
ಬೆಂಗಳೂರು(ಅ. 08) ಕೊರೋನಾ (Coronavirus) ನಂತರ ನಿಧಾನವಾಗಿ ಚಿತ್ರಮಂದಿರಗಳು ತೆರೆದುಕೊಂಡಿವೆ. ಆದರ ಅದರ ಜತೆಗೆ ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ.
ಬೆಂಗಳೂರಿನ (Bengaluru) ಸಂತೋಷ್ ಚಿತ್ರಮಂದಿರದಲ್ಲಿ 'ನಿನ್ನ ಸನಿಹಕೆ' (Ninna Sanihake) ಚಿತ್ರದ (Sandalwood) ಇಂದಿನ ಪ್ರದರ್ಶನ ರದ್ದಾಗಿದೆ. ವಿದ್ಯುತ್ ಸಮಸ್ಯೆಯಿಂದ ಇಂದಿನ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಶೋ ಕ್ಯಾನ್ಸಲ್ ಆಗಿರಿವ ವಿಚಾರ ಚಿತ್ರತಂಡಕ್ಕೆ ಗೊತ್ತಿರಲಿಲ್ಲ.
ಮೊದಲ ದಿನ ಮೊದಲ ಶೋ ನೋಡೊಕೆ ಬಂದಿರುವ ಅಭಿಮಾನಿಗಳು ಮತ್ತು ಚಿತ್ರತಂಡಕ್ಕೆ ನಿರಾಸೆಯಾಗಿದೆ. ಕಳೆದ ಮೂರುದಿನಗಳಿಂದ ಸಂತೋಷ್ ಚಿತ್ರಮಂದಿರದಲ್ಲಿ ಕರೆಂಟ್ ಇಲ್ಲ. ಟ್ರಾನ್ಸ್ ಫಾರ್ಮರ್ ಸಮಸ್ಯೆ ಜೊತೆಗೆ ಜನರೇಟರ್ ಕೂಡ ವರ್ಕ್ ಆಗ್ತಿಲ್ಲ. ಅದ್ರು ಸಿನಿಮಾ ರಿಲೀಸ್ ಮಾಡಿಕೊಡುತ್ತೇವೆ ಎಂದು ಚಿತ್ರಮಂದಿರದವರು ಹೇಳಿದ್ದರು ಎಂದು ಚಿತ್ರತಂಡ ಹೇಳಿದೆ.
ಧನ್ಯಾ ಮೊದಲ ಚಿತ್ರಕ್ಕೆ ಕಾಯುತ್ತಿದ್ದೆ ಅಣ್ಣಾವ್ರ ಕುಟುಂಬ
ಇಂದು ಸಿನಿಮಾ ರಿಲೀಸ್ ಆಗೋದು ಗೊತ್ತಿದ್ದರೂ ವಿದ್ಯುತ್ ಸಮಸ್ಯೆ ಸರಿಪಡಿಸಿಕೊಳ್ಳಲಾಗಿಲ್ಲ. ಸಿನಿಮಾ ನೋಡಲು ಬಂದ ಪ್ರೇಕ್ಷಕರನ್ನು ವಾಪಸ್ ಕಳುಹಿಸಲಾಗಿದೆ.
ಇಂದಿನ ಶೋ ಕ್ಯಾನ್ಸಲ್ ಎಂಬ ವಿಷಯ ತಿಳಿದು ಥಿಯೇಟರ್ ಬಳಿ ಬಂದ ನಟ ನಿರ್ದೇಶಕ ಸೂರಜ್ ಗೌಡ(Sooraj Gowda) ಆತಂಕ ತೋಡಿಕೊಂಡಿದ್ದಾರೆ. ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಬಂದ ಸಂಗೀತ ನಿರ್ದೇಶಕ ರಘು ದೀಕ್ಷಿತ್(Raghu Dixit) ಅಸಮಾಧಾನ ಹೊರಹಾಕಿದ್ದು ಮೊದಲೆ ಮಾಹಿತಿ ನೀಡಿದ್ದರೆ ಚಿತ್ರವನ್ನು ಬೇರೆ ಕಡೆಗೆ ಪ್ರದರ್ಶನದ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು ಎಂದಿದ್ದಾರೆ.
ಮೂರು ದಿನಗಳಿಂದ ಕರೆಂಟ್ ಇರಲಿಲ್ಲ.. ನಮಗೆ ಯಾರೂ ತಿಳಿಸಿಲ್ಲ.. ಇಲ್ಲಿಗೆ ಬಂದ ಮೇಲೆ ಸಮಸ್ಯೆ ಗೊತ್ತಾಗಿದೆ. ಒಂದು ಚಿಕ್ಕ ಸಿನಿಮಾಕ್ಕೆ ದೊಡ್ಡ ಏಟು.. ಸಿಕ್ಕಾಪಟ್ಟೆ ಬೇಜಾರಾಗಿದೆ..ಕೋಪ ಬಂದಿದೆ. ಒಂದು ಒಳ್ಳೆ ಸಿನಿಮಾ ಮಾಡಿದ್ದೇವೆ.. ನವರಂಗ್ ಥಿಯೇಟರ್ ಗೆ ಬನ್ನಿ... ಎಲ್ಲರೂ ಅಲ್ಲಿ ಸಿಗೋಣ.. ಎಲ್ಲ ಕನ್ನಡಿಗರು ನಮ್ಮ ಚಿತ್ರವನ್ನು ಬೆಂಬಲಿಸುತ್ತೀರಾ ಎನ್ನುವ ನಂಬಿಕೆ ಇದೆ. ಒಂದು ಚಿಕ್ಕ ಸಿನಿಮಾಕ್ಕೆ ಇಂಥ ಏಟು ತಡೆದುಕೊಳ್ಳಲಾಗುವುದಿಲ್ಲ. ನಿರ್ಮಾಪಕರು ಹೆಜ್ಜೆ ಹಿಂದೆ ಇಡುವಂತಹ ಕೆಲಸ ಮಾಡಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಜನರಿಗೂ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಮೂನ್ನೂರಕ್ಕೂ ಅಧಿಕ ಜನ ಸಿನಿಮಾ ನೋಡಲು ಬಂದಿದ್ದರು. ನಾವು ಚಿತ್ರತಂಡ ನವರಂಗ್ ಕಡೆ ಗಮನ ಕೇಂದ್ರಿಕರಿಸಿದ್ದೇವೆ. ಎಲ್ಲ ಗೆಳೆಯರು ಅಭಿಮಾನಿಗಳು ಒಂದು ಒಳ್ಳೆಯ ಚಿತ್ರ ಗೆಲ್ಲಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.