ಕತ್ತಲೆ, ಹೊಗೆ, ಧೂಳು, ಧಗ ಧಗ ಬೆಂಕಿಯ ನಡುವೆ ಗೋಲ್ಡನ್ ಬ್ಯಾರಲ್ ಗನ್ ಹಿಡಿದು ನಿಂತಿದ್ದ ಆರಡಿಗೂ ಮೀರಿದ ದೈತ್ಯ ಭಗೇರ ಪಾತ್ರಧಾರಿ ನವಾಬ್ ಶಾ. ಅವರಿಗೆ ಎದುರಾಗಿ 4 ದಶಕ ಹಿಂದಿನ ಹ್ಯಾಂಡ್‌ಸಮ್ ಹೀರೋ ಲುಕ್‌ನಲ್ಲಿ ಉಪೇಂದ್ರ(Upendra). ಇವರಿಬ್ಬರ ಮುಖಾಮುಖಿಗೆ ಸಾಕ್ಷಿಯಾದದ್ದು ಬೆಂಗಳೂರಿನ(Bengaluru) ಮಿನರ್ವ ಮಿಲ್‌ನ ಕಬ್ಜ ಚಿತ್ರದ ಬೃಹತ್ ಸೆಟ್. ನಿರ್ದೇಶಕ ಆರ್ ಚಂದ್ರು ಈ ಇಬ್ಬರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದರು.
ಮೂರು ವರ್ಷದ ಕೆಳಗೆ ಶುರುವಾದ ಕಬ್ಜ ಚಿತ್ರದ ಶೂಟಿಂಗ್(Shooting) ಈಗ ಶೇ.50ರಷ್ಟುಕಂಪ್ಲೀಟ್ ಆಗಿದೆ. ಇನ್ನೂ 80ಕ್ಕೂ ಅಧಿಕ ದಿನಗಳ ಶೂಟಿಂಗ್ ಬಾಕಿ ಇದೆ. ಇದು ಕಬ್ಜದ ಐದನೇ ಶೆಡ್ಯೂಲ್ ಶೂಟಿಂಗ್. ಸತತ ನಲವತ್ತೆರಡು ದಿನಗಳ ಕಾಲ ವಿನರ್ವ ಮಿಲ್‌ನಲ್ಲಿ, ಬಳಿಕ ಹೈದರಾಬಾದ್, ಮಂಗಳೂರು ಮೊದಲಾದ ಕಡೆ ಶೂಟಿಂಗ್ ಮುಂದುವರಿಯಲಿದೆ. ಅಷ್ಟರಲ್ಲೇ ಈ ಪಾನ್ ಇಂಡಿಯಾ ಚಿತ್ರದ ಸೀಕ್ವಲ್ ‘ಕಬ್ಜ 2’ಗೆ ಚಂದ್ರು ಅವರು ಪ್ಲಾನ್ ಮಾಡುತ್ತಿದ್ದಾರೆ. ಈಗಾಗಲೇ ಕಥೆಯನ್ನೂ ಫೈನಲ್ ಮಾಡಿದ್ದಾರೆ.
ಸೈಬರ್ ಕ್ರೈಂ ಕುರಿತು ವಿಜಯ ರಾಘವೇಂದ್ರ ಹೊಸ ಸಿನಿಮಾ ಗ್ರೇ ಗೇಮ್ಸ್
ಶೂಟಿಂಗ್ ವಿಸಿಟ್ ವೇಳೆ ಮಾತನಾಡಿದ ಆರ್ ಚಂದ್ರು, ‘ಅಂಡರ್ ವರ್ಲ್ಡ್ ಕತೆ ಇರುವ ಪಾನ್ ಇಂಡಿಯಾ ಸಿನಿಮಾ ಇದು. ಹಾಲಿವುಡ್(Hollywood) ಮಾದರಿಯಲ್ಲಿ, ಅದೇ ರಿಚ್‌ನೆಸ್‌ನಲ್ಲಿ ಈ ಚಿತ್ರ ಮಾಡುತ್ತಿದ್ದೇವೆ. ಬೇರೆ ದೇಶದಲ್ಲಿ ನಿಂತು ನೋಡಿದಾಗ ಇಂಡಿಯಾದಲ್ಲಿ ಈ ಲೆವೆಲ್‌ನ ಅಂಡರ್‌ವಲ್ಡ್‌ರ್ ಸಾಮ್ರಾಜ್ಯ ಇತ್ತಾ ಅಂತನಿಸಬೇಕು, ಆ ಥರ ಇದೆ. ಉಪೇಂದ್ರ ಅವರ ಸಪೋರ್ಟ್ ಸಿಕ್ಕಿದೆ. ರಿಲೀಸ್ ಬಗ್ಗೆ ಯೋಚನೆ ಮಾಡಿಲ್ಲ. 3 ಡಿಯಲ್ಲಿ ಸಿನಿಮಾ ಹೊರ ತರುವ ಯೋಚನೆ ಸದ್ಯಕ್ಕಿಲ್ಲ’ ಎಂದರು.
ಉಪೇಂದ್ರ ಮಾತನಾಡಿ, ‘ಚಂದ್ರು ಅವರು ದೊಡ್ಡ ಕನಸಿನ ಬೆನ್ನತ್ತಿ ಹೊರಟಿದ್ದಾರೆ. ದೊಡ್ಡ ಕ್ಯಾನ್ವಾಸ್‌ನ ಈ ಚಿತ್ರಕ್ಕೆ ಹೆವ್ವಿ ಮೇಕಿಂಗ್ ಅನಿವಾರ್ಯ. ಅದಕ್ಕೆ ಬೇಕಾದ ಸಪೋರ್ಟ್ ನಮ್ಮೆಲ್ಲರಿಂದ ಇದೆ’ ಎಂದರು.
ಹಿಂದಿಗಿಂತ ಇಲ್ಲೇ ಕಂಫರ್ಟ್ ಇದೆ: ನವಾಬ್ ಶಾ
‘ಈ ಚಿತ್ರದಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಡಾನ್ ಭಗೇರನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿ ಮೂರು ದಿನಗಳ ಶೆಡ್ಯೂಲ್ ಇದೆ. ಬಳಿಕ ಹೈದರಾಬಾದ್, ಮಂಗಳೂರಿನಲ್ಲೂ ನನ್ನ ಭಾಗದ ಶೂಟಿಂಗ್ ನಡೆಯಲಿದೆ. ಇಲ್ಲಿನವರು ಎಷ್ಟುಚೆನ್ನಾಗಿ ನೋಡ್ಕೊಳ್ತಿದ್ದಾರೆ ಅಂದ್ರೆ ಹಿಂದಿಗಿಂತ ಹೆಚ್ಚು ಕಂಫರ್ಟ್ ಫೀಲ್ ಇಲ್ಲೇ ಸಿಗುತ್ತಿದೆ. ಚಂದ್ರು-ಉಪ್ಪಿ ಕಾಂಬಿನೇಶನ್‌ನಲ್ಲಿ ಮುಂದೆಯೂ ಚಿತ್ರ ಮಾಡುವ ಉತ್ಸಾಹ ಇದೆ’ ಎಂದು ಬಾಲಿವುಡ್ ನಟ ನವಾಬ್ ಶಾ ಹೇಳಿದರು.