
ಪದ್ಮಶ್ರೀ ಪುರಸ್ಕೃತ ಕಲಾವಿದೆ ಬಿ ಜಯಶ್ರೀ, ‘ವಿಜಯ್ ಚೇತನ ಆಗಿದ್ದಾರೆ ಅಂದುಕೊಂಡು, ಅವರ ಹೆಸರಲ್ಲಿ ಒಳ್ಳೊಳ್ಳೆ ಕೆಲಸ ಮಾಡೋಣ’ ಎಂದರು.
ರಂಗಾಯಣ ರಘು, ‘ಸಂಚಾರಿ ವಿಜಯ್ ಯಾವ ರೀತಿ ಪಾತ್ರದೊಳಗೆ ಪಾತ್ರವಾಗುತ್ತಿದ್ದ ಅಂದರೆ ಆತನ ನಟನೆಯ ‘ಅವನಲ್ಲ, ಅವಳು’ ಚಿತ್ರ ನೋಡಿ ದೆಹಲಿಯ ರಾಷ್ಟ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದವರೊಬ್ಬರು ತೃತೀಯ ಲಿಂಗಿಯೊಬ್ಬರಿಂದಲೇ ಈ ನಟನೆ ಮಾಡಿಸಲಾಗಿದೆ ಅಂತ ವಾದಕ್ಕೆ ನಿಂತಿದ್ದರು. ಕೊನೆಗೆ ಆ ಹುಡುಗ ನಮ್ಮ ಸಂಚಾರಿ ತಂಡದವನು, ತೃತೀಯ ಲಿಂಗಿಯಲ್ಲ ಅಂತ ಮನದಟ್ಟು ಮಾಡಲು ಸಾಕಾಗಿ ಹೋಯ್ತು’ ಎಂದರು.
ನಾಯಕಿ ಮಾತಂಗಿ, ‘ಹೀರೋಯಿನ್ ಅಂದ ಮಾತ್ರಕ್ಕೆ ಗೊಂಬೆ ಥರ ಸಿನಿಮಾದಲ್ಲಿ ಬಂದು ಹೋಗೋದು ನನಗಿಷ್ಟವಿಲ್ಲ. ಆದರೂ ರಂಗಭೂಮಿಯವರೇ ತುಂಬಿದ್ದ ಈ ಚಿತ್ರದ ಶೂಟಿಂಗ್‌ನಲ್ಲಿ ನೀರಿಂದ ತೆಗೆದ ಮೀನಿನಂತಾಗಿದ್ದೆ. ಆಗ ಧೈರ್ಯ ತುಂಬಿದ್ದು ವಿಜಯ್’ ಎಂದು ನೆನೆದರು.
ನಿರ್ದೇಶಕ ಅರವಿಂದ ಕುಪ್ಳೀಕರ್, ‘ಈಗ ಅವನೊಬ್ಬ ಇರ್ಬೇಕಿತ್ತು, ಇದ್ದಾನೆ. ಉಳಿದಂತೆ ಈ ಚಿತ್ರವನ್ನು ಇಷ್ಟಪಟ್ಟು ಮಾಡಿದ್ದೀವಿ. ಹೊಸ ಬಗೆಯ ಈ ಚಿತ್ರ ಜನರಿಗೆ ಇಷ್ಟವಾಗುವ ಧೈರ್ಯ ಇದೆ’ ಎಂದು ಹೇಳಿದರು.
ನಿರ್ಮಾಪಕ ನಾಗರಾಜ ಸೋಮಯಾಜಿ, ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಅಚ್ಯುತ ಕುಮಾರ್, ಶ್ರೀನಿವಾಸ ಮೇಷ್ಟು್ರ, ಸಿನಿಮಾಟೋಗ್ರಾಫರ್ ಅದ್ವೈತ್ ಉಪಸ್ಥಿತರಿದ್ದರು. ರಂಗಗೀತೆಗಳು, ರಂಗಭೂಮಿ ಮೆಲುಕುಗಳೂ ಸಿನಿಮಾದೊಂದಿಗೆ ಸೇರಿ ಸಿನಿ-ರಂಗದ ವಾತಾವರಣವಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.