ಗೌರವ ಪಡೆದು ಪ್ರಥಮ್ ಮಾಡಿರೋ ಪೋಸ್ಟ್ ವೈರಲ್.. 'ಅಣ್ಣಾ, ಬಾಸು ಅನ್ನೋಕು ದುಡ್ಡು ಕೊಡ್ತಾರಪ್ಪ..'

Published : Mar 12, 2025, 03:45 PM ISTUpdated : Mar 12, 2025, 04:04 PM IST
ಗೌರವ ಪಡೆದು ಪ್ರಥಮ್ ಮಾಡಿರೋ ಪೋಸ್ಟ್ ವೈರಲ್.. 'ಅಣ್ಣಾ, ಬಾಸು ಅನ್ನೋಕು ದುಡ್ಡು ಕೊಡ್ತಾರಪ್ಪ..'

ಸಾರಾಂಶ

ಪ್ರಥಮ್ ಅವರಿಗೆ ಅಯೋಧ್ಯೆಯ ಮಮೆಂಟೋ ಬಂದಿದೆ, ಅದನ್ನು ಅವರು ಗೌರವಪೂರ್ವಕವಾಗಿ ಸ್ವೀಕರಿಸಿದ್ದಾರೆ. ಆದರೆ, ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ವಿವಾದಾತ್ಮಕವಾಗಿದೆಯಾ? ಆ ಬಗ್ಗೆ ಬೇರೆಯವರು ಹೇಳೋ...

ನಟ ಪ್ರಥಮ್ (Olle Hudga Pratham) ಅವರು 'ಎಕ್ಸ್‌'ನಲ್ಲಿ ಅದೊಂದು ಟ್ವೀಟ್ ಮಾಡಿದ್ದಾರೆ. ಯಾವುದು ಅದು ಎಂದು ನೋಡಿದರೆ, ಅವರನ್ನು ಯಾರೋ ಗೌರವಿಸಿರೊದು, ಅವರಿಗೆ ಅಯೋಧ್ಯೆಯ ಫಲಕ (Memento) ಕೊಟ್ಟಿರೋದು, ಅದೂ ಕೂಡ ಸಾಕ್ಷಾತ್ ಅಯೋಧ್ಯೆ ಸ್ಮರಣಿಕೆ ನೀಡಿದ್ದಾರೆ. ಆ ಬಗ್ಗೆ ಖುಷಿಯಿಂದ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿರೋ ಪ್ರಥಮ್, ಅಲ್ಲೂ ಕೂಡ ಎಂದಿನಂತೆ ನಟ ದರ್ಶನ್‌ ಅವರನ್ನು ಎಳೆದು ತಂದಿದ್ದಾರಾ? ಪ್ರಥಮ್ ಪೋಸ್ಟ್ ನೋಡಿ ನೀವೇ ನಿರ್ಧರಿಸಿ.. 

ಹಾಗಿದ್ದರೆ ಪ್ರಥಮ್ X ನಲ್ಲಿ ಅದೇನು ಪೋಸ್ಟ್ ಮಾಡಿದ್ದಾರೆ ನೋಡಿ.. 'ಗೌರವ ಕೇಳಿ ಪಡೆಯೋದಲ್ಲ; ಯೋಗ್ಯತೆಯಾನುಸಾರ ಗಳಿಸಿಕೊಳ್ಳೋದು; ಈಗಂತೂ ಜೈಕಾರಕ್ಕೂ ದುಡ್ಡು,social media ಅಣ್ಣಾ ಬಾಸು ಅನ್ನೋಕು ದುಡ್ಡು ಕೊಡ್ತಾರಪ್ಪ! ಸಾಕ್ಷಾತ್ ಅಯೋದ್ಯೆ #ರಾಮನೇ ಮನೆಗೆ ಬಂದಮೇಲೆ ಇನ್ನೇನು ಬೇಕು ಈ ಜೀವಕ್ಕೆ? ನಾನೊಬ್ಬ, ಹಿಂದು, ಭಾರತೀಯ, ಕನ್ನಡಿಗ ಇದೆಲ್ಲಾ ಆದ್ಮೇಲೆ ಈಗ acting ಕಲೀತಾ ಇರೋ ಪುಟ್ಟ ಕಲಾವಿದ..' ಎಂದು ಬರೆದುಕೊಂಡಿದ್ದಾರೆ ನಟ ಪ್ರಥಮ್. 

ಇದು.. ಇದು.. ವೈರಲ್‌ ಆಗ್ಬೇಕಾಗಿರೋದು! ಡಾ ರಾಜ್‌ಕುಮಾರ್‌ ಬಗ್ಗೆ ಕಿಶೋರ್‌ ಹೇಳಿದ್ದೇನು?

ಹೌದು, ಪ್ರಥಮ್ ಅವರಿಗೆ ಅಯೋಧ್ಯೆಯ ಮಮೆಂಟೋ ಬಂದಿದೆ, ಅದನ್ನು ಅವರು ಗೌರವಪೂರ್ವಕವಾಗಿ ಸ್ವೀಕರಿಸಿದ್ದಾರೆ. ಆದರೆ, ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ವಿವಾದಾತ್ಮಕವಾಗಿದೆಯಾ? ಆ ಬಗ್ಗೆ ಬೇರೆಯವರು ಹೇಳೋದಕ್ಕಿಂತ ನೀವೇ ನೋಡಿ ನಿರ್ಧರಿಸಿ.. ಆದರೆ, 'ಅದ್ಯಾಕೆ ಪಡೆದುಕೊಂಡ ಗೌರವದ ಪೋಸ್ಟ್‌ನಲ್ಲೂ ಕೂಡ ಬಾಸ್ ಬರ್ಬೇಕು? ಬಾಸ್ ಬಿಟ್ಟು ಅವ್ರಿಗೆ ಜೀವನವೇ ಇಲ್ವಾ?' ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕಾಮೆಂಟ್ ಹಾಕಿದ್ದಾರೆ. 

ಅದೆಲ್ಲಾ ಅವರಿಗೆ ಬಿಟ್ಟಿದ್ದು, ಅವರಿಗೆ ಬಂದಿರುವ ಗೌರವಕ್ಕೆ ಅವರು ಮಾಡಿರುವ ಪೋಸ್ಟ್ ಅವರಿಷ್ಟ. ಆದರೆ ಅಲ್ಲೂ ಕೂಡ ವಿವಾದ ಸೃಷ್ಟಿಯಾಗುವಂತೆ ಉದ್ಧೇಶಪೂರ್ವಕವಾಗಿ ನೋಡಿಕೊಂಡ್ರಾ ಪ್ರಥಮ್? ಗೊತ್ತಿಲ್ಲ, ಅವರನ್ನೇ ಕೇಳ್ಬೇಕು.. ಆದ್ರೆ, ನಟ ಪ್ರಥಮ್ ಅವರು ತಮ್ಮ ಹಾಗೂ ನಟ ದರ್ಶನ್ ಅಭಿಮಾನಿಗಳ ಮಧ್ಯೆ ಇರೋ ಬೆಂಕಿ ಆರಲು ಬಿಡೋದೇ ಇಲ್ಲ. ಅದಕ್ಕೆ ಆಗಾಗ ತುಪ್ಪ ಸುರಿಯುತ್ತಲೇ ಇರುತ್ತಾರೆ. ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ಮಾತು ಕೇಳಿ ಬರುತ್ತಿದೆ. ಏನಂತಾರೋ ಪ್ರಥಮ್..?!

ಈ ಮಹಾನಗರದಲ್ಲಿ ಏನಾಗುತ್ತಿದೆ..? ಮಗ, ಮದರ್ ಇಂಡಿಯಾ ಸೇರಿ ಆಪ್ತರನ್ನು ಹೊರಹಾಕಿದ್ದೇಕೆ ದರ್ಶನ್?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!