
ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಮಗಳು ಐರಾ ಮುಡಿ ತೆಗೆಸುವ ಶಾಸ್ತ್ರವನ್ನು ನಂಜನಗೂಡಿನಲ್ಲಿ ಮಾಡಿಸಿದ್ದಾರೆ.
ಬೇಸಿಗೆಗೆ Summer Cut; ಇದೇನಪ್ಪಾ ಅಪ್ಪಂಗೆ ಹಿಂಗ್ ಕೇಳೋದಾ ಐರಾ?
ನಂಜನಗೂಡಿನ ನಂಜುಂಡೇಶ್ವರ ಯಶ್ ಮನೆ ದೇವರು. ಹಾಗಾಗಿ ಅಲ್ಲಿ ಐರಾಗೆ ಮುಡಿ ತೆಗೆಸುವ ಶಾಸ್ತ್ರ ಮಾಡಲಾಯಿತು. ಆ ನಂತರ ಅಭಿಮಾನಿಗಳು ಸೆರೆ ಹಿಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು. ಯಶ್ ಇನ್‌ಸ್ಟಾಗ್ರಾಂನಲ್ಲಿ ಮಗಳ ಫೋಟೋ ಶೇರ್ ಮಾಡಿ 'ಡ್ಯಾಡ್ ಇದು ಸಮ್ಮರ್ ಎಂದು ನನಗೆ ಗೊತ್ತು ಆದರೆ ಇದು ಸಮ್ಮರ್ ಕಟ್ ಅಲ್ಲ' ಎಂದು ಬರೆದುಕೊಂಡಿದ್ದರು.
ಆ ನಂತರ ರಾಧಿಕಾ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. 'Mr and Mrs yash with totally kissable head in between' ಎಂದು. ಅಷ್ಟೇ ಅಲ್ಲದೆ ಮುಡಿ ಕೊಡುವ ವೇಳೆ ಐರಾ ಶಾಂತವಾಗಿ ವರ್ತಿಸಿ ನಮ್ಮನ್ನು ಆಶ್ಚರ್ಯಗೊಳಿಸಿದ್ದಾಳೆ' ಎಂದು ಬರೆದುಕೊಂಡಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.