
ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರು ದಾಳಿ ಮಾಡಿದ್ದಾರೆ. ರಾತ್ರಿ 9 ಗಂಟೆ ವೇಳೆ ಜಿಮ್ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಮೇಲೆ ಹಲ್ಲೆ ಮಾಡಲಾಗಿದೆ. ಗಾಡಿಯಲ್ಲಿ ಒಬ್ಬರೆ ಹೋಗುತ್ತಿದ್ದ ಸಂದರ್ಭದಲ್ಲಿ ಹೆಬ್ಬಾಳ ಪ್ಲೈ ಒವರ್ ಬಳಿ ರಕ್ಷಕ್ ಮೇಲೆ ಮಂಗಳ ಮುಖಿಯರು ದಾಳಿ ಮಾಡಿದ್ದಾರೆ.
ಮಂಗಳಮುಖಿಯರು ರಕ್ಷಕ್ ಬ್ಯಾಗ್ ಹಿಡಿದು ಎಳೆದ ಕಾರಣ ಗಾಡಿಯಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ರಕ್ಷಕ್ ಕಾಲಿಗೆ ತರಚಿದ ಗಾಯಗಳಿದ್ದು, ಗಾಡಿಯು ಡ್ಯಾಮೇಜ್ ಆಗಿದೆ. ಮಂಗಳ ಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ಲೈ ಒವರ್ ಮೇಲೆ ಗಾಡಿ ಬಿಟ್ಟು ರಕ್ಷಕ್ ಅಲ್ಲಿಂದ ಓಡಿ ಹೋಗಿದ್ದಾರೆ.
ಬದುಕಿಗೆ ಹೊಸ ಆಯಾಮ ಕೊಟ್ಟ ದಿನದ ಬಗ್ಗೆ ಟ್ಟೀಟ್ ಮಾಡಿದ ನಟ ಶರಣ್!
ಹೆಬ್ಬಾಳ ಪೊಲೀಸರ ನೆರವಿನಲ್ಲಿ ಗಾಡಿಯನ್ನು ತೆಗೆದು ಕೊಂಡು ಮನೆಗೆ ವಾಪಸ್ ಆಗಿದ್ದಾರೆ ರಕ್ಷಕ್. ಬೆಂಗಳೂರಿನಲ್ಲಿ ಮಂಗಳಮುಖಿಯರ ಸಂಖ್ಯೆ ಹೆಚ್ಚಾಗಿದ್ದು ತಡರಾತ್ರಿ ಪ್ರಯಾಣಿಸುವವರಿಗೆ ತೊಂದರೆ ನೀಡುವ ಘಟನೆಗಳು ನಡೆಯುತ್ತಿರುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.