
ಸ್ಯಾಂಡಲ್‌ವುಡ್ ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಸಿನಿಮಾ ರಂಗವನ್ನೇ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಮತ್ತಿಬ್ಬರು ನಟಿಯರಿಗೆ ಸಂಕಷ್ಟ ಎದುರಾಗಿದೆ. ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಡ್ರಗ್ ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. ಸಿಸಿಬಿ ಸ್ಯಾಂಡಲ್‌ವುಡ್ ನ ಇಬ್ಬರು ನಟಿಯರಿಗೆ ಶಾಕ್ ಕೊಟ್ಟಿದೆ. ನಟಿ ಸಂಜನಾ ಮತ್ತು ರಾಗಿಣಿ ಜೊತೆಗೆ ವಿರೇನ್ ಖನ್ನಾನ್ ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಅನುಮತಿ ಪಡೆದು ಸುಪ್ರೀಂ ನಲ್ಲಿ ಸಿಸಿಬಿ ಅರ್ಜಿ ಸಲ್ಲಿಸಿದೆ.
ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಲು ಸಾಧ್ಯವಿದೆ ಎಂದು ಕಾನೂನು ಇಲಾಖೆಯಿಂದ ಮಾಹಿತಿ ಸಿಕ್ಕಿದ ಬಳಿಕ ಗೃಹ ಇಲಾಖೆಯಿಂದ ಅನುಮತಿ ಪಡೆದು ಹೈಕೋರ್ಟ್ ಆದೇಶ ರದ್ದುಗೊಳಿಸುವಂತೆ ಸಿಸಿಬಿ, ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.
ಬಂಧಿತ ನಟಿ ರನ್ಯಾಳಿಂದ ರೂಸಿ ಹೋಗಿದ್ದ ಪತಿ ಜತಿನ್ ಹುಕ್ಕೇರಿ ಯಾರು? ಕುಟುಂಬದ ಹಿನ್ನೆಲೆ ಏನು?
ಮಾದಕ ವಸ್ತು ಸರಬರಾಜಿಗೆ ಸಹಕಾರ ನೀಡಿರುವ ಮತ್ತು ಮಾದಕ ವಸ್ತು ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ನಟಿಯರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್ ಎಫ್‌ಐಆರ್ ರದ್ದು ಮಾಡಿತ್ತು. ಇದೀಗ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಸಿಸಿಬಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಒಂದು ವೇಳೆ ಸಿಸಿಬಿ ಮನವಿಗೆ ಸುಪ್ರೀಂ ಕೋರ್ಟ್ ಒಪ್ಪಿದ್ದೇ ಆದಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿಗೆ ಮತ್ತು ಸಂಜನಾಗೆ ಮತ್ತೆ ಸಂಕಷ್ಟ ತಪ್ಪಿದ್ದಲ್ಲ.
ಸ್ಯಾಂಡಲ್‌ವುಡ್ ಸ್ಟಾರ್‌ಗಳಿಗೆ ಮುಗಿಯದ ಜೈಲಿನ ನಂಟು, ಆಗ ದರ್ಶನ್, ಈಗ ರನ್ಯಾ!
ಮಾದಕ ದ್ರವ್ಯಗಳನ್ನು ಸೇವಿಸುವ ಮತ್ತು ಸರಬರಾಜು ಮಾಡುವ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆಯಡಿಯಲ್ಲಿ 2020ರ ಸೆಪ್ಟೆಂಬರ್ ನಲ್ಲಿ ತುಪ್ಪದ ಬೆಡಗಿ ರಾಗಿಣಿ ಬಂಧನವಾಗಿತ್ತು. 4 ತಿಂಗಳ ಬಳಿಕ 2021ರ ಜನವರಿ ಕೊನೆಯವಾರದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಬಳಿಕ ತನ್ನ ಮೇಲಿನ ಪ್ರಕರಣ ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ರಾಗಿಣಿ ಮೇಲಿರುವ ಎಫ್‌ಐಆರ್ ರದ್ದುಗೊಳಿಸಿತ್ತು.
ಇನ್ನೂ ಇದೇ ಡ್ರಗ್ಸ್ ಪ್ರಕರಣದಲ್ಲಿ 2020 ಸೆಪ್ಟೆಂಬರ್ 8ರಂದು ನಟಿ ಸಂಜನಾ ಗಲ್ರಾನಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಸಂಜನಾರನ್ನು ಬಂಧಿಸಿತ್ತು. ರೇವ್ ಪಾರ್ಟಿಗಳಲ್ಲಿ ಸಂಜನಾ ಡ್ರಗ್ಸ್ ಗೆ ಅವಕಾಶ ಮಾಡಿಕೊಂಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ನಟಿ ಸುಮಾರು ನಾಲ್ಕು ತಿಂಗಳು ಜೈಲುವಾಸ ಅನುಭವಿಸಿ ಬಳಿಕ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಬಳಿಕ ಸಂಜನಾ ತಮ್ಮ ಮೇಲಿನ ಪ್ರಕರಣವನ್ನು ರದ್ದು ಮಾಡುವಂತೆ ಮನವಿ ಸಲ್ಲಿಸಿ ಹೈಕೋರ್ಟ್ ಸಂಜನಾ ಮೇಲಿರುವ ಎಫ್‌ಐಆರ್ ರದ್ದುಗೊಳಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.