ಹೀರೋ ಆದ ಹಾಸ್ಯ ನಟ ಕೆಂಪೇಗೌಡ; ಆತ್ಮ, ದೇಹದ ಕತೆ ಹೇಳುವ ಕಟ್ಲೆ!

By Kannadaprabha NewsFirst Published Apr 5, 2021, 9:41 AM IST
Highlights

ಇವರನ್ನು ಹಲವಾರು ಚಿತ್ರಗಳಲ್ಲಿ ನೋಡಿರುತ್ತೀರಿ. ‘ಬಂದು ಹೋದರು’ ಎನ್ನುವ ಪಾತ್ರಗಳಿಂದ ಶುರುವಾಗಿ ಗಮನ ಸೆಳೆಯುವ ಹಾಸ್ಯ ಪಾತ್ರಗಳ ತನಕ ಹತ್ತಾರು ರೀತಿಯ ಕ್ಯಾರೆಕ್ಟರ್‌ಗಳಿಗೆ ಜೀವ ತುಂಬಿದವರು. 

ಹೆಸರು ಕೆಂಪೇಗೌಡ. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕವೇ ನಕ್ಕು ನಲಿಸುವ ನಟ. ಹೀಗೆ ಕ್ಯಾರೆಕ್ಟರ್‌ ಅರ್ಟಿಸ್ಟ್‌ ಆಗಿ ಇಲ್ಲಿವರೆಗೂ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕೆಂಪೇಗೌಡ ಈಗ ಹೀರೋ ಆಗುತ್ತಿದ್ದಾರೆ. ಇವರು ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರದ ಹೆಸರು ‘ಕಟ್ಲೆ’.

ರಕ್ಷಿತ್‌ ಶೆಟ್ಟಿನಿರ್ಮಾಣದಲ್ಲಿ 'ಸಕುಟುಂಬ ಸಮೇತ';ರಾಹುಲ್‌ ಪಿಕೆ ನಿರ್ದೇಶನದ ಚಿತ್ರ! 

ಶಿರಸಿ, ಮಲೆನಾಡು ಭಾಗಗಳಲ್ಲಿ ಶೇ.70ರಷ್ಟುಚಿತ್ರೀಕರಣ ಮುಗಿಸಿದ್ದಾರೆ. ಸದ್ಯದಲ್ಲೇ ಕೊನೆಯ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಎಂ ಸಂಜೀವರಾವ್‌ ಸಂಗೀತಕ್ಕೆ ಡಾ ವಿ ನಾಗೇಂದ್ರ ಪ್ರಸಾದ್‌ ಹಾಗೂ ನಿರ್ದೇಶಕ ಚೇತನ್‌ ಕುಮಾರ್‌ ಹಾಡುಗಳನ್ನು ಬರೆಯುತ್ತಿದ್ದಾರೆ. ವೇದಾಥ್‌ರ್‍ ಜಯಕುಮಾರ್‌ ಕ್ಯಾಮೆರಾ ಚಿತ್ರಕ್ಕಿದೆ. ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಎಸ್‌ ಎಸ್‌ ವಿಧಾ. ಕೊರೋನಾ ಸಮಯದಲ್ಲಿ ಬರೆದುಕೊಂಡಿದ್ದ ಈ ಕತೆ ಸಿನಿಮಾ ಆಗಲು ನಿರ್ಮಾಪಕ ಭರತ್‌ ಗೌಡ ಕಾರಣ.

ಈ ವರ್ಷ ನನ್ನ 3 ಚಿತ್ರಗಳು ತೆರೆ ಕಾಣಲಿವೆ: ಪ್ರಿಯಾಂಕ ಉಪೇಂದ್ರ 

ಸೈನ್ಸ್‌ ಜೊತೆಗೆ ಕಲ್ಪನೆ ಬೆರೆಸಿರುವ ಕತೆ, ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡಿರುವ ಚಿತ್ರವಿದು. ‘ಸಾವು ದೇಹಕ್ಕೆ ಮಾತ್ರ. ಆತ್ಮಕ್ಕೆ ಸಾವಿಲ್ಲ. ದೇಹ ಪಂಚಭೂತಗಳಲ್ಲಿ ಲೀನ ಆಗುತ್ತದೆ. ಆತ್ಮಕ್ಕೆ ‘ಪುನರಪಿ ಮರಣಂ, ಪುನರಪಿ ಜನನಂ’ ಎಂದು ಹೇಳುತ್ತಾರೆ. ಅದನ್ನು ಚಿತ್ರದಲ್ಲಿ ತೋರಿಸಲು ಹೊರಟಿದ್ದೇವೆ’ ಎನ್ನುತ್ತಾರೆ ಕಟ್ಲೆ ತಂಡದವರು. ಆತ್ಮ, ಸಾವು ಮತ್ತು ದೇಹ ಇದೇ ಚಿತ್ರದ ಕತೆ. ಅಮೃತ ಮತ್ತು ಶರಣ್ಯ ನಾಯಕಿಯರು. ಇವರೊಂದಿಗೆ ಟೆನ್ನಿಸ್‌ ಕೃಷ್ಣ, ಹರೀಶ್‌ ರಾಜ್‌, ಪವನ್‌ಕುಮಾರ್‌, ಕರಿಸುಬ್ಬು ಮುಂತಾದವರು ನಟಿಸುತ್ತಿದ್ದಾರೆ.

click me!