
ಲೂಸ್ ಮಾದ ಯೋಗಿ ನಾಯಕನಾಗಿರುವ ‘ಲಂಕೆ’ ಚಿತ್ರ ಗಣೇಶ ಹಬ್ಬದಂದು(ಸೆ 10) ಥಿಯೇಟರ್‌ಗೆ ಬರಲಿದೆ. ರಾಜ್ಯಾದ್ಯಂತ ಸುಮಾರು 200 ಥಿಯೇಟರ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ.
‘ಈಗ ತಮಿಳು, ತೆಲುಗು ಸಿನಿಮಾಗಳೆಲ್ಲ ನಮ್ಮ ಥಿಯೇಟರ್‌ಗೆ ಲಗ್ಗೆ ಇಡಲಾರಂಭಿಸಿವೆ. ಇದು ಕನ್ನಡ ಚಿತ್ರರಂಗದ ಮಾನಾಭಿಮಾನದ ಪ್ರಶ್ನೆ. ಕನ್ನಡಿಗರು ಒಳ್ಳೆಯ ಸಿನಿಮಾವನ್ನು ಯಾವತ್ತೂ ಕೈಬಿಡಲ್ಲ. ಮನಸ್ಸು ಮಾಡಿದರೆ ಇಲ್ಲಿ ಯಾವುದೂ ಅಸಾಧ್ಯ ಅಲ್ಲ ಅನ್ನೋದನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದೀವಿ. ಜೊತೆಗೆ ಶಿಕ್ಷಣದ ಮಹತ್ವವನ್ನು ಚಿತ್ರ ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಇಂದಿನ ಪರಿಸ್ಥಿತಿಯಿಂದ ಜನ ಬಸವಳಿದಿದ್ದಾರೆ.ಈ ಹಿನ್ನೆಲೆಯಲ್ಲಿ ಪಕ್ಕಾ ಮನರಂಜನೆಯ ಈ ಚಿತ್ರವನ್ನು ಅವರಿಗಾಗಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ನಿರ್ದೇಶಕ ರಾಮ್ ಪ್ರಸಾದ್ ಹೇಳಿದ್ದಾರೆ.
ಚಿತ್ರಕ್ಕೆ ಎಸ್ತರ್ ನೊರೋನ್ಹಾ, ಕಾವ್ಯಾ ಶೆಟ್ಟಿ ಹಾಗೂ ಕೃಷಿ ತಪಂಡ ನಾಯಕಿಯರು. ಸಂಚಾರಿ ವಿಜಯ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ರಮೇಶ್ ಬಾಬು ಸಿನಿಮಟೋಗ್ರಫಿ ಇದೆ. ಪಟೇಲ್ ಶ್ರೀನಿವಾಸ್ ಚಿತ್ರದ ನಿರ್ಮಾಪಕರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.