'ಹೀರೋಗಳನ್ನು ಈಗ ಸಾಕುವುದೇ ಕಷ್ಟ': ಸಂಭಾವನೆ ಬಗ್ಗೆ ಈ ಕನ್ನಡದ ನಿರ್ಮಾಪಕರ ಖಡಕ್ ಮಾತು

Published : Aug 04, 2026, 11:32 PM IST
NM Suresh

ಸಾರಾಂಶ

NM Suresh: ಹೀರೋಗಳ ಸಂಭಾವನೆ ಕಡಿಮೆ ಮಾಡಿಕೊಳ್ಳಿ ಅಂತ ಕೇಳೋದು ತಪ್ಪು ಎಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಮಾತಿಗೆ ನನ್ನ ವಿರೋಧ ಇದೆ ಎಂದರು ಎನ್‌.ಎಂ. ಸುರೇಶ್.

1. ಚಿತ್ರರಂಗ ನಿಂತಿರುವುದು ವರ್ಷಕ್ಕೆ ಬರೋ ಒಂದೆರಡು ದೊಡ್ಡ ಬಜೆಟ್ ಸಿನಿಮಾಗಳಿಂದಲ್ಲ. ಹೊಸಬರಿಂದ ಬರುವ ಸಣ್ಣ ಬಜೆಟ್‌ ಸಿನಿಮಾಗಳಿಂದ. ಹೀಗಾಗಿ ನಾವು ಹೊಸಬರನ್ನು ಬೆಳೆಸುವ ಕಡೆ ಹೆಚ್ಚು ಗಮನ ಕೊಡಬೇಕು.

2. ಹೊಸಬರ ಜೊತೆಗೆ ಸಿನಿಮಾ ಮಾಡಿದರೆ ಗೆಲ್ಲಬಹುದು ಎನ್ನುವುದಕ್ಕೆ ಟ್ರೆಂಡ್‌ ಸೆಟ್‌ ಮಾಡಿದ ನಿರ್ಮಾಪಕ ನಾನು. ‘ಎಕ್ಸ್‌ಕ್ಯೂಸ್‌ಮೀ’ ಚಿತ್ರದಿಂದ ‘ಚೆಲುವೆಯೇ ನಿನ್ನ ನೋಡಲು’ವರೆಗೂ ನನ್ನ ಪ್ರತಿ ಚಿತ್ರದಲ್ಲೂ ಹೊಸ ನಿರ್ದೇಶಕ, ನಟ- ನಟಿ, ತಂತ್ರತ್ರಜ್ಞರು ಚಿತ್ರರಂಗಕ್ಕೆ ಬಂದಿದ್ದಾರೆ. ಇದೇ ಕೆಲಸವನ್ನು ನಾನೂ ಮುಂದುವರಿಸುತ್ತೇನೆ. ಉಳಿದ ದೊಡ್ಡ ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು ಹೊಸಬರ ಜೊತೆಗೆ ಸಿನಿಮಾ ಮಾಡಲಿ. ಈ ಮಾತನ್ನು ನಾನು ನೇರವಾಗಿ ಕೆವಿಎನ್‌, ಹೊಂಬಾಳೆ ಫಿಲಮ್ಸ್‌ನವರಿಗೇ ಹೇಳುತ್ತಿದ್ದೇನೆ.

3. ರಮೇಶ್ ರೆಡ್ಡಿಯಂಥ ನಿರ್ಮಾಪಕರಿಗೆ ನಷ್ಟ ಆಗಿ, ತಾನು ಸಿನಿಮಾ ಮಾಡಲ್ಲ ಅಂತ ಹೇಳಿದಾಗ ನನಗೆ ನೋವಾಯಿತು. ಅಂಥ ನಿರ್ಮಾಪಕರನ್ನು ಉಳಿಸುವ ಕೆಲಸ ಮಾಡಬೇಕು.

4. ಥಿಯೇಟರ್‌ಗಳಿಗೆ ಕನ್ನಡ ಹೀರೋಗಳ ಸಿನಿಮಾಗಳಿಲ್ಲ. ನಮ್ಮೂರಿನ ಥಿಯೇಟರ್‌ಗಳು ಪರಭಾಷೆಯ ಪಾಲಾಗುತ್ತಿವೆ. ಇದು ನಿಲ್ಲಬೇಕು ಎಂದರೆ ದೊಡ್ಡ ತಾರೆಗಳು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು, ಹೊಸ ಹೀರೋಗಳ ಚಿತ್ರಗಳು ನಿರಂತರವಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗುತ್ತಿರಬೇಕು.

5. ನನ್ನನ್ನೂ ಸೇರಿದಂತೆ ಹಳೆ ನಿರ್ಮಾಪಕರಿಗೆ ಹೀರೋಗಳು ಕಾಲ್‌ಶೀಟ್‌ ಕೊಡಲಿ. ಖಂಡಿತಾ ಅವರ ಜೊತೆಗೆ ಸಿನಿಮಾ ಮಾಡುತ್ತೇವೆ. ಆದರೆ, 50, 100, 200 ಕೋಟಿ ಅಂತ ಬಂದರೆ ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಲಾಗದು. ಹೀರೋಗಳು ಹಿಂದಿನ ಗೆಲುವಿನ ಮೇಲೆ ಮುಂದಿನ ಚಿತ್ರಕ್ಕೆ ಸಂಭಾವನೆ ಕೇಳಲಿ. ಇತ್ತೀಚೆಗೆ ಬಂದ ‘ಕೆಡಿ’ ಹಾಗೂ ಸುದೀಪ್‌ ಅವರ ಸಿನಿಮಾನೂ ಸೇರಿ ದೊಡ್ಡ ಪ್ಯಾನ್‌ ಇಂಡಿಯಾ ಚಿತ್ರಗಳಲ್ಲಿ ಯಾವುದು ಗೆದ್ದಿದೆ ಹೇಳಿ? ಬನ್ನಿ, ಪಾಲುದಾರಿಕೆಯಲ್ಲಿ ಸಿನಿಮಾ ಮಾಡೋಣ.

6. ಹೀರೋಗಳ ಸಂಭಾವನೆ ಕಡಿಮೆ ಮಾಡಿಕೊಳ್ಳಿ ಅಂತ ಕೇಳೋದು ತಪ್ಪು ಎಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಮಾತಿಗೆ ನನ್ನ ವಿರೋಧ ಇದೆ. ನಿರ್ಮಾಪಕ ಇದ್ದರೇನೆ, ಚಿತ್ರರಂಗ. ಇನ್ನು ಸಂಭಾವನೆ ಬಿಟ್ಟು ಕೊಟ್ಟಿದ್ದೇನೆ ಎನ್ನುವ ಆ ಹೀರೋಗಳ ಸಿನಿಮಾಗಳು ಎಷ್ಟು ಹಿಟ್‌ ಆಗಿವೆ ಅಂತ ಹೇಳಿ. ಸಿನಿಮಾಗಿಂತ ಆ ಸಿನಿಮಾ ಹೀರೋ ಬಾಡಿಗಾರ್ಡ್‌, ಅಸಿಸ್ಟೆಂಟ್‌, ಹೋಟೆಲ್‌... ಹೀಗೆ ಅವರನ್ನು ಸಾಕೋದೇ ದೊಡ್ಡ ಭಾರ ಆಗಿದೆ.

ಥಿಯೇಟರ್‌ಗೆ ಯಾಕೆ ಬರ್ತಾನೆ?

7. ಹೀರೋಗಳು ಕಿರುತೆರೆಗೆ ಹೋಗಿ ಕೂರೋದನ್ನು ಮೊದಲು ಬಿಡಬೇಕು. ದಿನಬೆಳಗಾದರೆ ಟೀವಿ, ಸೋಷಿಯಲ್ ಮೀಡಿಯಾ, ಓಟಿಟಿಯಲ್ಲೋ ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮನ್ನು ನೋಡಲು ಪ್ರೇಕ್ಷಕ ಥಿಯೇಟರ್‌ಗೆ ಯಾಕೆ ಬರ್ತಾನೆ?

8. ದರ್ಶನ್‌ ಬಂದರೆ ಚಿತ್ರರಂಗದ ಲೈಮ್ ಲೈಟ್‌ ಹೆಚ್ಚು ಪ್ರಕಾಶಿಸುತ್ತದೆ. ಅವರ ಸಿನಿಮಾಗಳು ಮರುಬಿಡುಗಡೆ ಆಗುತ್ತಿದ್ದು, ಹೌಸ್‌ಫುಲ್‌ ಓಡುತ್ತಿವೆ. ಅಷ್ಟು ದೊಡ್ಡ ಮಾಸ್‌ ಹೀರೋ ಅವರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹಿಟ್ ಕಾಂಬಿನೇಷನ್ ಮತ್ತೆ ಕಮ್‌ಬ್ಯಾಕ್: ‘ಅಮೆರಿಕಾ ಅಮೆರಿಕಾ 2’ಗೆ ಮನೋಮೂರ್ತಿ ಸಂಗೀತ
Unbelievable Record: ಊಹಿಸಲಾಗದ ಹೊಸ ದಾಖಲೆ ಬರೆದ 'ರಾಮಾಯಣ'.. ಯಶ್ ಚಿತ್ರದ ಈ ಸಾಧನೆ ಎಂಥದ್ದು ಗೊತ್ತಾ?