
ರಮ್ಯಾ ಮ್ಯಾಟರ್.. ಭಾರೀ ಕುತೂಹಲ!
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ (Sandalwood Queen Ramya) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯಾ ಸಿನಿರಂಗದಿಂದಲೂ, ಪಾಲಿಟಿಕ್ಸ್ನಿಂದಲೂ ದೂರವಾಗಿ ವರ್ಷಗಳೇ ಕಳೀತಾ ಬಂದವು. ರಮ್ಯಾ ಸೆಕೆಂಡ್ ಇನ್ನಿಂಗ್ಸ್ ಯಾವಾಗ ಅನ್ನೋ ಪ್ರಶ್ನೆ ಆಗಾಗ ಕೇಳಿಬರ್ತಾನೇ ಇರುತ್ತೆ. ಆ ಪ್ರಶ್ನೆಗೀಗ ಖುದ್ದು ರಮ್ಯಾ ಉತ್ತರ ಕೊಟ್ಟಿದ್ದಾರೆ.
ಯೆಸ್ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೋಹಕತಾರೆ 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ರಮ್ಯಾ ಮುಂದಿನ ಒಂದು ದಶಕ ಕನ್ನಡದ ನಂ.1 ನಟಿಮಣಿಯಾಗಿದ್ರು.
2013ರಲ್ಲಿ ರಾಜಕೀಯಕ್ಕೆ ಕಾಲಿಟ್ಟ ರಮ್ಯಾ, ಅದೇ ವರ್ಷ ಮಂಡ್ಯ ಸಂಸದೆಯಾಗಿ ರಾಷ್ಟ್ರರಾಜಕಾರಣಕ್ಕೆ ಕಾಲಿಟ್ಟಿದ್ರು. ಆದರೆ ಅದರ ಮರುವರ್ಷ ನಡೆದ ಚುನಾವಣೆಯಲ್ಲಿ ಸೋತ ರಮ್ಯಾ, ಒಂದಿಷ್ಟು ಕಾಲ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಜವಾಬ್ದಾರಿ ಹೊತ್ತಿದ್ರು. ಇದೀಗ ಕೆಲ ವರ್ಷಗಳಿಂದ ರಮ್ಯಾ ರಾಜಕೀಯ, ಸಿನಿಮಾ ಎರಡರಿಂದಲೂ ದೂರ ಆಗಿದ್ದಾರೆ.
ಹೌದು ರಮ್ಯಾ ಮತ್ತೆ ಸಿನಿಮಾ ಮಾಡಬೇಕು ಅನ್ನೋದು ಅಭಿಮಾನಿಗಳ ದೊಡ್ಡ ಕನಸು. ಆದ್ರೆ ಅದ್ಯಾಕೋ ರಮ್ಯಾ ಸೆಕೆಂಡ್ ಇನ್ನಿಂಗ್ಸ್ ಶುರುವಾಗ್ತಿಲ್ಲ. ಎರಡು ವರ್ಷದ ಹಿಂದೆ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದಲ್ಲಿ ನಟಿಸಬೇಕಿತ್ತು. ಮುಹೂರ್ತದಲ್ಲೂ ರಮ್ಯಾ ಭಾಗಿಯಾಗಿದ್ರು. ಆದ್ರೆ ಅದ್ಯಾಕೋ ಆ ಚಿತ್ರದಿಂದ ಹೊರಬಂದ್ರು. ಆ ಚಿತ್ರವೂ ಹೊರಬರ್ತಾ ಇಲ್ಲ.
ಇನ್ನೂ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿ, ನಿರ್ಮಾಣದ ಚಿತ್ರದಲ್ಲಿ ನಟಿಸ್ತಿನಿ ಅಂತ ರಮ್ಯಾ ಘೋಷಣೆ ಮಾಡಿದ್ರು. ನಿರ್ಮಾಣ ಏನೋ ಮಾಡಿದ್ರು.. ಆಧ್ರೆ ನಟನೆ ಮಾಡಲಿಲ್ಲ. ಸೋ ರಮ್ಯಾ ಸೆಕೆಂಡ್ ಇನ್ನಿಂಗ್ಸ್ ಯಾವಾಗ ಅಂತ ಕೇಳಿದ್ರೆ ಖುದ್ದು ರಮ್ಯಾ ಹೇಳೋದು ಹೀಗೆ..
ಕಥೆ.. ಒಂದು ಆಯ್ಕೆ.. ರಮ್ಯಾ ಗುಡ್ ನ್ಯೂಸ್..!
ಹೌದು ರಮ್ಯಾ ಇತ್ತೀಚಿಗೆ ಬರೊಬ್ಬರಿ 40 ಕಥೆ ಕೇಳಿದ್ದಾರಂತೆ. ಅದ್ರಲ್ಲಿ ಒಂದು ರಮ್ಯಾಗೆ ಇಷ್ಟವಾಗಿದ್ದು ಸದ್ಯದಲ್ಲೇ ಬಣ್ಣ ಹಚ್ತಿನಿ ಅನ್ನೋ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಸೋ, ಸದ್ಯದಲ್ಲೇ ಒಬ್ಬ ಅನುಭವಿ ನಿರ್ದೇಶಕರ ಸಿನಿಮಾದಲ್ಲಿ ರಮ್ಯಾ ನಟಿಸೋದು ಖಚಿತವಾಗಿದೆ. ಇನ್ನೂ ಫ್ಯಾನ್ಸ್‌ಗೆ ಮತ್ತೊಂದು ಖುಷಿ ವಿಷ್ಯ ಅಂದ್ರೆ ದಶಕಗಳ ಹಿಂದೆ ರಮ್ಯಾ-ಉಪೇಂದ್ರ ನಟಿಸಿದ್ದ ರಕ್ತಕಾಶ್ಮೀರ ಚಿತ್ರ ಈಗ ರಿಲೀಸ್ ಆಗ್ತಾ ಇದೆ.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಚೆನ್ನಭೈರಾದೇವಿ ಸ್ಕ್ರಿಪ್ಟ್ ಕೇಳೋದಕ್ಕೂ ಸಜ್ಜಾಗಿದ್ದೀನಿ ಅಂದಿರೋ ರಮ್ಯಾ, ಸೆಕೆಂಡ್ ಇನ್ನಿಂಗ್ಸ್‌ಗೆ ಸಜ್ಜಾಗ್ತಾ ಇದ್ದಾರೆ. ಇನ್ನೂ ದರ್ಶನ್ ಅಭಿಮಾನಿಗಳ ಜೊತೆಗಿನ ಜಟಾಪಟಿ ಬಗ್ಗೆ ಕೂಡ ಮಾತನಾಡಿದ್ದಾರೆ. ರಮ್ಯಾಗೆ ಕಾಮೆಂಟ್ ಮಾಡಿದ್ದ ಡಿ ಫ್ಯಾನ್ಸ್ ಜೈಲಿಗೆ ಹೋಗಿ ಜಾಮೀನು ಪಡೆದು ಬಂದಿದ್ದಾರೆ, ಅವರನ್ನ ನಾನು ಕ್ಷಮಿಸಿದ್ದೀನಿ ಅಂತಾರೆ ರಮ್ಯಾ.
ಹೌದು ಇದು ಎಲ್ಲರಿಗೂ ಒಂದು ಪಾಠ ಆಗಲಿ ಅಂದಿದ್ದಾರೆ ರಮ್ಯಾ. ಜೊತೆಗೆ ದರ್ಶನ್ ನಟನೆಯ ಡೆವಿಲ್ ಬರ್ತಾ ಇದೆ. ಅವರಿಗೂ ಒಳ್ಳೆದಾಗಲಿ ಅಂದಿದ್ದಾರೆ. ಒಟ್ನಲ್ಲಿ ಹುಟ್ಟುಹಬ್ಬದ ಸಮಯದಲ್ಲಿ ಮೋಹಕತಾರೆ ಒಂದು ಖುಷಿ ವಿಷ್ಯ ಕೊಟ್ಟಿದ್ದಾರೆ. ಸೋ ಕ್ವೀನ್ ಫ್ಯಾನ್ಸ್ ಖುಷ್ ಆಗಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.