
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಸೆ.3, 2021ರಂದು ಜ್ಯೂನಿಯರ್ ಚಿರುಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಮೇಘನಾ ಪುತ್ರನಿಗೆ ಆಯ್ಕೆ ಮಾಡಿರುವ ಹೆಸರು ಸಖತ್ ಡಿಫರೆಂಟ್ ಆಗಿದೆ.
ಇಂದು ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೊಟೇಲ್‌ನಲ್ಲಿ ಜ್ಯೂನಿಯರ್ ಚಿರು ನಾಮಕರಣ ಮಾಡಿದ್ದಾರೆ. ಬೆಳಗ್ಗೆಯಿಂದ ಆರಂಭವಾಗಿರುವ ಪೂಜೆಯಲ್ಲಿ ಚಿರಂಜೀವಿ ಸರ್ಜಾ ಪೋಷಕರೂ ಭಾಗಿಯಾಗಿದ್ದಾರೆ. ಮೊಮ್ಮಗನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪೂಜೆ ಮಾಡಿದ್ದಾರೆ ಚಿರಂಜೀವಿ ಪೋಷಕರು. ರಾಯನ್ ರಾಜ್ ಎಂದು ನಾಮಕರಣ ಮಾಡಿರೋ ಕುಟುಂಬ. ಸಂಸ್ಕೃತದಲ್ಲಿ ರಾಯನ್ ರಾಜ್ ಎಂದರೆ ಯುವರಾಜ ಅಂತ ಅರ್ಥ.
ಚೆನ್ನೈನಲ್ಲಿ ವಾಸವಿರುವ ಅರ್ಜುನ್ ಸರ್ಜಾ ನಾಮಕರಣಕ್ಕೆ ಆಗಮಿಸಲಾಗದ ಕಾರಣ ವಿಡಿಯೋ ಕಾಲ್ ಮೂಲಕ ಎಲ್ಲರೊಂದಿಗೆ ಮಾತನಾಡಿದ್ದಾರೆ. ಧ್ರುವ ಸರ್ಜಾ, ಪ್ರೇರಣಾ ಅರ್ಜಾ, ಸೂರಜ್, ತೇಜ್ ರಾಜ್ ಸೇರಿ ಕುಟುಂಬಸ್ಥರು ನಾಮಕರಣದಲ್ಲಿ ಭಾಗಿಯಾಗಿದ್ದರು. ಜ್ಯೂನಿಯರ್ ಹುಟ್ಟುವ ಮುನ್ನವೇ ಧ್ರುವ ಸರ್ಜಾ ಬೆಳ್ಳಿ ತೊಟ್ಟಿಲು ಗಿಫ್ಟ್ ನೀಡಿದ್ದರು. ಇಂದು ನಾಮಕರಣದಲ್ಲಿ ಆ ಬೆಳ್ಳಿ ತೊಟ್ಟಿಲಿಗೆ ಹೂವಿನ ಅಲಂಕಾರ ಮಾಡಿ ಬಳಸಿದ್ದಾರೆ.
10 ತಿಂಗಳ ಬಳಿಕ ಪುತ್ರನಿಗೆ ನಾಮಕರಣ ಮಾಡುತ್ತಿರುವ ಮೇಘನಾ ರಾಜ್ ಹೋಟೆಲ್ ಎಂಟ್ರೆನ್ಸ್‌ನಲ್ಲಿ 'ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಲಿಟಲ್ ಪ್ರಿನ್ಸ್ ನಾಮಕರಣಕ್ಕೆ ಸ್ವಾಗತ,' ಎಂದು ಬೋರ್ಡ್ ಹಾಕಿದ್ದಾರೆ. ಇಡೀ ಹೋಟೆಲ್‌ನ ಬಲೂನ್‌ಗಳಿಂದ ಅಲಂಕಾರ ಮಾಡಲಾಗಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.