
ನಟ ಕಿಶೋರ್ (Kishore) ಮತ್ತೆ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಅವರು ಯಾವುದಾದರೂ ವಿವಾದ ಹುಟ್ಟುಹಾಕುತ್ತಾರೆ. ಅಥವಾ, ಹುಟ್ಟಿಕೊಂಡಿರುವ ವಿವಾದ ಬಗ್ಗೆ ಮಾತನ್ನಾಡುತ್ತಾರೆ. ಒಟ್ಟಿನಲ್ಲಿ ನಟ ಕಿಶೋರ್ ಎಂದರೆ ಅವರೊಬ್ಬ ವಿವಾದಾದ್ಮಕ ನಟ ಎಂದೇ ಹಲವರ ಅನಿಸಿಕೆ. ಆದರೆ, ಅದು ಎಲ್ಲಾ ಸಮಯದಲ್ಲಿ ನಿಜವಲ್ಲ, ಅದಕ್ಕೊಂದು ಸಾಕ್ಷಿ ಇಲ್ಲಿದೆ.. ಇದೀಗ ನಟ ಕಿಶೋರ್ ಅವರು ಕನ್ನಡದ ಮೇರು ನಟ, ಅಣ್ಣಾವ್ರು ಡಾ ರಾಜ್‌ಕುಮಾರ್ ಬಗ್ಗೆ ಯಾವತ್ತೋ ಆಡಿದ್ದ ಮಾತು ಭಾರೀ ವೈರಲ್ ಆಗುತ್ತಿದೆ. ಅದೇನು ನೋಡಿ..
'ನನಗೆ ಸ್ಪೂರ್ತಿ ಡಾ ರಾಜ್‌ಕುಮಾರ್.. ನಾನು ಅಣ್ಣಾವ್ರ ಹಂತದಲ್ಲೇ ಪ್ರಯತ್ನ ಪಡ್ತೀನಿ.. ಅಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ನನ್ನಿಂದ ಆಗಲ್ಲ.. ಆದ್ರೆ, ನನ್ನ ಸಿನಿಮಾದಲ್ಲಿ ಅವರ ರೀತಿಯಲ್ಲೇ ನನ್ನ ಪ್ರಯತ್ನ ಇರುತ್ತೆ.. ಡಾ ರಾಜ್‌ಕುಮಾರ್ ಸಿನಿಮಾಗಳಲ್ಲಿ ಬಂಡಾಯ, ಹೋರಾಟ, ಪ್ರತಿಭಟನೆ ಹಾಗೂ ಶೋಷಣೆಯ ವಿರುದ್ಧದ ಧ್ವನಿ ಎಲ್ಲವೂ ಇರುತ್ತೆ.. ಅದು ವಿಭಿನ್ನವಾಗಿ ಹಾಗೂ ತುಂಬಾ ಪರಿಣಾಮಕಾರಿಯಾಗಿ ಇರುತ್ತಿದ್ದವು. ಅದೇ ರೀತಿ ನಾನು ಕೂಡ ಸಿನಿಮಾದಲ್ಲಿ ಮಾಡಲು ಇಷ್ಟಪಡುತ್ತೇನೆ..
ಈ ಮಹಾನಗರದಲ್ಲಿ ಏನಾಗುತ್ತಿದೆ..? ಮಗ, ಮದರ್ ಇಂಡಿಯಾ ಸೇರಿ ಆಪ್ತರನ್ನು ಹೊರಹಾಕಿದ್ದೇಕೆ ದರ್ಶನ್?
ತಿರಸ್ಕಾರಕ್ಕೆ ಒಳಗಾದಾಗ ದೂರುತ್ತಾ ಕೂರುವುದೇ ಮುಖ್ಯವಲ್ಲ.. ತಿರಸ್ಕಾರ, ಶೋಷಣೆಯನ್ನು ಸ್ವೀಕರಿಸಿ ನಾನೂ ಕೂಡ ನಿನ್ನಂತೆ ಎಂಬುದನ್ನು ತೋರಿಸುವುದು ಮುಖ್ಯ.. ಸಮಾನತೆಯ ಬಗ್ಗೆ ಮಾತನ್ನಾಡುವುದಕ್ಕೂ ತೋರಿಸಿಕೊಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಡಾ ರಾಜ್‌ಕುಮಾರ್ ಸಿನಿಮಾಗಳಲ್ಲಿ ಅದಾಗುತ್ತಿತ್ತು. ಈಗ ನೋಡಿದರೂ ಅವರ ಸಿನಿಮಾಗಲ್ಲಿ ಮೂಡಿ ಬಂದಿದ್ದ ಅಂಥ ವಿಚಾರಗಳು ಅದ್ಭುತ ಮತ್ತು ಅಚ್ಚರಿ ಹುಟ್ಟಿಸುತ್ತವೆ. ಈ ವಿಷ್ಯದಲ್ಲಿ ಅಣ್ಣಾವ್ರು, ವರದಪ್ಪ, ಪಾರ್ವತಮ್ಮನವರು ಹಾಗೂ ಇಡೀ ಟೀಂಗೆ ಕ್ರೆಡಿಟ್ ಕೊಡಬೇಕು ಎಂದಿದ್ದಾರೆ ನಟ ಕಿಶೋರ್.
ಹೌದು, ನಟ ಕಿಶೋರ್ ಅವರು ಡಾ ರಾಜ್‌ಕುಮಾರ್ ಅವರಂತೆ ಸಿನಿಮಾಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾಗಿದ್ದಾರೆ. ಅಣ್ಣಾವ್ರ ಸಿನಿಮಾಗಳಲ್ಲಿ ಇರುವ ಸಾಮಾಜಿ ಕಳಕಳಿ ತಮ್ಮ ಸಿನಿಮಾಗಳಲ್ಲೂ ಇರಬೇಕೆಂದು ಎಂದು ನಟ ಕಿಶೋರ್ ಅವರು ಬಯಸುತ್ತಾರೆ. ಅದನ್ನು ಆದಷ್ಟೂ ಫಾಲೋ ಮಾಡಲು, ಸಮಾಜದಲ್ಲಿ ಶೋಷಣೆ ತಡೆಗಟ್ಟಲು ಮುಂದಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಅವರು ಹಾಗೆ ಮಾಡಬೇಕು ಎಂದರೆ, ಇನ್ಮುಂದೆ ಅಂಥ ಅವರು ಅಂಥ ಪಾತ್ರದ ಆಯ್ಕೆ ಮಾಡಬೇಕು ಅಥವಾ ಅವರೇ ಅಂಥ ಸಿನಿಮಾ ನಿರ್ಮಾಣ & ನಿರ್ದೇಶನ ಮಾಡಬೇಕು. ಮಾಡಬಹುದು, ಭವಿಷ್ಯ ಯಾರ ಸ್ವತ್ತೂ ಅಲ್ಲ..!
ಡಾ ರಾಜ್‌ಕುಮಾರ್ ಬಗೆಗಿನ ಎಲ್ಲಾ ವದಂತಿ-ವಿವಾದಗಳಿಗೆ ಅಂದೇ ತೆರೆ ಎಳೆದಿದ್ದಾರೆ ಪಾರ್ವತಮ್ಮ.. ಇಲ್ನೋಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.