ಸರ್ಕಾರಿ ಶಾಲೆಯ ಸಾಧಾರಣ ಮಿಸ್ಸು..! ಮಿಸ್‌ ನಂದಿನಿ ಬರ್ತಿದ್ದಾರೆ

By Kannadaprabha NewsFirst Published Oct 8, 2021, 1:14 PM IST
Highlights
  • ಪ್ರಿಯಾಂಕಾ ಹೊಸ ಚಿತ್ರ ಮಿಸ್‌ ನಂದಿನಿ
  • ಸರ್ಕಾರಿ ಶಾಲೆಯ ಸಾಧಾರಣ ಮಿಸ್ಸು

-ಪ್ರಿಯಾ ಕೆರ್ವಾಶೆ

ಪ್ರಿಯಾಂಕಾ ಉಪೇಂದ್ರ ‘ಮಿಸ್‌ ನಂದಿನಿ’ ಚಿತ್ರದಲ್ಲಿ ಸರ್ಕಾರಿ ಶಾಲೆಯ ಟೀಚರ್‌(Teacher) ಆಗ್ತಿದ್ದಾರೆ. ಓದುತ್ತಿದ್ದಾಗ ಕಿಂಡರ್‌ ಗಾರ್ಡನ್‌ನ ಪುಟಾಣಿಗಳಿಗೆ ಪಾಠ ಹೇಳಿದ ಅನುಭವ ಅವರಿಗಿದೆ. ಇನ್ನೊಂದು ಕಡೆ ‘ಡಿಟೆಕ್ಟಿವ್‌ ತ್ರಿಶಾ’ಗೆ ತಯಾರಿ ನಡೆಯುತ್ತಿದೆ. ಈ ಎಲ್ಲದರ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.

- ಮಿಸ್‌ ನಂದಿನಿ ಯಾಕೆ ಇಂಪಾರ್ಟೆಂಟು?

ಇದು ಸರ್ಕಾರಿ ಶಾಲೆಗಳ ಮೇಲೆ, ಅಲ್ಲಿ ಓದುವ ಮಕ್ಕಳ ಮೇಲೆ ಬೆಳಕು ಚೆಲ್ಲುವ ಸಿನಿಮಾ. ಖಾಸಗಿ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳ ನಡುವಿನ ಅಂತರ ಹೆಚ್ಚಾಗುತ್ತಿರುವ ದಿನದಲ್ಲಿ ಟೀಚರ್‌ ಒಬ್ಬಳಿಂದ ಸರ್ಕಾರಿ ಶಾಲೆ ಹೇಗೆ ಬದಲಾಗ್ತಾ ಹೋಗುತ್ತೆ ಅನ್ನೋದು ಚಿತ್ರದ ವನ್‌ಲೈನ್‌.

- ಟೀಚರ್‌ ಅಂದ್ರೆ ಮನಸ್ಸಿಗೆ ಬರುವ ಫಸ್ಟ್‌ ಥಾಟ್‌?

ನಾನು ಬಹಳ ಹಿಂದೆ ಕಾಲೇಜ್‌ (College)ಓದುತ್ತಿದ್ದಾಗ ಕಿಂಡರ್‌ಗಾರ್ಡನ್‌ ಟೀಚರ್‌ ಸಹಾಯಕಿಯಾಗಿ ಕೆಲವು ದಿನ ಕೆಲಸ ಮಾಡಿದ್ದೆ. ಟೀಚರ್‌ ರಜೆಯಲ್ಲಿದ್ದಾಗ ಪುಟ್ಟಮಕ್ಕಳಿಗೆ ಪಾಠವನ್ನೂ ಮಾಡಿದ್ದೆ. ಟೀಚರ್‌ ಪಾತ್ರ ಅಂದಾಗ ಮೊದಲಿಗೆ ಮನಸ್ಸಿಗೆ ಬಂದಿದ್ದು ಆ ದಿನಗಳು. ಮಕ್ಕಳನ್ನು ಬಹಳ ಇಷ್ಟಪಡುವ ನನಗೆ ಮಿಸ್‌ ನಂದಿನಿ ಪಾತ್ರ ಬಹಳ ಸ್ಪೆಷಲ್‌.

ನವೆಂಬರ್‌ನಲ್ಲಿ ಸಖತ್‌ ಚಿತ್ರದ ಹಾಡುಗಳ ಹಂಗಾಮ

- ಡಿಟೆಕ್ಟಿವ್‌ ತ್ರಿಶಾಗಿಂತ ಮೊದಲೇ ಈ ಸಿನಿಮಾ ಶೂಟಿಂಗ್‌ ಯಾಕೆ?

ಮೊದಲನೆಯ ಕಾರಣ ಮಕ್ಕಳಿಗೆ ಈಗ ದಸರಾ ರಜೆ ಇದೆ. ಈ ರಜೆಯ ಅವಧಿಯಲ್ಲೇ ಅವರ ಭಾಗದ ಶೂಟಿಂಗ್‌ ಮುಗಿಸಬೇಕಿದೆ. ತ್ರಿಶಾ ಪಾತ್ರಕ್ಕೋಸ್ಕರ ನಾನು ಇನ್ನೊಂದಿಷ್ಟುಟ್ರೈನಿಂಗ್‌ ಪಡೆದುಕೊಳ್ಳಬೇಕಿದೆ. ಹೀಗಾಗಿ ಈ ಚಿತ್ರದ ಬಳಿಕ ತ್ರಿಶಾ ಸೆಟ್ಟೇರಲಿದೆ.

- ಏನು ಟ್ರೈನಿಂಗ್‌?

ಅದು ಶೆರ್ಲಾಕ್‌ ಹೋಮ್ಸ್‌ ಥರದ ಡಿಟೆಕ್ಟಿವ್‌ ಪಾತ್ರ. ಕನ್ನಡದ ಮಟ್ಟಿಗೆ ಹೇಳೋದಾದರೆ ‘ಶಿವಾಜಿ ಸುರತ್ಕಲ್‌’ನಲ್ಲಿ ರಮೇಶ್‌ ಅರವಿಂದ್‌ ಮಾಡಿದ ರೀತಿಯ ಕ್ಯಾರೆಕ್ಟರ್‌. ಇದಕ್ಕಾಗಿ ಒಂದಿಷ್ಟುಮಾರ್ಶೆಲ್‌ ಆರ್ಟ್‌ ಟ್ರೈನಿಂಗ್‌ ಪಡೆಯಬೇಕಿದೆ.

- ಈಗ ಮತ್ತೆ ಬೆಂಗಾಲಿ ಸಿನಿಮಾದಲ್ಲಿ ನಟಿಸುತ್ತಿದ್ದೀರಿ?

ಹೌದು. ಎಂಟು ವರ್ಷದ ನಂತರ ಮತ್ತೆ ಬೆಂಗಾಲಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ‘ಮಾಸ್ಟರ್‌ ಅಂಶುಮಾನ್‌’ ಅಂತ ಚಿತ್ರದ ಹೆಸರು. ಸತ್ಯಜಿತ್‌ ರೇ ಅವರ ಸಣ್ಣಕತೆ ಆಧರಿಸಿ ನಿರ್ಮಿಸಿರೋ ಚಿತ್ರ. ಶೇ.70 ಚಿತ್ರೀಕರಣ ಮುಗಿದಿದೆ. ಹೆಚ್ಚಿನೆಲ್ಲ ಶೂಟಿಂಗ್‌ ಆಗಿದ್ದು ಡಾರ್ಜಿಲಿಂಗ್‌ನಲ್ಲಿ.

- ಈಗ ಥಿಯೇಟರ್‌ಗಳಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ ಇದೆ. ಆದ್ರೆ ನಿಮ್ಮ ‘1980’ ಓಟಿಟಿಯಲ್ಲಿ ರಿಲೀಸ್‌ ಆಗ್ತಿದೆ?

ನಾವು ಸಾಕಷ್ಟುಕಾಲ ಕಾದೆವು. ಆ ಬಳಿಕ ‘ನಮ್ಮ ಫ್ಲಿಕ್ಸ್‌’ ಓಟಿಟಿಯಲ್ಲಿ ಅ.15ರಂದು ಸಿನಿಮಾ ರಿಲೀಸ್‌ ಮಾಡಲು ನಿರ್ಧರಿಸಿದೆವು. ಓಟಿಟಿಯಲ್ಲಿ ರಿಲೀಸ್‌ ಆಗುತ್ತಿರುವ ನನ್ನ ಮೊದಲ ಸಿನಿಮಾ ಇದು. ಜನ ಹೇಗೆ ಸ್ವೀಕರಿಸುತ್ತಾರೆ ಅಂತ ಕುತೂಹಲ ಇದೆ. ಸ್ವಲ್ಪ ದಿನಗಳ ಬಳಿಕ ಥಿಯೇಟರ್‌ ರಿಲೀಸ್‌ಗೂ ಪ್ಲಾನ್‌ ಮಾಡುತ್ತಿದ್ದೇವೆ.

click me!