀತುಪಡಿಸಿದ್ದರು. ಸುಮಾರು 26 ವರ್ಷಗಳ ಹಿಂದೆ, ಅಂದರೆ ಸುದೀಪ್ ಅವರ ಕೆರಿಯರ್ ಆರಂಭದ ದಿನಗಳಲ್ಲಿ ಉದಯ ಟಿವಿಯಲ್ಲಿ 'ಪ್ರೇಮದ ಕಾದಂಬರಿ' ಎಂಬ ಜನಪ್ರಿಯ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಸೀರಿಯಲ್‌ನಲ್ಲಿ ಸುದೀಪ್ ಅವರು ನಾಯಕನಾಗಿ ಬಣ್ಣ ಹಚ್ಚಿದ್ದರು.

ಸಂಗೀತಾ ಅನಿಲ್ ಹಂಚಿಕೊಂಡ 'ಅಪರೂಪದ ಫೋಟೋ'!

ಈಗ ಈ ಹಳೆಯ ವಿಷಯ ಮತ್ತೆ ಮುನ್ನೆಲೆಗೆ ಬರಲು ಕಾರಣ ನಟಿ ಸಂಗೀತಾ ಅನಿಲ್. ಸದ್ಯ 'ಪ್ರೇಮ ಕಾವ್ಯ' ಧಾರಾವಾಹಿಯಲ್ಲಿ ಮಾದೇವನ ತಾಯಿ ಪಾತ್ರದ ಮೂಲಕ ಮನೆಮಾತಾಗಿರುವ ಸಂಗೀತಾ ಅವರು, ಅಂದು 'ಪ್ರೇಮದ ಕಾದಂಬರಿ'ಯಲ್ಲಿ ಸುದೀಪ್ ಅವರ ಜೊತೆ ನಟಿಸಿದ್ದರು. ಇತ್ತೀಚೆಗೆ ಅವರು ಸುದೀಪ್ ಜೊತೆಗಿನ 26 ವರ್ಷಗಳ ಹಳೆಯ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಅಕ್ಷರಶಃ ಫಿದಾ ಆಗಿದ್ದಾರೆ!

ನಟಿ ಸಂಗೀತಾ ಅವರು ಮಾಡಿರೋ ಪೋಸ್ಟ್‌ಗೆ ಬಹಳಷ್ಟು ಪ್ರತಿಕ್ರಿಯೆಗಳು ಬಂದಿವೆ. 'ಮೇಡಂ, ನೀವು ಅಗ ಅದೆಷ್ಟು ಚೆಂದ ಇದ್ರೋ ಅಷ್ಟೇ ಚೆಂದ' ಈಗ್ಲೂ ಇದ್ದೀರಾ' ಅಂತ ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಅವರು ಸುದೀಪ್‌ ಜೊತೆಗಿನ ಫೋಟೋ ಶೇರ್ ಮಾಡಿ ನನೆಪು ಹಂಚಿಕೊಂಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ, ಹೆಚ್ಚಿನ ಕಾಮೆಂಟ್‌ಗಳಲ್ಲಿ 26 ವರ್ಷಗಳಿಂದ ಹಾಗೇ ಇರುವ, ಅಂದರೆ ನಟಿ ಸಂಗೀತಾ ಅನಿಲ್ ಅವರು ತಮ್ಮ ಚೆಲುವನ್ನು ಕಾಪಾಡಿಕೊಂಡಿರುವ ಬಗ್ಗೆ, ಈಗಲೂ ನಟಿಯಾಗಿ ಸಕ್ರಿಯರಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು, ಫೋಟೋದಲ್ಲಿ ಸುದೀಪ್ ತುಂಬಾ ಯಂಗ್ ಆಗಿ, ಚಾರ್ಮಿಂಗ್ ಆಗಿ ಕಾಣಿಸುತ್ತಿದ್ದಾರೆ. ಸಂಗೀತಾ ಅನಿಲ್ ಅವರು ಈ ಫೋಟೋ ಹಂಚಿಕೊಳ್ಳುತ್ತಾ, ಆ ದಿನಗಳ ಶೂಟಿಂಗ್ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಅಂದು ಸುದೀಪ್ ಅವರಲ್ಲಿದ್ದ ಆ ನಟನಾ ಹಸಿವು ಮತ್ತು ಸರಳತೆ ಇಂದಿಗೂ ಹಾಗೆಯೇ ಇದೆ ಎನ್ನುವುದು ವಿಶೇಷ.

ಕಿರುತೆರೆಯಿಂದ ಗ್ಲೋಬಲ್ ಸ್ಟಾರ್‌ವರೆಗೆ!

'ಪ್ರೇಮದ ಕಾದಂಬರಿ' ಸುದೀಪ್ ನಟಿಸಿದ ಏಕೈಕ ಧಾರಾವಾಹಿ. ಅದಾದ ನಂತರ ಅವರು ಸಿನಿಮಾಗಳಲ್ಲಿ ಬ್ಯುಸಿಯಾದರು. 'ಹುಚ್ಚ' ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದ ಅವರು, ನಂತರ ಹಿಂತಿರುಗಿ ನೋಡಲೇ ಇಲ್ಲ. ಕಿರುತೆರೆಯ ಸಣ್ಣ ಪರದೆಯ ಮೇಲೆ ಮಿಂಚಿದ್ದ ಈ ಪ್ರತಿಭೆ, ಇಂದು 'ಈಗ', 'ವಿಕ್ರಾಂತ್ ರೋಣ', 'ಪೈಲ್ವಾನ್' ನಂತಹ ಸಿನಿಮಾಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಅಭಿಮಾನಿಗಳ ಹರ್ಷ:

ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಕಿಚ್ಚನ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. "ನಮ್ಮ ಕಿಚ್ಚ ಅಂದೂ ಹೀರೊ, ಇಂದೂ ಹೀರೊ", "ಸರಳತೆಯೇ ಸುದೀಪ್ ಅವರ ಯಶಸ್ಸಿನ ರಹಸ್ಯ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬಂದ ಒಬ್ಬ ಕಲಾವಿದ ಇಂದು ಇಡೀ ಚಿತ್ರರಂಗ ಆಳುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ಒಟ್ಟಿನಲ್ಲಿ, 26 ವರ್ಷಗಳ ಹಿಂದಿನ ಈ ಫೋಟೋ ಸುದೀಪ್ ಅವರ ಪರಿಶ್ರಮದ ಹಾದಿಯನ್ನು ನೆನಪಿಸುವಂತಿದೆ. ಬಿಗ್ ಬಾಸ್ ಮೂಲಕ ಕಿರುತೆರೆಯನ್ನು ಆಳುತ್ತಿರುವ ಸುದೀಪ್, ಅಂದು ಸೀರಿಯಲ್ ಮೂಲಕವೇ ತಮ್ಮ ಪಯಣಕ್ಕೆ ಭದ್ರ ಬುನಾದಿ ಹಾಕಿದ್ದರು ಎಂಬುದು ಈಗ ಇತಿಹಾಸ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೀರೋಗಳನ್ನು ಈಗ ಸಾಕುವುದೇ ಕಷ್ಟ': ಸಂಭಾವನೆ ಬಗ್ಗೆ ಈ ಕನ್ನಡದ ನಿರ್ಮಾಪಕರ ಖಡಕ್ ಮಾತು
ಹಿಟ್ ಕಾಂಬಿನೇಷನ್ ಮತ್ತೆ ಕಮ್‌ಬ್ಯಾಕ್: ‘ಅಮೆರಿಕಾ ಅಮೆರಿಕಾ 2’ಗೆ ಮನೋಮೂರ್ತಿ ಸಂಗೀತ