ತಂಗಿ ಶಿಮನ್ ಮಂದಣ್ಣ ಬಗ್ಗೆ ರಶ್ಮಿಕಾ ಹೇಳಿರೋ ಆ ಮಾತು ಅಷ್ಟೊಂದು ವೈರಲ್ ಆಗ್ತಿರೋದ್ಯಾಕೆ?

Published : Nov 28, 2025, 12:43 PM IST
Rashmika Mandanna

ಸಾರಾಂಶ

ಸದ್ಯಕ್ಕೆ ಹೆಚ್ಚಾಗಿ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಅವರು ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಸಕ್ರಿಯರಾಗಿಲ್ಲ. ಇತ್ತೀಚೆಗೆ ಟಾಲಿವುಡ್ ನಟ ವಿಜಯ್‌ ದೇವರಕೊಂಡ ಜೊತೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ವರದಿಯಾಗಿಸಾಕಷ್ಟು ವೈರಲ್ ಆಗಿದೆ.

ತಂಗಿ ಬಗ್ಗೆ ರಶ್ಮಿಕಾ ಮಾತು ವೈರಲ್!

ಕನ್ನಡ ಮೂಲದ ನಟಿ, ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅದೇನೇ ಮಾತನ್ನಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತದೆ. ಈ ಮೊದಲೊಮ್ಮೆ ಅವರು ತಮ್ಮ ತಂಗಿಯ ಬಗ್ಗೆ ಮಾತನ್ನಾಡಿದ್ದು ಭಾರೀ ವೈರಲ್ ಆಗಿತ್ತು. ಅದ್ಯಾಕೋ ಗೊತ್ತಿಲ್ಲ, ರಶ್ಮಿಕಾ ಅದ್ಯಾವತ್ತೋ ಸಹೋದರಿ ಬಗ್ಗೆ ಆಡಿರೋ ಮಾತು ಈಗ ಮತ್ತೆ ವೈರಲ್ ಆಗುತ್ತಿದೆ. ಹಾಗಿದ್ದರೆ ರಶ್ಮಿಕಾ ಮಂದಣ್ಣ ಅವರು ತಮ್ಮ ತಂಗಿಯ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..

ನನ್ನ ತಂಗಿಗೆ ಯಾವುದೇ ಸೌಲಭ್ಯ ಸಿಗಬಾರದು!

'ನನಗೆ 10 ವರ್ಷದ ತಂಗಿ ಇದ್ದಾಳೆ.. ನನಗೂ ಅವಳಿಗೂ ವಯಸ್ಸಿನಲ್ಲಿ 16-17 ವರ್ಷಗಳ ಅಂತರವಿದೆ. ನನಗೆ ನನ್ನ ತಂಗಿ ಅಂದ್ರೆ ತುಂಬಾ ಇಷ್ಟ. ಆದರೆ ನನ್ನ ತಂಗಿಗೆ ಯಾವುದೇ ಸೌಲಭ್ಯಗಳನ್ನು ಸುಲಭವಾಗಿ ಕೊಡಬಾರದು.. ಏಕೆಂದರೆ ನನ್ನ ತಂದೆ ತಾಯಿ ನನ್ನನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸಿದ್ದರು, ಹಾಗೆ ಕಷ್ಟ ಪಟ್ಟು ಬೆಳೆದಿದಕ್ಕೆ ನಾನು ಈ ಸ್ಥಾನದಲ್ಲಿ ಬೆಳೆಯಲು ಸಾಧ್ಯವಾಗಿದ್ದು.. ಅವಳಿಗೆ ಈಗ ಎಲ್ಲವೂ ಸುಲಭವಾಗಿಯೇ ಸಿಗುವಂತಿದೆ. ಆದರೆ, ಅವಳಿಗೆ ಹಾಗೆ ಬೇಸಿಕ್ ಬಿಟ್ಟು ಎಲ್ಲವೂ ಸಿಗಬಾರದು. ಅವಳೂ ಕೂಡ ದೊಡ್ಡ ಸಾಧನೆ ಮಾಡಬೇಕಲು' ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಹೌದು, ನಟಿ ರಶ್ಮಿಕಾ ಮಂದಣ್ಣ ಸಾಧನೆ ಚಿಕ್ಕದೇನಲ್ಲ. ಕನ್ನಡ ಸಿನಿಮಾ 'ಕಿರಿಕ್ ಪಾರ್ಟಿ' ಮೂಲಕ ಸಿನಿಮಾರಂಗದಲ್ಲಿ ಹೆಸರು ಮಾಡಿದ ನಟಿ ರಶ್ಮಿಕಾ ಮಂದಣ್ಣ, ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ಕನ್ನಡದಲ್ಲಿ 3-4 ಸಿನಿಮಾ ಮಾಡುತ್ತಿದ್ದಂತೆ ತೆಲುಗು ಸಿನಿಮಾರಂಗಕ್ಕೆ ಜಿಗಿದ ನಟಿ ರಶ್ಮಿಕಾ ಅಲ್ಲಿ 'ಗೀತ ಗೋವಿಂದಂ' ಸಿನಿಮಾ ಮೂಲಕ ಜನಮೆಚ್ಚುಗೆ ಪಡೆದರು. ಅಷ್ಟೇ ಅಲ್ಲ, ನಟ ವಿಜಯ್ ದೇವರಕೊಂಡ ಜತೆ ಸ್ನೇಹ ಕೂಡ ಆಯ್ತು. ಬಳಿಕ, ತಮಿಳು, ಮಲಯಾಳಂ ಹಾಗೂ ಬಾಲಿವುಡ್ ಸಿನಿಮಾರಂಗದಲ್ಲಿ ಬೆಳೆದರು ನಟಿ ರಶ್ಮಿಕಾ ಮಂದಣ್ಣ.

ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಕೆಲಸ!

ಸದ್ಯಕ್ಕೆ ಹೆಚ್ಚಾಗಿ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಅವರು ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಸಕ್ರಿಯರಾಗಿಲ್ಲ. ಇತ್ತೀಚೆಗೆ ಟಾಲಿವುಡ್ ನಟ ವಿಜಯ್‌ ದೇವರಕೊಂಡ ಜೊತೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ವರದಿಯಾಗಿ ಅದೀಗ ಸಾಕಷ್ಟು ವೈರಲ್ ನ್ಯೂಸ್ ಎಂಬಂತಾಗಿದೆ. ಸಿಕ್ಕ ಮಾಹಿತಿ ಪ್ರಕಾರ, ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ಉದಯಪುರದಲ್ಲಿ ಫೆಬ್ರವರಿ 26ರಂದು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದೆ. ಅವೆಲ್ಲವನ್ನೂ ಕಣ್ತುಂಬಿಕೊಳ್ಳಲು ಇನ್ನೂ ಸಾಕಷ್ಟು ಕಾಲ ಕಾಯಬೇಕಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ