
ಪರಪ್ಪನ ಅಗ್ರಹಾರ ಖೈದಿಗಳ ‘ಅದನ್ನು’ ಮಾಡಬೇಕು ದರ್ಶನ್
ಸವಾಲು ಎದುರಿಸೋದು ನಟ ದರ್ಶನ್ ತೂಗುದೀಪಗೆ (Darshan Thoogudeepa) ಹಳೇ ಅಭ್ಯಾಸ. ಅದು ಸಿನಿಮಾ ರಂಗ ಆಗಿರಲಿ, ವೈಯಕ್ತಿಕ ಬದುಕೆ ಇರಲಿ. ಬಂಡೆಯಂತಾ ಸವಾಲುಗಳನ್ನ ದಾಸ ಕುಟ್ಟಿ ಪುಡಿ ಮಾಡಿದ್ದಾರೆ. ಈಗ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರೋದಕ್ಕೆ ಹೆಣಗಾಡುತ್ತಿರೋ ನಟ ದರ್ಶನ್ ಗೆ ಜೈಲಿನಲ್ಲೇ ಚಾಲೆಂಜ್ ಒಂದು ಎದುರಾಗಿದೆ. ಆ ಬಗ್ಗೆ ನೋಡೋಣ ಬನ್ನಿ..
ಪರಪ್ಪನ ಅಗ್ರಹಾರ ಅತಿಥಿ ದರ್ಶನ್‌ಗೆ ದೊಡ್ಡ ಚಾಲೆಂಜ್; ಜೈಲಲ್ಲಿದ್ದುಕೊಂಡೇ ಸವಾಲು ಎದುರಿಸಬೇಕಿದ ದಾಸ..!
ಸ್ಯಾಂಡಲ್ವುಡ್ನ ಸ್ಟಾರ್ ಆಗಿದ್ದ ನಟ ದರ್ಶನ್ ಪರಪ್ಪನ ಅಗ್ರಹಾರದ ಖಾಯಂ ಸದಸ್ಯ ಆಗಿದ್ದಾರೆ. ದರ್ಶನ್ ಈಗಾಗ್ಲೆ ಮೂರು ಭಾರಿ ಜೈಲು ಸೇರಾಗಿದೆ. ಪರಪ್ಪನ ಅಗ್ರಹಾರದ ಇಂಚಿಂಚೂ ಮಾಹಿತಿ ದಾಸನಿಗಿದೆ. ಅಲ್ಲಿನ ರೀತಿ ರಿವಾಜುಗಳನ್ನ ದರ್ಶನ್ ಚೆನ್ನಾಗೆ ಅರಿತುಕೊಂಡಿದ್ದಾರೆ. ಇಂತದ್ರಲ್ಲಿ ದಚ್ಚು ಈಗ ಜೈಲಿನಲ್ಲಿ ಹೊಸ ಸವಾಲೊಂದನ್ನ ಎದುರಿಸಬೇಕಿದೆ.
ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರೋದೇ ಒಂದು ಸವಾಲು.. ಅಲ್ಲಿನ ವಾತಾವರಣಕ್ಕೆ ಅಡ್ಜೆಸ್ಟ್ ಆಗೋದಕ್ಕೆ ದರ್ಶನ್ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಐಶಾರಾಮಿ ಬದುಕು ಎ.ಸಿಯಲ್ಲೇ ಓಡಾಡುತ್ತಿದ್ದ ದರ್ಶನ್‌ಗೆ ಬಿರು ಬಿಸಿಲಿನಲ್ಲಿ ಶಕೆಯಲ್ಲಿ ಜೈಲು ಕಂಬಿ ಏಣಿಸುತ್ತಾ ಕೂರಬೇಕಿದೆ. ಇಂತದ್ರಲ್ಲಿ ದರ್ಶನ್‌ಗೆ ಈಗ ಯೋಗ ಮಾಡೋ ಸವಾಲು ಎದುರಾಗಿದೆ. ಅಂತರಾಷ್ಟ್ರೀಯ ಯೋಗದಿನದಂದು ಇಡೀ ಪರಪ್ಪನ ಅಗ್ರಹಾರ ಜೈಲು ಖೈದಿಗಳು ಯೋಗ ಮಾಡಬೇಕು ಅಂತ ಕೇಂದ್ರ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ಆದೇಶಿಸಿದ್ದಾರೆ.
ನಟ ದರ್ಶನ್ ಜಿಮ್ನಲ್ಲಿ ವರ್ಕೌಟ್ ಮಾಡೋದ್ರಲ್ಲಿ ಹೆಸರುವಾಸಿ. ದಿನಕ್ಕೆ ಎರಡು ಗಂಟೆ ಜಿಮ್ನಲ್ಲೇ ಕಳೆಯೋ ಆರಡಿ ಎತ್ತರದ ದರ್ಶನ್ ಕಟ್ಟು ಮಸ್ತ್ ಆಗಿರೋ ದೇಶವನ್ನ ಹುರಿಗೊಳಿಸಿಟ್ಟುಕೊಳ್ತಾರೆ. ಈ ಯೋಗ ಮಾಡೋದೆಲ್ಲಾ ದಾಸನಿಗೆ ಆಗಿ ಬರೋದೇ ಇಲ್ಲ ದರ್ಶನ್ ಇತಿಹಾಸದಲ್ಲೇ ಯೋಗ ಮಾಡಿದ ಉದಾಹರಣೆ ಇಲ್ಲವೇ ಇಲ್ಲ. ಅಂತದ್ರಲ್ಲಿ ದಚ್ಚು ಈಗ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಇದೇ ತಿಂಗಳು 21ನೇ ತಾರೀಖು ಯೋಗ ಮಾಡೋ ಮೂಲಕ ಆಚರಿಸಬೇಕಿದೆ.
ಜೈಲಿನಲ್ಲಿರೋ ಕೈದಿಗಳಿಗೆ ಯೋಗ ಅನ್ನೋನು ಮುಲಾಮು ಇದ್ದಂಗೆ. ಯಾಕಂದ್ರೆ ಜೈಲು ಸೇರಿದ ಮೇಲೆ ಮಾನಸಿಕವಾಗಿ ಕುಗ್ಗಿ ಹೋಗೋದು ಇದೆ. ಇದರಿಂದ ಹೊರಗೆ ಬರೋದಕ್ಕೆ ಯೋಗ ತುಂಬಾ ಮುಖ್ಯ. ಹೀಗಾಗಿ ಖೈದಿಗಳ ಆರೋಗ್ಯದ ದೃಷ್ಟಿಯಿಂದ ಮೆಂಟಲಿ ಸ್ಟ್ರಾಂಗ್ ಆಗಲಿ ಅನ್ನೋ ಕಾರಣಕ್ಕೆ ಯೋಗ ಮಾಡೋದನ್ನ ಅಭ್ಯಾಸ ಮಾಡಿಸೋ ಕೆಲಸ ಆಗ್ತಿದೆ. ಈ ಯೋಗದಲ್ಲಿ ದರ್ಶನ್ ಭಾಗಿ ಆಗುತ್ತಾರಾ ಕಾದು ನೋಡಬೇಕು..
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.