
ಹೆಚ್ಚಾದ ಕೊರೋನಾ ಎರಡನೇ ಅಲೆಯ ಪ್ರಭಾವದಿಂದ ಚೇತರಿಸಿಕೊಳ್ಳುತ್ತಿದ್ದ ಸ್ಯಾಂಡಲ್‌ವುಡ್ ಮತ್ತೆ ತತ್ತರಿಸುತ್ತಿದೆ. ಚಿತ್ರರಂಗ ಕೊರೋನಾದಿಂದಾಗಿ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಹಾಕಲಾಗಿದೆ.
ಶಿವರಾಜ್ ಕುಮಾರ್ ನಟನೆಯ ಶಿವಪ್ಪ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಕೊರೋನಾ ಕೇಸ್ ಹೆಚ್ಚಾದ ಹಿನ್ನೆಲೆ ಚಿತ್ರತಂಡ ಶೂಟಿಂಗ್ ನಿಲ್ಲಿಸಿದೆ. ಶಿವಪ್ಪ ಸಿನಿಮಾದ ನಾಯಕಿ ಅಂಜಲಿಗೂ ಕೊರೋನಾ ಪಾಸಿಟಿವ್ ಬಂದಿದ್ದು, ಕೊರೋನಾದ ಎರಡನೇ ಅಲೆಯಿಂದ ಜೇಮ್ಸ್ ಶೂಟಿಂಗ್ ಪ್ಲಾನ್ ಕೂಡಾ ಬದಲಾಗಿದೆ.
ಲಾಕ್‌ಡೌನ್ ಆದ್ಮೇಲೆ ಒಬ್ಬಳೇ ಶೂಟಿಂಗ್ ಹೋಗುತ್ತಿರುವೆ: ಹರಿಪ್ರಿಯಾ
ಕೋವಿಡ್ ಕಡಿಮೆ ಆಗೋ ವರೆಗೂ ಪುನೀತ್ ರಾಜ್ ಕುಮಾರ್ ಕೂಡಾ ಜೇಮ್ಸ್ ಸಿನಿಮಾ ಶೂಟಿಂಗ್ ಗೆ ಹೋಗುತ್ತಿಲ್ಲ. ವಿಕ್ರಾಂತ್ ರೋಣ ಚಿತ್ರದ ಚಿತ್ರೀಕರಣವೂ ನಿಂತಿದೆ. ಸುದೀಪ್ ಅನಾರೋಗ್ಯದಿಂದ ಮನೆಯಲ್ಲೇ ರೆಸ್ಟ್ ಮಾಡುತ್ತಿದ್ದಾರೆ.
ಈ ಸಂಧರ್ಬದಲ್ಲಿ ವಿಕ್ರಾಂತ್ ರೋಣ ಚಿತ್ರತಂಡ ಶೂಟಿಂಗ್ ಬೇಡ ಎಂದು ನಿರ್ಧರಿಸಿದ್ದು, ಶ್ರೀಮುರುಳಿ ನಟನೆಯ ಮದಗಜ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ. ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾದ ಶೂಟಿಂಗ್ ಕೂಡ ನಿಂತಿದೆ. ಬೆಂಗಳೂರು ಬಿಟ್ಟು ಹೊರಗಡೆ ಶೂಟಿಂಗ್ ಗೆ ಹೋಗೋ ಹಾಗಿಲ್ಲ ಎಂದು ನಿರ್ಬಂಧ ವಿಧಿಸಲಾಗಿದ್ದು, ಹಿರಿಯ ಕಲಾವಿದರು ಚಿತ್ರೀಕರಣಕ್ಕೆ ಬರೋಕೆ ಹಿಂದೇಟು ಹಾಕುತ್ತಿದ್ದಾರೆ.
ಕರ್ನಾಟಕದ ಬಸ್, ಆಟೋ ಮೇಲೆ ರಾಬರ್ಟ್ ಗಾಯಕಿ ಮಂಗ್ಲಿ ಪೋಟೋ!
ಹಳ್ಳಿಗಳಲ್ಲಿ ಶೂಟಿಂಗ್ ಅವಕಾಶ ಕೊಡುತ್ತಿಲ್ಲ. ವಾರ್ತಾ ಇಲಾಖೆಯಿಂದಲೇ ಶೂಟಿಂಗ್ ಗೆ ಪರ್ಮಿಷನ್ ಸಿಗುತ್ತಿಲ್ಲ. ಹೀಗಾಗಿ ಬಿಗ್ ಸ್ಟಾರ್ ಸಿನಿಮಾಗಳು ಚಿತ್ರೀಕರಣಕ್ಕೆ ಹೋಗದೆ ಉಳಿದು ಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.