ಎರಡು ದಿನಗಳ ಕಾಲ ಗೋವಾಗೆ ತೆರಳಿದ್ದ ನಿರ್ಮಾಪಕರು ಅಲ್ಲಿ ಪಾರ್ಟಿ ಮಾಡಿ, ಆ ವೇಳೆ ರಂಪಾಟ ಮಾಡಿಕೊಂಡಿದ್ದಾರೆ. ನಿರ್ಮಾಪಕರಲ್ಲಿ ಒಬ್ಬರಾದ ಎ ಗಣೇಶ್ ತಲೆಗೆ ಪೆಟ್ಟು ಬಿದ್ದಿದೆ. ಹೀಗಾಗಿ 'ಬಸ್'ನಲ್ಲಿ ತೆರಳಿದ್ದ ಗಣೇಶ್..
ಸ್ಯಾಂಡಲ್‌ವುಡ್ ನಿರ್ಮಾಪಕರ ನಡುವೆ ಗೋವಾದಲ್ಲಿ ಗಲಾಟೆ ನಡೆದಿದೆ. ಟೂರ್‌ಗೆ ಹೋಗಿದ್ದ ಕೆಲವು ನಿರ್ಮಾಪಕರಲ್ಲಿ ನಡೆದ ಗಲಾಟೆ ಹಲ್ಲೆ ಮಾಡೋ ಹಂತಕ್ಕೆ ಹೋಗಿತ್ತು. ಎಂಜಾಯ್ ಮಾಡೋಕೆ ಹೋಗಿ ಅಲ್ಲಿ ಗೋವಾದಲ್ಲಿ ಶತ್ರುಗಳಂತೆ ನಿರ್ಮಾಪಕರು ಕೆಲವು ಪ್ರೊಡ್ಯೂಸರ್ಸ್ ಬಡಿದಾಡಿಕೊಂಡಿದ್ದಾರೆ. ಗೋವಾದ 'ಹಿಬೀಸ್ ರೆಸಾರ್ಟ್'ನಲ್ಲಿ ನಿರ್ಮಾಪಕ ಎ ಗಣೇಶ್, ರಥಾವರ ಮಂಜುನಾಥ್ ಹಾಗೆ ಸತೀಶ್ ಆರ್ಯ ನಡುವೆ ಗಲಾಟೆ ನಡೆದಿದೆ. ಮೆ 27 ರಂದು ಗೋವಾಗೆ ಪ್ರವಾಸ ಹೋಗಿದ್ದ ಫಿಲಂ ಚೇಂಬರ್ ನಿಯೋಗ ಹಾಗು ನಿರ್ಮಾಪಕರ ಸಂಘ ಗೋವಾದಲ್ಲಿ ಬೀಡುಬಿಟ್ಟಿತ್ತು.
ಹಿಮಾಲಯಕ್ಕೆ ಹೊರಟ ರಜನಿಕಾಂತ್ ಮಾಧ್ಯಮಕ್ಕೆ ಹೇಳಿದ್ದೇನು? ಅಚ್ಚರಿ ಹೇಳಿಕೆ ವೈರಲ್!
ಎರಡು ದಿನಗಳ ಕಾಲ ಗೋವಾಗೆ ತೆರಳಿದ್ದ ನಿರ್ಮಾಪಕರು ಅಲ್ಲಿ ಪಾರ್ಟಿ ಮಾಡಿ, ಆ ವೇಳೆ ರಂಪಾಟ ಮಾಡಿಕೊಂಡಿದ್ದಾರೆ. ನಿರ್ಮಾಪಕರಲ್ಲಿ ಒಬ್ಬರಾದ ಎ ಗಣೇಶ್ ತಲೆಗೆ ಪೆಟ್ಟು ಬಿದ್ದಿದೆ. ಹೀಗಾಗಿ 'ಬಸ್'ನಲ್ಲಿ ತೆರಳಿದ್ದ ಗಣೇಶ್ ಹಾಗು ಮಂಜುನಾಥ್ ಗಲಾಟೆ ನಂತ್ರ 'ಫ್ಲೈಟ್'ನಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಿರ್ಮಾಪಕ ಎ ಗಣೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರೆ ಕಡೆ ಗಲಾಟೆ ನಡೆದರೆ ಅದನ್ನು ಫಿಲಂ ಚೇಂಬರ್ ಗಮನಕ್ಕೆ ತಂದು ಬಗೆಹರಿಸಲಾಗುತ್ತಿತ್ತು.
ಭೂಗತಲೋಕದ ಜತೆ ನಟಿ ನಗ್ಮಾಗೆ ಲಿಂಕ್; ಅಸಲಿಗೆ ಏನಾಗ್ತಿದೆ ಈ ಒಂಟಿ ನಟಿಯ ಕಥೆ?
ಆದರೆ ಈಗ ಫಿಲಂ ಚೇಂಬರ್ ಟೂರ್‌ನಲ್ಲೇ ನಿರ್ಮಾಪಕದ ಮಧ್ಯೆ ಗಲಾಟೆ, ಹೊಡೆದಾಟ ನಡೆದಿದೆ. ಇದನ್ನೀಗ ಯಾವ ರೀತಿಯಲ್ಲಿ ಬಗೆಹರಿಸಿಲಿದ್ದಾರೆ ಎಂಬುದು ಕುತೂಹಲದ ಸಂಗತಿಯಾಗಿದೆ. ಸದ್ಯಕ್ಕೆ ಯಾರ ಮೇಲೂ ಯಾವುದೇ ಕೇಸ್ ದಾಖಲಾದ ಮಾಹಿತಿಯಿಲ್ಲ. ಆದರೆ, ಸ್ನೇಹಿತರಂತೆ ಸಂಭ್ರಮದಿಂದ ಹೋಗಿದ್ದ ನಿರ್ಮಾಪಕರು ಹೀಗೆ ಬಡಿದಾಡಿಕೊಂಡು ಬಂದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಹೀಗೂ ಉಂಟೇ..! ರಾಮಾಯಣಕ್ಕೆ ಪಡೆದ ಭಾರೀ ಸಂಭಾವನೆಯನ್ನು ಏನ್ಮಾಡಿದಾರೆ ಯಶ್?