ಇವರೆಲ್ಲ ಶಿಕ್ಷಕರ ಪಾತ್ರದಲ್ಲಿ ನಟಿಸಿರುವ ಕನ್ನಡ ನಟನಟಿಯರು, ನೆನಪಿದೆಯಾ ನಿಮಗೆ...?

By Shriram BhatFirst Published Sep 5, 2024, 5:32 PM IST
Highlights

ಅನೇಕರು ಕನ್ನಡ ಚಿತ್ರರಂಗದಲ್ಲಿ ಶಾಲಾ ಶಿಕ್ಷಕರು ಹಾಗೂ ಕಾಲೇಜು ಅಧ್ಯಾಪಕರ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರೆಲ್ಲರೂ ಇಂದು ಕನ್ನಡ ಸಿನಿಪ್ರೇಕ್ಷಕರಿಗೆ ಪಾತ್ರಗಳ ರೂಪದಲ್ಲಿ ಪತ್ಯಕ್ಷರಾಗುತ್ತಿದ್ದಾರೆ. ಶಿಕ್ಷಕರ ಪಾತ್ರ ಮಾಡಿದ ನಟನಟಿಯರಿಗೂ ಅದು ಮರೆಯಲಾಗದ ಅನುಭವ..

ಇಂದು (ಸೆಪ್ಟೆಂಬರ್ 05) ಶಿಕ್ಷಕರ ದಿನಾಚರಣೆ (Teachers Day). ಹಲವರು ತಮ್ಮ ಶಾಲಾ ಶಿಕ್ಷಕರಿಗೆ, ಕೆಲವರು ತಮ್ಮ ಹವ್ಯಾಸ ಅಥವಾ ವೃತ್ತಿಗೆ ಸಂಬಂಧಿಸಿದ ಶಿಕ್ಷಕರಿಗೆ ಧನ್ಯವಾದ ತಿಳಿಸಿ, ಮೆಸೇಜ್ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಾರೆ. ಕೆಲವರು ಸ್ವತಃ ಹೋಗಿ ವಿಶ್ ಮಾಡಿರಲಿಕ್ಕೂ ಸಾಕು. ಆದರೆ, ನಾವಿಲ್ಲಿ ಕನ್ನಡ ಸಿನಿಮಾಗಳಲ್ಲಿ ಶಿಕ್ಷಕರ ಪಾತ್ರದಲ್ಲಿ ನಟಿಸಿದ್ದ ನಟನಟಿಯರು ಯಾರು ಎಂಬುದನ್ನು ನೋಡೋಣ.

70-80ರ ದಶಕದಿಂದಲೂ ಕನ್ನಡ ಸಿನಿಮಾಗಳಲ್ಲಿ ಶಿಕ್ಷಕರ ಪಾತ್ರ ಪೋಷಣೆ ಆಗುತ್ತಲೆ ಬಂದಿದೆ. 1972ರಲ್ಲಿ ಬಿಡುಗಡೆಯಾದ ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಸ್ಟ್ರು ಪಾತ್ರದಲ್ಲಿ ನಟಿಸಿ ಅದಕ್ಕೊಂದು ಘನತೆ ತಂದುಕೊಟ್ಟವರು ನಟ ಅಶ್ವಥ್. ವಿಷ್ಣುವಧ್ನ್ ನಟಿಸಿ, ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ 'ನಾಗರಹಾವು' ಚಿತ್ರದಲ್ಲಿ ನಟಿ ಆರತಿ ನಾಯಕಿಯಾಗಿ ನಟಿಸಿದ್ದರು. ಆ ಚಿತ್ರ ಸೂಪರ್ ಹಿಟ್ ದಾಖಲಿಸಿತ್ತು. ಜೊತೆಗೆ, ಚಾಮಯ್ಯ ಮೇಸ್ಟ್ರು ಪಾತ್ರ ಕೂಡ ತುಂಬಾ ವಿಶೇಷ ಎನ್ನಿಸಿತ್ತು. 

Latest Videos

ಕೊನೆಯ ಕ್ಷಣದಲ್ಲಿ ಕುಂಕುಮ ಕೇಳಿದ್ಯಾಕೆ ಟಾಲಿವುಡ್ ಸ್ಟಾರ್ ನಟಿ ಕನ್ನಡತಿ ಸೌಂದರ್ಯ..?

ಕನ್ನಡ ಚಿತ್ರರಂಗದಲ್ಲಿ ನಟರಾದ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಜಗ್ಗೇಶ್, ರವಿಚಂದ್ರನ್ ಹೀಗೆ ಅನೇಕರು ಶಿಕ್ಷಕರ ಪಾತ್ರದಲ್ಲಿ ನಟಿಸಿದ್ದಾರೆ, ನಟಿಯರಾದ ರಮ್ಯಾ, ರಚಿತಾ ರಾಮ್ ಕೂಡ ಶಿಕ್ಷಕಿಯರ ಪಾತ್ರದಲ್ಲಿ ಮಿಂಚಿದ್ದಾರೆ. ಇವರಲ್ಲದೇ ಇನ್ನೂ ಕೆಲವು ನಟನಟಿಯರೂ ಕೂಡ ಈ ಲಿಸ್ಟ್‌ನಲ್ಲಿ ಇದ್ದಾರೆ. ಎರಡು ಕನಸು, ದಾರಿ ತಪ್ಪಿದ ಮಗ, ಒಲವು ಗೆಲುವು ಚಿತ್ರಗಳಲ್ಲಿ ನಟ ಡಾ ರಾಜ್‌ಕುಮಾರ್‌ ಕಾಲೇಜ್ ಪ್ರೊಫೆಸರ್‌ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನು ನಟ ವಿಷ್ಣುವರ್ಧನ್ ಅವರು ವಿಷ್ಣುಸೇನಾ ಹಾಗು ಪ್ರೇಮಲೋಕ ಚಿತ್ರಗಳಲ್ಲಿ ಕಾಲೇಜು ಅಧ್ಯಾಪಕರಾಗಿ ನಟಿಸಿದ್ದಾರೆ. ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ನವರಸನಾಯಕ ಜಗ್ಗೇಶ್‌ ಕನ್ನಡ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ಜೋಡಿಯಾಗಿ ಮೇಘನಾ ಗಾಂವ್ಕರ್‌ ಇಂಗ್ಲೀಷ್‌ ಶಿಕ್ಷಕಿಯಾಗಿ ನಟಿಸಿದ್ದಾರೆ. ದ್ರೋಣ ಹಾಗೂ ಸುಂದರಕಾಂಡ ಚಿತ್ರಗಳಲ್ಲಿ ನಟ ಶಿವರಾಜ್‌ಕುಮಾರ್‌ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾರೆ. 

ಕಿಚ್ಚ ಸುದೀಪ್ ಈ ಮಾತಿಗೆ 'ಡಿ ಬಾಸ್' ಫ್ಯಾನ್ಸ್ ಫಿದಾ ಆಗ್ಬಿಟ್ರಾ? ಸ್ವಲ್ಪ ಈ ಕಡೆ ಕಣ್ಣು ಹಾಯಿಸಿ..!

ಹಳ್ಳಿಮೇಷ್ಟ್ರು ಚಿತ್ರದಲ್ಲಿ ವಿ ರವಿಚಂದ್ರನ್‌ ಶಾಲಾ ಶಿಕ್ಷಕನಾಗಿ ನಟಿಸಿದ್ದಾರೆ. ಸಿದ್ಲಿಂಗು ಚಿತ್ರದಲ್ಲಿ ನಟಿ, ಮೋಹಕ ತಾರೆ ರಮ್ಯಾ ಮಂಗಳ ಟೀಚರ್‌ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ನಟಿ ರಚಿತಾ ರಾಮ್‌ ಅವರು ಕಳೆದ ವರ್ಷ ತೆರೆ ಕಂಡ ಕ್ರಾಂತಿ ಚಿತ್ರದಲ್ಲಿ ಉಷಾ ಟೀಚರ್‌ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ಟರ್‌ ಕಿಶನ್‌ ನಿರ್ದೇಶಿಸಿದ್ದ ಕೇರ್‌ ಆಫ್‌ ಫುಟ್‌ಪಾತ್‌ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ ಅವರು ಸರಸ್ವತಿ ಟೀಚರ್‌ ಪಾತ್ರದಲ್ಲಿ ನಟಿಸಿದ್ದಾರೆ. 

ಗುರು ಶಿಷ್ಯರು ಸಿನಿಮಾದಲ್ಲಿ ನಟ ಶರಣ್‌ ಅವರು ದೈಹಿಕ ಶಿಕ್ಷಕ ಮನೋಹರ ಪಾತ್ರದಲ್ಲಿ ನಟಿಸಿದ್ದಾರೆ. ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾದಲ್ಲಿ ನಟ ನಾಗಭೂಷಣ್‌ ಕನ್ನಡ ಲೆಕ್ಚರ್‌ ಮೋಹನ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಫ್ರೊಫೆಸರ್‌ ಹಾಗೂ ಗೂಂಡಾ ಗುರು ಚಿತ್ರದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಷ್ ಅವರು ಕಾಲೇಜ್‌ ಪ್ರೊಫೆಸರ್‌ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಕಿಯ ಬಲೆ, ರಾಮರಾಜ್ಯದಲ್ಲಿ ರಾಕ್ಷಸರು,  ಬಿಡುಗಡೆಯ ಬೇಡಿ ಸಿನಿಮಾಗಳಲ್ಲಿ ಹಿರಿಯ ನಟ ಅನಂತ್‌ನಾಗ್‌ ಶಾಲಾ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾರೆ.

ಹುಟ್ಟುಕಿವುಡರಾಗಿದ್ದ ನಟ ಬಾಲಣ್ಣ ಬದುಕಿನಲ್ಲಿ ನಡೆದ ಘನಘೋರ ದುರಂತವೇನು?

ಹೀಗೆ ಅನೇಕರು ಕನ್ನಡ ಚಿತ್ರರಂಗದಲ್ಲಿ ಶಾಲಾ ಶಿಕ್ಷಕರು ಹಾಗೂ ಕಾಲೇಜು ಅಧ್ಯಾಪಕರ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರೆಲ್ಲರೂ ಇಂದು ಕನ್ನಡ ಸಿನಿಪ್ರೇಕ್ಷಕರಿಗೆ ಪಾತ್ರಗಳ ರೂಪದಲ್ಲಿ ಪತ್ಯಕ್ಷರಾಗುತ್ತಿದ್ದಾರೆ. ಶಿಕ್ಷಕರ ಪಾತ್ರ ಮಾಡಿದ ನಟನಟಿಯರಿಗೂ ಅದು ಮರೆಯಲಾಗದ ಅನುಭವ ಎನ್ನಬಹುದು. ಒಟ್ಟಿನಲ್ಲಿ, ಈ ವರ್ಷದ ಶಿಕ್ಷಕರ ದಿನಾಚರಣೆ ಹಳೆಯ ಹಲವು ನೆನಪುಗಳಿಗೆ ಹಲವರಿಗೆ ಕಾರಣವಾಗಿದೆ ಎನ್ನಬಹುದು. 

click me!