
ಬೆಂಗಳೂರು(ಮಾ. 12) ಕರೋನಾ ಅಬ್ಬರದ ನಡುವೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಂದಿದೆ. ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಅಕ್ಟೋಬರ್ 23 ಶುಕ್ರವಾರ ಪ್ರಪಂಚದಾದ್ಯಂತ ತೆರೆಗೆ ಅಪ್ಪಳಿಸಲಿದೆ.
ಕೆಜಿಎಫ್ ಚಾಪ್ಟರ್ 2 ಆಗ ಬಿಡುಗಡೆಯಾಗುತ್ತದೆ..ಈಗ ಬಿಡುಗಡೆ ಡೇಟ್ ಫಿಕ್ಸ್ ಆಗಿದೆ ಎಂಬ ಎಲ್ಲ ಅನುಮಾನಗಳಿಗೆ ತೆರೆ ಬಿದ್ದಿದೆ. ಅಕ್ಟೋಬರ್ 23 ಈಗ ಅಧಿಕೃತ ದಿನಾಂಕ.
ಕೆಜಿಎಫ್ ಅಖಾಡದಿಂದ ಹಿರಿಯ ನಟ ಅನಂತ್ ನಾಗ್ ಹೊರಕ್ಕೆ
ಕೆಜಿಎಫ್-2 ಚಿತ್ರ 2020 ಅಲ್ಲಿಯೇ ರಿಲೀಸ್ ಆಗುತ್ತಿದೆ. ಚಿತ್ರ 1971ರ ಕಾಲಘಟ್ಟದಲ್ಲಿಯೇ ನಡೆಯುತ್ತಿದೆ. ಚಿತ್ರಕ್ಕಾಗಿ ದೇಹ ತೂಕ ಇಳಿಸಿಕೊಂಡಿದ್ದೇನೆ. ಹೈದ್ರಾಬಾದ್ ಅಲ್ಲಿಯೇ 15 ದಿನ ಚಿತ್ರೀಕರಣ ನಡೆದಿದೆ. ಚಿತ್ರದ ಪೋಟೋಗಳು ಅದ್ಹೇಗೋ ರಿವೀಲ್ ಆಗುತ್ತವೆ. ನಾವೂ ಕಂಟ್ರೊಲ್ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ರಾಕಿಂಗ್ ಸ್ಟಾರ್ ಯಶ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಅನಿಲ್ ತದಾನಿ ಅವರೇ ಎರಡು ಸಿನಿಮಾ ರೈಟ್ಸ್ ತೆಗೆದುಕೊಂಡಿದ್ದಾರೆ. ನಾವು ಚರ್ಚೆ ಮಾಡಿಕೊಂಡೇ ಬರುತ್ತೇವೆ . ಪ್ಯಾನ್ ಇಂಡಿಯನ್ ಸಿನಿಮಾ ಟಾಪ್ ಲೆವೆಲ್ ನಲ್ಲಿ ಆತರ ಏನು ಇರೋದಿಲ್ಲ.ಅಲ್ಮೋಸ್ಟ್ ಲಾಸ್ಟ್ , ಮೇಜರ್ ಪೋರ್ಷನ್ ಮುಗಿದಿದೆ ಎಂದು ಯಶ್ ತಿಳಿಸಿದ್ದರು. ಈಗ ಅಧಿಕೃತ ದಿನಾಂಕ ಹೊರಬಿದ್ದಿದ್ದು ಅಭಿಮಾನಿಗಳು ಚಿತ್ರ ನೋಡಲು ಈಗಿನಿಂದಲೇ ಸಜ್ಜಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.