ನೆನಪಿರಲಿ ಪ್ರೇಮ್ ತಾಯಿಗೆ ಕೊರೋನಾ ದೃಢ, ಸ್ಯಾಂಡಲ್ ವುಡ್‌ಗೂ ಕಂಟಕ

Published : Jul 13, 2020, 08:46 PM ISTUpdated : Jul 13, 2020, 08:51 PM IST
ನೆನಪಿರಲಿ ಪ್ರೇಮ್ ತಾಯಿಗೆ ಕೊರೋನಾ ದೃಢ, ಸ್ಯಾಂಡಲ್ ವುಡ್‌ಗೂ ಕಂಟಕ

ಸಾರಾಂಶ

ನಟ ನೆನಪಿರಲಿ ಪ್ರೇಮ್ ತಾಯಿಗೆ ಕೋರೋನಾ ಸೊಂಕು/ ಪ್ರೇಮ್ ತಾಯಿ ಶಕುಂತಲಾ ಗೆ ಕೋವಿಡ್ ಪಾಸಿಟಿವ್ / 66 ವಯಸ್ಸಾಗಿರೋ ಶಕುಂತಲಾ / ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಶಕುಂತಲಾ/

ಬೆಂಗಳೂರು(ಜು. 13) ಸ್ಯಾಂಡಲ್​ವುಡ್ ಗೂ ಕೊರೋನಾ ಕಾಟ ಶುರುವಾಗಿದೆ. ಚಿತ್ರನಟ ನೆನಪಿರಲಿ ಪ್ರೇಮ್​ ಅವರ ತಾಯಿಗೆ ಕೊರೋನಾ ಪಾಸಿಟಿವ್​ ಬಂದಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟ ಪ್ರೇಮ್​ ಅವರ ತಾಯಿಗೆ 66 ವರ್ಷ ವಯಸ್ಸಾಗಿದ್ದು, ಕಾಮಾಕ್ಷಿ ಪಾಳ್ಯದಲ್ಲಿ ನೆಲೆಸಿದ್ದರು. ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನಾ ಟೆಸ್ಟ್ ಮಾಡಿಸಿದಾಗ ದೃಢವಾಗಿದೆ.

ಬೆಂಗಳೂರಿನಲ್ಲಿ ಲಾಕ್ ಡೌನ್; ಏನಿರುತ್ತೆ? ಏನಿರಲ್ಲ?

ಕುಟುಂಬದವರು ಕೊರೋನಾ ಟೆಸ್ಟ್ ಮಾಡಿಸಿದ್ದು ಉಳಿದೆಲ್ಲರ ರಿಪೋರ್ಟ್ ನೆಗೆಟಿವ್ ಆಗಿದೆ. ಕನ್ನಡತಿ ನಟಿ ನವ್ಯಾ ಸ್ವಾಮಿ ಕೊರೋನಾ ಬಂದಿದ್ದನ್ನು ಅವರೇ ದೃಢಪಡಿಸಿದ್ದರು. ಅತ್ತ ಬಾಲಿವುಡ್  ಬಿಗ್ ಬಿ ಕುಟುಂಬಕ್ಕೆ ಕೊರೋನಾ ಕಂಟಕ ಶುರುವಾಗಿದೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ಎಲ್ಲರಿಗೂ ಕೊರೋನಾ ತಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!