
ಕನ್ನಡ ಚಿತ್ರರಂಗದಲ್ಲಿ ಶರಣ್ ಮಾಡಿರದ ಪಾತ್ರವೇ ಇಲ್ಲ...1996ರಲ್ಲಿ ಪ್ರೇಮಾ ಪ್ರೇಮಾ ಪ್ರೇಮಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಶರಣ್ ಕಾಮಿಡಿ, ಸ್ನೇಹಿತ, ನಟ ಸೇರಿದಂತೆ ಅನೇಕ ಪಾತ್ರದಲ್ಲಿ ಮಿಂಚಿ 57 ಸಿನಿಮಾಗಳ ನಂತರ ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡರು. ಅದುವೇ Rambo....
2012ರಲ್ಲಿ ತೆರೆಕಂಡ Rambo ಸಿನಿಮಾದಲ್ಲಿ ಶರಣ್ ಅಭಿನಯಿಸಿ, ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ತರುಣ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಲೂ ಚಿತ್ರದ ಪ್ರತಿಯೊಂದೂ ಹಾಡುಗಳು ಸಿನಿ ರಸಿಕರ ಬಾಯಲ್ಲಿದೆ. ಚಿತ್ರ 9 ವರ್ಷ ಪೂರೈಸಿದ ಪ್ರಯುಕ್ತ ಶರಣ್ ಟ್ಟೀಟ್ ಮಾಡಿದ್ದಾರೆ.
'ಇಂದಿಗೆ Rambo ಚಿತ್ರ ತೆರೆಯ ಮೇಲೆ ಕಂಡು 9 ವರ್ಷಗಳು ಪೂರ್ಣಗೊಂಡಿದೆ. 7/9/2012. ನನ್ನ ಜೀವನದಲ್ಲಿ ಮರೆಯಲಾರದಂಥ ಹಾಗೂ ನನ್ನ ವೃತ್ತಿ ಜೀವನಕ್ಕೆ ಒಂದು ದೊಡ್ಡ ತಿರುವು ನೀಡಿದಂಥ ದಿನ. Rambo ನನ್ನ ಬದುಕಿಗೆ ಹೊಸ ಆಯಾಮ ಕೊಟ್ಟು, ನಿಮ್ಮಲ್ಲರ ಪ್ರೀತಿ ಆಶೀರ್ವಾದ ಹೆಚ್ಚು ಮಾಡಿಸಿದ ಒಂದು ಅಕ್ಷಯ ಪಾತ್ರೆ ಎಂದರೆ ತಪ್ಪಾಗಲಾರದು. ಈ ಯಶಸ್ಸಿಗೆ ಕಾರಣಕರ್ತರಾದ ನನ್ನ ಇಡೀ ತಂಡ ಹಾಗೂ ನಿಮ್ಮೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು,' ಎಂದು ಟ್ಟೀಟ್ ಮಾಡಿದ್ದಾರೆ.
'ವಿಶೇಷವಾಗಿ ತರುಣ್ ಸುಧೀರ್, ಅಟ್ಲಾಂಟ ನಾಗೇಂದ್ರ, ಅರ್ಜುನ್ ಜನ್ಯ ಹಾಗೂ ಇಡೀ ತಂಡದ ಶ್ರಮದ ಪ್ರತಿಫಲ ಇಂಥ ಅದ್ಭುತ ಚಿತ್ರ ಆಯಿತು. ನಿಮ್ಮೆಲ್ಲರ ಬೆಂಬಲವಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ. ಇಡೀ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು,' ಎಂದು ಹೇಳಿದ್ದಾರೆ.
ಸುಮಾರು 55 ದಿನಗಳಲ್ಲಿ Rambo ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರಕ್ಕೆ ಎರಡು ಕೋಟಿ ಬಂಡವಾಳ ಹಾಕಲಾಗಿತ್ತು. 100 ದಿನಗಳ ಕಾಲ ಒಳ್ಳೆಯ ಸಕ್ಸಸ್ ಕಂಡು ಬರೊಬ್ಬರಿ 5 ಕೋಟಿ ರೂ. ಗಳಿಸಿತ್ತು. ಚಿತ್ರದಲ್ಲಿ ಶರಣ್ ಜೊತೆ ಉಮಾಶ್ರೀ, ತಬಲಾ ನಾಣಿ, ಸಾಧು ಕೋಕಿಲಾ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾ ಬಳಗವಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.