
ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ (Ramya)ಅವರು ಇಂದು (06 March 2025) ಕಮರ್ಷಿಯಲ್ ಕೋರ್ಟ್ ಗೆ ಬಂದಿದ್ದಾರೆ. ಹಾಸ್ಟೆಲ್ ಗೆ ಹುಡುಗರು ಬೇಕಾಗಿದ್ದಾರೆ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ, ಕಮರ್ಷಿಯಲ್ ಕೋರ್ಟ್ ಗೆ ನಟಿ ರಮ್ಯಾ ಆಗಮಿಸಿದ್ದಾರೆ. ಕೋರ್ಟ್ ಗೆ ದಾಖಲೆಗಳನ್ನು ಸಲ್ಲಿಸಲು ಆಗಮಿಸಿದ ರಮ್ಯಾ, ವಕೀಲರ ಸಮೇತ ಕಮರ್ಷಿಯಲ್ ಕೋರ್ಟ್ ಗೆ ಆಗಮಿಸಿದ್ದಾರೆ.
ಹಾಸ್ಟೆಲ್ ಗೆ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಅನುಮತಿ ಇಲ್ಲದೆ ಪ್ರಚಾರಕ್ಕೆ ನನ್ನ ಪೋಟೋ ಬಳಸಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ದರು ರಮ್ಯಾ. ಈ ಬಗ್ಗೆ ನಟಿ ರಮ್ಯಾ ಹೇಳಿಕೆ ನೀಡಿದ್ದಾರೆ. 'ಹಾಸ್ಟೆಲ್ ಹುಡುಗರು ಸಿನಿಮಾ ವಿವಾದದ ವಿಚಾರಕ್ಕೆ ಕೋರ್ಟ್ ಗೆ ಬಂದೆ, ಟ್ರಯಲ್ ನಡೀತಾ ಇದೆ, ಮಾರ್ಚ್ 19 ಕ್ಕೆ ಮತ್ತೆ ಟ್ರಯಲ್ ಇದೆ. ಈಗ ಕೋರ್ಟ್ ಗೆ ದಾಖಲೆ ಕೊಡಲು ಬಂದಿದ್ದೆ. ನನಗೆ ಸಿನಿಮಾ ತಂಡ ಏನು ಮಾತು ಕೊಟ್ಡಿದ್ರೊ ಅದನ್ನ ವಾಪಸ್ ಕೊಡಲಿ' ಎಂದಿದ್ದಾರೆ ನಟಿ ರಮ್ಯಾ.
ರಮ್ಯಾ ಯಾಕ್ ಹಿಂಗ್ ಆಡ್ತಿದಾರೆ? ಸ್ಯಾಂಡಲ್‌ವುಡ್ ಕ್ವೀನ್ 'ಚೆಸ್' ಆಡ್ತಿದಾರಾ ಅಂತಿದಾರಲ್ರೀ..!
ಇನ್ನು ಇದೇ ವೇಳೆ ನಟಿ ರಮ್ಯಾ ಅವರು ಡಿಕೆ ಶಿವಕುಮಾರ್ ಆಡಿದ್ದ ನಟ್ಟು-ಬೋಲ್ಟು ವಿವಾದದ ಬಗ್ಗೆಯೂ ಕೇಳಿದ ಪ್ರಶ್ನೆಗೆ ಸಂಬಂಧಿಸಿ ಮಾತನ್ನಾಡಿದ್ದಾರೆ. ಡಿಕೆಶಿ ಹೇಳಿಕೆ ಬಗ್ಗೆ ನಟಿ ರಮ್ಯಾ ರಿಯಾಕ್ಷನ್ ಹೇಗಿದೆ ಗೊತ್ತಾ? ಇಲ್ನೋಡಿ.. 'ಅವರು ಹೇಳಿದ್ರಲ್ಲಿ ಏನು ತಪ್ಪಿದೆ..? ಅವರು ಹೇಳಿದ ರೀತಿ ಕೆಲವರಿಗೆ ಇಷ್ಟ ಆಗದೇ ಇರಬಹುದು..
ಅಕಾಡೆಮಿ ಯಾರನ್ನ ಕರೆದಿದ್ದಾರೆ ಯಾರನ್ನ ಕರೆದಿಲ್ಲ ಅಂತ ನನಗೆ ಗೊತ್ತಿಲ್ಲ.. ಸಾಧುಕೋಕಿಲಾ ಅವರೇ ಈ ವಿಷಯಕ್ಕೆ ಉತ್ತರಿಸಬೇಕು... ನನಗೆ ಕರೆದಿದ್ದಾರೆ, ಇವತ್ತು ನಾನು ಹೋಗುತ್ತಿದ್ದೇನೆ. ಈ ನಟ್ಟು ಬೋಲ್ಟು ಹೇಳಿಕೆ ಬಗ್ಗೆ ಸ್ವತಃ ಡಿಕೆಶಿ ಅವರೇ ಕ್ಲಾರಿಫೈ ಮಾಡಿದ್ದಾರೆ, ನಾನು ಹೇಳೋದೇನೂ ಇಲ್ಲ.. ಇದನ್ನ ಇಲ್ಲಿಗೆ ಬಿಟ್ಟುಬಿಡಿ..' ಎಂದಿದ್ದಾರೆ ನಟಿ ರಮ್ಯಾ.
ಶೂಟಿಂಗ್ ಅಖಾಡಕ್ಕೆ ನಟ ದರ್ಶನ್ ಮತ್ತೆ ಎಂಟ್ರಿ, ಚಿತ್ರೀಕರಣಕ್ಕೆ ಕೌಂಟ್‌ಡೌನ್..!
ಇನ್ನು ಕನ್ನಡ ಸಿನಿಮಾ ಟಿಕೆಟ್ ದರ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಕೂಡ ನಟಿ ರಮ್ಯಾ ಅವರು ಉತ್ತರಿಸಿದ್ದಾರೆ. '
ಎಲ್ಲರೂ ಸಿನಿಮಾ ನೋಡಬೇಕು ಅಂದ್ರೆ ಟೆಕೆಟ್ ದರ ಕಡಿಮೆ ಇರಬೇಕು...' ಎಂದಷ್ಟೇ ಉತ್ತರಿಸಿದ್ದಾರೆ ರಮ್ಯಾ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್ 'ಪದ್ಮಾವತಿ' ಡಿಕೆಶಿ ನಟ್ಟು-ಬೋಲ್ಟು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.