ನವೆಂಬರ್‌ನಲ್ಲಿ ಸಖತ್‌ ಚಿತ್ರದ ಹಾಡುಗಳ ಹಂಗಾಮ

Published : Oct 08, 2021, 12:31 PM ISTUpdated : Oct 08, 2021, 12:35 PM IST
ನವೆಂಬರ್‌ನಲ್ಲಿ ಸಖತ್‌ ಚಿತ್ರದ ಹಾಡುಗಳ ಹಂಗಾಮ

ಸಾರಾಂಶ

ಸಖತ್‌ ಚಿತ್ರದ ಹಾಡುಗಳ ಹಂಗಾಮ ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಲಿರುವ ಗಣೇಶ್‌ ಸಿನಿಮಾ

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಅಭಿಮಾನಿಗಳಿಗೆ ಇದು ಸಖತ್‌ ಸುದ್ದಿ. ತಮ್ಮ ನೆಚ್ಚಿನ ನಟ ಎಲ್ಲಿ ಹೋದರು ಎಂದುಕೊಳ್ಳುತ್ತಿರುವ ಅವರ ಅಭಿಮಾನಿಗಳು ಇನ್ನು ಮುಂದೆ ಅವರ ನಟನೆಯ ಹೊಸ ಚಿತ್ರದ ಹಾಡುಗಳನ್ನು ನೋಡಿ- ಕೇಳಬಹುದು. ಹೀಗೆ ಹಾಡುಗಳ ಮೂಲಕ ಅಭಿಮಾನಿಗಳ ಮುಂದೆ ಗಣೇಶ್‌ ಅವರನ್ನು ತರುತ್ತಿರುವುದು ‘ಸಖತ್‌’ ಚಿತ್ರತಂಡ.

ಹೀಗಾಗಿ ನಟ ಗಣೇಶ್‌ ಹಾಗೂ ಸಿಂಪಲ್‌ ಸುನಿ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ‘ಸಖತ್‌’ ಸಿನಿಮಾ ಹಾಡುಗಳ(Song) ಕಾರಣಕ್ಕೆ ಸಖತ್ತಾಗಿಯೇ ಸದ್ದು ಮಾಡಲಿದೆ ಎಂಬುದು ಎಲ್ಲರ ಅಂದಾಜು. ನಿರ್ದೇಶಕ ಸುನಿ ಚಿತ್ರದ ಒಂದೊಂದೇ ಹಾಡನ್ನು ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದ್ದು, ಆ ಮೂಲಕ ಚಿತ್ರದ ಪ್ರಚಾರವನ್ನು ಆರಂಭಿಸಿದ್ದಾರೆ. ‘ಪ್ರೇಮಕ್ಕೆ ಕಣ್ಣಿಲ್ಲಾ’ ಎಂದು ಸಾಗುವ ಹಾಡನ್ನು ಅಕ್ಟೋಬರ್‌ 7ರಂದು ಸಂಜೆ 6.24ಕ್ಕೆ ಆನಂದ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

ಅದ್ಧೂರಿಯಾಗಿ ನಡೀತಿದೆ ಕಬ್ಜ ಶೂಟಿಂಗ್, ಉಪ್ಪಿ ಸೂಪರ್ ಲುಕ್

ಜಯಂತ್‌ ಕಾಯ್ಕಿಣಿ ಬರೆದಿರುವ ಈ ಹಾಡನ್ನು ಪಂಚಮ್‌ ಹಾಡಿದ್ದಾರೆ. ಜ್ಯುಡ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಡಿಯೋ(Video) ಹಾಡಿನ ಪ್ರಮೋ ಕೂಡ ಬಿಡುಗಡೆ ಆಗುತ್ತಿರುವುದು ಮತ್ತೊಂದು ಹೈಲೈಟ್‌. ಹಾಡಿನ ಸಾಲಿನಂತೆ ಇಡೀ ಹಾಡು ಮೆಲೋಡಿಯಿಂದ ಕೂಡಿದ್ದು, ಗಣೇಶ್‌ ಹಾಗೂ ನಿಶ್ವಿಕಾ ನಾಯ್ಡು ಅವರ ಜೋಡಿಯಲ್ಲಿ ಈ ಹಾಡು ಮೂಡಿ ಬಂದಿದೆ.

"

‘ಜಯಂತ್‌ ಕಾಯ್ಕಿಣಿ ಅವರು ಬರೆದಿರುವ ಸಾಲುಗಳನ್ನು ಒಳಗೊಂಡ ಹಾಡು ಎಂದ ಮೇಲೆ ಎಲ್ಲರು ಕೇಳುವಂತಹ ಹಾಡು ಆಗಿರುತ್ತದೆ. ಪ್ರೇಮಕ್ಕೆ ಕಣ್ಣಿಲ್ಲಾ ಎನ್ನುವ ಹಾಡನ್ನು ಎಲ್ಲರು ಮೆಚ್ಚಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ. ಚಿತ್ರದ ಹಾಡಿನ ಮೇಕಿಂಗ್‌, ಸಂಗೀತ ಎಲ್ಲವೂ ಹಾಡಿಗೆ ತಕ್ಕಂದಿದೆ.’ ಎನ್ನುತ್ತಾರೆ ನಿರ್ದೇಶಕ ಸಿಂಪಲ್‌ ಸುನಿ.

ಸೈಬರ್ ಕ್ರೈಂ ಕುರಿತು ವಿಜಯ ರಾಘವೇಂದ್ರ ಹೊಸ ಸಿನಿಮಾ ಗ್ರೇ ಗೇಮ್ಸ್‌

ಇನ್ನೂ ಎಲ್ಲವೂ ಅಂದುಕೊಂಡಂತೆ ಆದರೆ ನವೆಂಬರ್‌ 12ಕ್ಕೆ ‘ಸಖತ್‌’ ಸಿನಿಮಾ ಚಿತ್ರಮಂದಿರಗಳಿಗೆ ಬರಲಿದೆ. ನವೆಂಬರ್‌ನಲ್ಲಿ ಬಿಡುಗಡೆ ಮಾಡಲೇಬೇಕು ಎನ್ನುವ ಗುರಿಯೊಂದಿಗೆ ಚಿತ್ರತಂಡ ಕೆಲಸ ಮಾಡುತ್ತಿದೆ. ನಿಶಾ ವೆಂಕಟ್‌ ಕೋಣಂಕಿ ಹಾಗೂ ಸುಪ್ರಿತ್‌ ಚಿತ್ರದ ನಿರ್ಮಾಪಕರು. ಸಂತೋಷ್‌ ರೈ ಪಾತಾಜೆ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

"

ಬಡವ ರಾಸ್ಕಲ್‌ ಡಿಸೆಂಬರ್‌ 24ಕ್ಕೆ ಬಿಡುಗಡೆ

ಒಂದು ಕಡೆ ಓಟಿಟಿ, ಮತ್ತೊಂದು ಕಡೆ ಚಿತ್ರಮಂದಿರಗಳಲ್ಲಿ... ಹೀಗೆ ಎರಡೂ ಕಡೆ ಪ್ರವೇಶ ಪಡೆಯುತ್ತಿವೆ ನಟ ಧನಂಜಯ್‌ ಅವರ ಚಿತ್ರಗಳು. ಮೊನ್ನೆಯಷ್ಟೆತಮ್ಮ ಅಭಿನಯದ ‘ರತ್ನನ್‌ ಪ್ರಪಂಚ’ ಚಿತ್ರವನ್ನು ಅಮೆಜಾನ್‌ ಪ್ರೈಮ್‌ನಲ್ಲಿ ಅಕ್ಟೋಬರ್‌ 22ಕ್ಕೆ ಬರುತ್ತಿರುವುದಾಗಿ ಬಿಡುಗಡೆ ಘೋಷಣೆ ಮಾಡಿದ್ದ ಧನಂಜಯ್‌, ಈಗ ‘ಬಡವ ರಾಸ್ಕಲ್‌’ ಚಿತ್ರವನ್ನು ಡಿಸೆಂಬರ್‌ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಈ ಸಿನಿಮಾ ಬರುತ್ತಿರುವುದಾಗಿ ಧನಂಜಯ್‌ ಹೇಳಿಕೊಂಡಿದ್ದಾರೆ. ಶಂಕರ್‌ಗುರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಅಮೃತ ಅಯ್ಯಂಗರ್‌ ನಾಯಕಿಯಾಗಿ ನಟಿಸಿದ್ದಾರೆ.

ಮದಗಜ ಹಾಡು ಬಿಡುಗಡೆ

ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್‌ ನಟನೆಯ ‘ಮದಗಜ’ ಚಿತ್ರದ ‘ಗೆಳೆಯ ನನ್ನ ಗೆಳೆಯ’ ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ರವಿ ಬಸ್ರೂರು ಸಂಗೀತ ನೀಡಿರುವ ಹಾಡಿಗೆ ಗಾಯಕಿ ವೈಶ್‌ ದನಿಯಾಗಿದ್ದಾರೆ. ಎಸ್‌ ಮಹೇಶ್‌ ಕುಮಾರ್‌ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮ್ಮನಿಂದ ವಿಲನ್ ವರೆಗೆ ಎಲ್ಲ ಪಾತ್ರಕ್ಕೂ ಸೈ, ಹೊಸ ವರ್ಷ ಹೊಸ ನಿರೀಕ್ಷೆಯಲ್ಲಿ ನಟಿ ಶ್ರುತಿ
2026 ರಲ್ಲಿ ಥಿಯೇಟರಲ್ಲಿ ಧೂಳೆಬ್ಬಿಸಲು ರೆಡಿಯಾಗಿರುವ ಕನ್ನಡ ಸಿನಿಮಾಗಳು