ಬಾತ್ ಟಬ್ ನಲ್ಲಿ ಮಿಂಚಿದ ಸಾನ್ಯಾ ಅಯ್ಯರ್, ವಿಡಿಯೋ ನೋಡಿ ನಿದ್ದೆ ಬಿಟ್ಟ ಹುಡುಗ್ರು

Published : Oct 06, 2025, 12:21 PM IST
saanya iyer

ಸಾರಾಂಶ

ಪುಟ್ಟುಗೌರಿ ಮದುವೆ ನಟಿ ಸಾನ್ಯಾ ಅಯ್ಯರ್ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಅವ್ರ ವಿಡಿಯೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಾನ್ಯಾ ಅಯ್ಯರ್ ಸೌಂದರ್ಯವನ್ನು ಮನಬಿಚ್ಚಿ ಹೊಗಳಿದಿದ್ದಾರೆ. 

ಸ್ಯಾಂಡಲ್ ವುಡ್ ಸುಂದರಿ, ಪುಟ್ಟಗೌರಿ ನಟಿ ಸಾನ್ಯಾ ಅಯ್ಯರ್ (saanya iyer) ಹೊಸ ವಿಡಿಯೋ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಸಾನ್ಯಾ ಅಯ್ಯರ್ ಬಾತ್ ಟಬ್ (bath tub) ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾನ್ಯಾ ಅಯ್ಯರ್, ಬಾತ್ ಟಬ್ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದನ್ನು ನೋಡಿದ ಫ್ಯಾನ್ಸ್, ಕರುನಾಡ ಅಪ್ಸರೆ ಅಂತ ನಾಮಕರಣ ಮಾಡಿದ್ದಾರೆ.

ಬಾತ್ ಟಬ್ ನಲ್ಲಿ ಸಾನ್ಯಾ ಅಯ್ಯರ್ : 

ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಸೀರಿಯಲ್ ದುನಿಯಾಕ್ಕೆ ಕಾಲಿಟ್ಟ ಸಾನ್ಯಾ ಅಯ್ಯರ್ ಅಪರೂಪದ ಸುಂದರಿ. ತಮ್ಮ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿರುವ ಸಾನ್ಯಾ ಅಯ್ಯರ್ ನಟನೆಯಲ್ಲೂ ಮುಂದಿದ್ದಾರೆ. ಈಗ ಸಾನ್ಯಾ ಅಯ್ಯರ್ ಫ್ಯಾನ್ಸ್ ನಿದ್ರೆ ಬಿಡುವ ಸಮಯ ಬಂದಿದೆ. ಸಾನ್ಯಾ ಅಯ್ಯರ್ ಹಾಟ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಾನ್ಯಾ ಅಯ್ಯರ್ ಬಾತ್ ಡಬ್ ನಲ್ಲಿದ್ದಾರೆ. ಅವ್ರ ಮೈ ಮೇಲೆ ಸೋಪಿನ ನೊರೆಯನ್ನು ನೀವು ನೋಡ್ಬಹುದು. ಮೈಸೂರ್ ಸ್ಯಾಂಡಲ್ ಗಾಗಿ ಸಾನ್ಯಾ ಅಯ್ಯರ್ ಈ ವಿಡಿಯೋ ಶೂಟ್ ಮಾಡಿದ್ದಾರೆ. @houseofmysoresandal ಗಾಗಿ ನಾವು ಮಾಡಿದ ಚಿತ್ರೀಕರಣದ ಒಂದು ಸಣ್ಣ BTS ಹಾಡು ಇಲ್ಲಿದೆ ಅಂತ ಸಾನ್ಯಾ ಅಯ್ಯರ್ ಶೀರ್ಷಿಕೆ ಹಾಕಿದ್ದಾರೆ. ಸಾನ್ಯಾ ಅಯ್ಯರ್ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ಇನ್ನಷ್ಟು ಬಿಟಿಎಸ್ ನಿರೀಕ್ಷೆಯಲ್ಲಿದ್ದೇವೆ ಅಂತ ಕಮೆಂಟ್ ಮಾಡಿದ್ದಾರೆ.

ಡಿವೋರ್ಸ್ ರೂಮರ್ಸ್’ಗೆ ಫುಲ್ ಸ್ಟಾಪ್… ವಿದೇಶದಲ್ಲಿ ವೆಕೇಶನ್ ಮೂಡಲ್ಲಿ ನಜ್ರಿಯಾ-ಫಹಾದ್

ಸೈಮಾ ಅವಾರ್ಡ್ ಗೆದ್ದಿದ್ದ ನಟಿ :

 ಸಾನ್ಯಾ ಅಯ್ಯರ್, ಪುಟ್ಟಗೌರಿ ಸೀರಿಯಲ್ ಮೂಲಕ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಸೀರಿಯಲ್ ನಂತ್ರ ಓದು ಮುಂದುವರೆಸಿದ್ದ ಸಾನ್ಯಾ ಅಯ್ಯರ್, ಅರಾರೋ.. ನೀಯಾರೋ ಅಲ್ಬಂ ಸಾಂಗ್ ನಲ್ಲಿ ಮಿಂಚಿದ್ದರು. ಅದಾದ್ಮೇಲೆ ಸಾನ್ಯಾ ಅಯ್ಯರ್, ಡಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಇಷ್ಟರ ಮಧ್ಯೆ ಸಾನ್ಯಾ ಅಯ್ಯರ್ ಪ್ರಸಿದ್ಧಿ ಹೆಚ್ಚು ಮಾಡಿದ್ದು ಬಿಗ್ ಬಾಸ್ ಕನ್ನಡ ಶೋ. ಸಾನ್ಯಾ ಅಯ್ಯರ್, ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಒಂದರಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಇದಾದ್ಮೇಲೆ ಚಿತ್ರರಂಗಕ್ಕೆ ಕಾಲಿಟ್ಟ ಸಾನ್ಯಾ ಅಯ್ಯರ್, ಗುಲಾಬ್ ಜಾಮೂನ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಅವರ ಖ್ಯಾತೆಯನ್ನು ಇನ್ನಷ್ಟು ಹೆಚ್ಚು ಮಾಡಿದ್ದು ಗೌರಿ ಸಿನಿಮಾ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದಲ್ಲಿ ಹೀರೋಯಿನ್ ಪಾತ್ರಕ್ಕೆ ಸಾನ್ಯಾ ಅಯ್ಯರ್ ಜೀವ ತುಂಬಿದ್ದರು. ಸಿನಿಮಾಗೆ ಭರ್ಜರಿ ಪ್ರಚಾರ ಸಿಕ್ಕಿತ್ತು. ಆದ್ರೆ ಸಿನಿಮಾ ನಿರೀಕ್ಷೆಯಷ್ಟು ಓಡಲಿಲ್ಲ. ಸಾನ್ಯಾ ಅಯ್ಯರ್ ಮುಡಿಗೆ ಗೌರಿ ಸಿನಿಮಾ ಸೈಮಾ ಪ್ರಶಸ್ತಿ ತಂದುಕೊಟ್ಟಿದೆ. ಭರವಸೆಯ ಯುವ ನಟಿ ಸೈಮಾ ಅವಾರ್ಡನ್ನು ಸಾನ್ಯಾ ಅಯ್ಯರ್ ಪಡೆದಿದ್ದಾರೆ. ಗೌರಿ ಸಿನಿಮಾ ಹಿಂದಿನ ವರ್ಷ ತೆರೆಗೆ ಬಂದಿದೆ. ಆ ನಂತ್ರ ಸಾನ್ಯಾ ಅಯ್ಯರ್ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇವೆಂಟ್ ಗಳಲ್ಲಿ ಕಾಣಿಸಿಕೊಳ್ತಿರುವ ಸಾನ್ಯಾ ಅಯ್ಯರ್, ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಹಿಳಾ ಪ್ರಧಾನ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ: ಯೋಗರಾಜ್ ಭಟ್ ನಿರ್ದೇಶನ!

ಕೆಲ ದಿನಗಳ ಹಿಂದಷ್ಟೆ ಉಪಶಮನ ಎನ್ನುವ ಹೀಲಿಂಗ್ ಮತ್ತು ಸ್ಟ್ರೆಂತ್ ಬಿಲ್ಡ್ ಮಾಡುವ ಕಾರ್ಯಕ್ರಮ ಆಯೋಜನೆ ಮಾಡೋದಾಗಿ ಸಾನ್ಯಾ ಅಯ್ಯರ್ ಜಾಹೀರಾತು ನೀಡಿದ್ದರು. ತನ್ನನ್ನು ತಾನು ತಿಳಿಯಲು ಹಾಗೂ ತಮ್ಮೊಳಗೆ ದೀಪವನ್ನು ಬೆಳಗಲು ಅನುಕೂಲ ಮಾಡಿಕೊಡುವಂತಹ ಒಂದು ಸೆಶನ್ ಎಂದಿದ್ದ ಸಾನ್ಯಾ ಅಯ್ಯರ್, ಗೂಗಲ್ ಮೀಟ್ ಮೂಲಕ ಜನರನ್ನು ಭೇಟಿಯಾಗೋದಾಗಿ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸಾನ್ಯಾ ಅಯ್ಯರ್, ಸಾಕಷ್ಟು ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?