ಕುತೂಹಲ ಹೆಚ್ಚಿಸಿದ ಕೋಟಿಗೊಬ್ಬ 3 ಟ್ರೇಲರ್: ಮಾಸ್ ಡಯಲಾಗ್ಸ್

By Kannadaprabha NewsFirst Published Oct 8, 2021, 4:06 PM IST
Highlights
  • ಸಿನಿಪಗ್ರಿಯರ ಮನಸು ಗೆದ್ದ ಕೋಟಿಗೊಬ್ಬ 3 ಟ್ರೇಲರ್
  • ಅದ್ಧೂರಿ ಟ್ರೇಲರ್‌ನಲ್ಲಿ ಮಾಸ್ ಡಯಲಾಗ್ಸ್

ಐಯಾಮ್ ದಿ ಮರ್ಚಂಟ್ ಆಫ್ ಡೆತ್! ಹಾ ಗಂತ ನವಾಬ್ ಶಾ ಹೇಳುತ್ತಿದ್ದಂತೆ, ಕತೆಗೊಂದು ಹೊಸ ಟ್ವಿಸ್ಟ್ ಸಿಗುತ್ತದೆ. ಅಲ್ಲಿಂದಾಚೆ ಕತೆಯ ಅಸಂಖ್ಯ ಆಯಾಮಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ಕೋಟಿಗೊಬ್ಬ 2 ಚಿತ್ರ ಬಿರುಸು ಮತ್ತು ಜಾಣ್ಮೆ ಇಲ್ಲೂ  ಮುಂದುವರಿಯುತ್ತದೆ. ಜಾಸ್ತಿ ಮಾತಾಡದ, ಜಾಸ್ತಿ ಮಾತು ಕೇಳದ, ಪ್ರೇಮದಲ್ಲಿ ಕರಗಿಹೋಗುವ ನಾಯಕನ ಎರಡು ಮುಖಗಳ ಪರಿಚಯದ ಜೊತೆ ಕೋಟಿಗೊಬ್ಬ 3 ಚಿತ್ರದ ಕತೆ ಅಂತಾರಾಷ್ಟ್ರೀಯ ನೆಲೆಗೆ ಏರುತ್ತದೆ.

350+ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3: ಸೂರಪ್ಪ ಬಾಬು

ಇದನ್ನು 2.43 ನಿಮಿಷಗಳ ಸುದೀರ್ಘ ಟ್ರೇಲರಿನಲ್ಲಿ ನಿರ್ದೇಶಕ ಶಿವಕಾರ್ತಿಕ್ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅದ್ದೂರಿತನ, ತಾಂತ್ರಿಕ ಪರಿಣತಿ, ಆಧುನಿಕತೆಯ ಮಿಶ್ರಣದಂತಿರುವ ಟ್ರೇಲರ್ ಕೋಟಿಗೊಬ್ಬ ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸಿದೆ. ಮಲಯಾಳಂ ನಟಿ ಮಡೋನ್ನ ಅವರ ಗ್ಲಾಮರ್ ಲುಕ್, ರವಿಶಂಕರ್, ನವಾಬ್ ಶಾ ಅವರ ಖಡಕ್ ಡೈಲಾಗ್ ಗಳು ಗಮನಸೆಳೆಯುವಂತಿವೆ. ಟ್ರೈಲರ್ ಬಿಡುಗಡೆಯಾದ ಗಂಟೆಯೊಳಗೇ ಅದನ್ನು ವೀಕ್ಷಿಸಿದವರ ಸಂಖ್ಯೆ ಐದು ಲಕ್ಷ ತಲುಪಿತ್ತು. ಅದು ಅದೇ ವೇಗದಲ್ಲಿ ಮುಂದುವರಿಯುತ್ತಿತ್ತು. ಸೂರಪ್ಪ ಬಾಬು ಕಾದಿದ್ದೂ ಸಾರ್ಥಕ ಎಂಬ ುವುದನ್ನು ಕೋಟಿಗೊಬ್ಬ3 ಟ್ರೇಲರ್ ತೋರಿಸಿ ಕೊಟ್ಟಿದೆ.

ಕಿಚ್ಚ ಅಭಿನಯದ ಕೋಟಿಗೊಬ್ಬ 3(Kotigobba 3) ಸಿನಿಮಾದ ಟ್ರೈಲರ್ ಭಾರೀ ಸುದ್ದಿ ಮಾಡುತ್ತಿದೆ. ಕಿಕ್ಕೇರಿಸುತ್ತಿರುವ ಟ್ರೈಲರ್ ನೋಡಿ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಬೆಳ್ಳಿ ತೆರೆಯ ಮೇಲೆ ರಾರಾಜಿಸಲು ಕೋಟಿಗೊಬ್ಬ 3 ಸಿದ್ಧವಾಗಿದ್ದು ಕಿಚ್ಚನ(Kichcha) ಅಭಿಮಾನಿಗಳಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿರೋ ಟ್ರೈಲರ್ ವೈರಲ್ ಆಗಿದೆ.

ಕೋಟಿಗೊಬ್ಬ ಸಿರೀಸ್‌ ಸಿನಿಮಾ ಪ್ರತಿಬಾರಿ ಸಿನಿಪ್ರಿಯರ ನಿರೀಕ್ಷೆಗೂ ಮೀರಿ ಸಖತ್ ಸೌಂಡ್ ಮಾಡುತ್ತಿದ್ದು ಈ ಬಾರಿಯೂ ಇದೆಲ್ಲವೂ ಸಿಗೋ ಸೂಚನೆ ಟ್ರೈಲರ್‌ನಲ್ಲಿದೆ. ಸಿನಿಮಾದ ಟೀಸರ್ ಸಾಂಗ್ಸ್ ವೈರಲ್ ಆಗಿದ್ದು ಇದು ಸದ್ಯ ಸೌತ್‌ನ ಬಹುನಿರೀಕ್ಷಿತ ಸಿನಿಮಾ

ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯಾವುದೇ ಕಟ್‌ ಹಾಗೂ ಮ್ಯೂಟ್‌ ಇಲ್ಲದೆ ಸೆನ್ಸಾರ್‌ ಮಂಡಳಿಯಿಂದ ‘ಯು/ಎ’ ಸರ್ಟಿಪಿಕೆಟ್‌ ನೀಡಲಾಗಿದೆ.  ‘ನಮ್ಮ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ ಕೂಡ ಖುಷಿ ಆಗಿದೆ. ಕಟ್‌ ಅಥವಾ ಮ್ಯೂಟ್‌ ಇಲ್ಲದೆ ಯು/ಎ ಸರ್ಟಿಪಿಕೆಟ್‌ ಕೊಟ್ಟಿದ್ದಾರೆ. ಅಂದರೆ ಎಲ್ಲ ವಯೋಮಾನದವರು ಈ ಚಿತ್ರವನ್ನು ನೋಡಬಹುದು. ಆ್ಯಕ್ಷನ್‌, ಮನರಂಜನೆ, ಅದ್ದೂರಿ ಮೇಕಿಂಗ್‌, ತಾಂತ್ರಿಕತೆಯ ವೈಭವ ಈ ಚಿತ್ರದ ಹೈಲೈಟ್‌’ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು.

"

ಶಿವಕಾರ್ತಿಕ್‌ ನಿರ್ದೇಶನದ ಈ ಚಿತ್ರವನ್ನು ನಾಡ ಹಬ್ಬ ದಸರಾ ಹಬ್ಬದ ಅಂಗವಾಗಿ ರಾಜ್ಯದಲ್ಲೇ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ‘ಈಗ ನಾವು ಅಂದುಕೊಂಡಿರುವುದು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು. ಪ್ರೀ ರಿಲೀಸ್‌ ಈವೆಂಟ್‌ ನಂತರ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟುಹೆಚ್ಚಾಗಬಹುದು. ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದೇವೆ. ಹೊರ ರಾಜ್ಯದಲ್ಲೂ ಕೆಲವು ಕಡೆ ಸಿನಿಮಾ ಬಿಡುಗಡೆ ಆಗುತ್ತಿದೆ’ ಎಂಬುದು ಸೂರಪ್ಪ ಬಾಬು ಮಾತು.

click me!