ಭೂತ – ಪ್ರೇತಗಳ ರಸ್ತೆಯಲ್ಲಿ ಬೆವರಿದ ಶೈನ್ ಶೆಟ್ಟಿ ! ಶಂಕರಾಭರಣ ಸಿನಿಮಾಗೆ ರಿಷಬ್ ಮೆಚ್ಚುಗೆ

Published : Nov 24, 2026, 06:51 PM ISTUpdated : Nov 24, 2026, 06:52 PM IST
Shankarabharana

ಸಾರಾಂಶ

ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಸಿನಿಮಾ ಸುದ್ದಿ ಮಾಡ್ತಿದೆ. ಶೈನ್ ಶೆಟ್ಟಿ ಅಭಿನಯದ ಶಂಕರಾಭರಣಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ರಿಷಬ್ ಶೆಟ್ಟಿ, ಚಿತ್ರ ತಂಡದ ಬೆನ್ನು ತಟ್ಟಿದ್ದಾರೆ.

ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಶಂಕರಾಭರಣ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನವೆಂಬರ್ 20 ರಂದು ಚಿತ್ರ ಬಿಡುಗಡೆಯಾಗಿದ್ದು, ವಿಭಿನ್ನ ಕಥೆ ಹೊಂದಿರುವ ಚಿತ್ರಕ್ಕೆ ಉತ್ತಮ ಬೆಂಬಲ ಸಿಗ್ತಿದೆ. ಈಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಶಂಕರಾಭರಣ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೈನ್ ಶೆಟ್ಟಿ ಬೆನ್ನು ತಟ್ಟಿದ ರಿಷಬ್ ಶೆಟ್ಟಿ

ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ, ಪೋಸ್ಟ್ ಹಂಚಿಕೊಂಡಿದ್ದಾರೆ. ಶೈನ್ ಶೆಟ್ಟಿ ಅಭಿನಯದ ಶಂಕರಾಭರಣ ಸಿನಿಮಾ ಬಗ್ಗೆ ಮೆಚ್ಚುಗೆಯ ಕಮೆಂಟ್ ಮಾಡಿದ್ದಾರೆ. ಭಯಾನಕ ಮತ್ತು ಹಾಸ್ಯದ ವಿಶಿಷ್ಟ ಮಿಶ್ರಣದಿಂದ ಶಂಕರಾಭರಣ ಹೃದಯಗಳನ್ನು ಗೆಲ್ಲುವುದನ್ನು ನೋಡಲು ಸಂತೋಷವಾಗಿದೆ. ತಂಡದ ಶ್ರಮ ಮತ್ತು ಸಮರ್ಪಣೆಗೆ ಪ್ರೇಕ್ಷಕರಿಂದ ತುಂಬಾ ಪ್ರೀತಿ ಸಿಗುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗಿದೆ.ಸುಮಂತ್ ಭಟ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಶೈನ್ ಶೆಟ್ಟಿ,

ತನ್ವಿರಾಮ್, ತ್ರಿಲೋಕ್ ತ್ರಿವಿಕ್ರಮ್, ಉದಿತ್ ಖುರಾನಾ ಸೇರಿದಂತೆ ಇಡೀ ತಂಡಕ್ಕೆ ಶುಭಾಶಯ. ಚಿತ್ರ ಇನ್ನೂ ಹಲವು ದಿನಗಳ ಕಾಲ ಥಿಯೇಟರ್ಗಳಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಹತ್ತಿರದ ಥಿಯೇಟರ್ನಲ್ಲಿ ವೀಕ್ಷಿಸಿ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ, ಚಿತ್ರತಂಡವನ್ನು ಪ್ರೋತ್ಸಾಹಿಸಿ ಎಂದು ರಿಷಬ್ ಪೋಸ್ಟ್ ಹಾಕಿದ್ದಾರೆ. ರಿಷಬ್ ಪೋಸ್ಟ್ ಗೆ ಚಿತ್ರತಂಡದ ಸದಸ್ಯರು ಧನ್ಯವಾದ ಹೇಳಿದ್ದಾರೆ.

ಏನಿದು ಸಿನಿಮಾ ಕಥೆ?

ಶೈನ್ ಶೆಟ್ಟಿ ಅಭಿನಯದ ಈ ಚಿತ್ರವನ್ನು ಸುಮಂತ್ ಭಟ್ ನಿರ್ದೇಶಿಸಿದ್ದಾರೆ. ಇದೊಂದು ಹಾರರ್, ಕಾಮಿಡಿ, ಅಡ್ವೆಂಚರ್ ಸಿನಿಮಾ. ಬಸ್ ಚಾಲಕ ಕಂ ಮಾಲೀಕನ ಕಥೆ ಇದು. ತೌಡುಗೋಳಿ ರಸ್ತೆಯಲ್ಲಿ ಬಸ್ ಓಡಿಸುವಾಗ ನಡೆಯುವ ನಿಗೂಢ ಘಟನೆಗಳೇ ಚಿತ್ರದ ಕಥೆ. ಚಿತ್ರ ಹಾಸ್ಯದ ಜೊತೆ ಭಯ ಹುಟ್ಟಿಸೋದ್ರಿಂದ ಅಭಿಮಾನಿಗಳನ್ನು ಥಿಯೇಟರ್ ಬಳಿ ಸೆಳೆಯುತ್ತಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ರೆ ಸ್ಯಾಂಡಲ್ ವುಡ್ ತಾರೆಯರಿಂದ ಸಂಪೂರ್ಣ ಬೆಂಬಲ ಸಿನಿಮಾಕ್ಕೆ ಸಿಕ್ಕಿದೆ. ಈ ಹಿಂದೆ ಶಂಕರಾಭರಣ ಟೈಟಲ್ ಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಪುಷ್ಪ-2' ಗಳಿಕೆಯನ್ನು ಮುರಿದು ಮುನ್ನುಗ್ಗುತ್ತಿರುವ 'ರಾಮಾಯಣ' ಇನ್ನೂ ಎಷ್ಟು ಕೋಟಿ ಗಳಿಸಲಿದೆ ಗೊತ್ತಾ?
ಪತ್ರಿಕೆ ನೋಡಿ 'ತನ್ನನ್ನು ಸಿನಿಮಾದಿಂದ ತೆಗೆದ್ರಾ?' ಎಂಬ ಆತಂಕದಿಂದ ನಿರ್ದೇಶಕರ ಬಳಿ ಧಾವಿಸಿ ಬಂದಿದ್ದ ಅಣ್ಣಾವ್ರು!