
ನಟಿ ಹರ್ಷಿಕಾ ಪೂಣಚ್ಚ ಅವರು ಮಹಿಳಾ ಪ್ರಧಾನ ಚಿತ್ರಕ್ಕೆ ನಾಯಕಿಯಾಗುತ್ತಿದ್ದಾರೆ. ಆ ಮೂಲಕ ತುಂಬಾ ದಿನಗಳ ನಂತರ ನಟಿ ಹರ್ಷಿಕಾ ಪೂಣಚ್ಚ ಅವರು ತೆರೆಗೆ ಮರಳುತ್ತಿದ್ದಾರೆ. ತಮ್ಮ ಈ ಹೊಸ ಚಿತ್ರವನ್ನು ತಮ್ಮ ಪುತ್ರಿಯ ಹುಟ್ಟುಹಬ್ಬದಂದು ಘೋಷಣೆ ಮಾಡಿದ್ದಾರೆ. ವಿಶೇಷ ಎಂದರೆ ಈ ಚಿತ್ರವನ್ನು ನಿರ್ದೇಶನ ಮಾಡಲಿರುವುದು ಯೋಗರಾಜ್ ಭಟ್ ಅವರು.
ಹರ್ಷಿಕಾ ಪೂಣಚ್ಚ, ‘ಇದು ನನ್ನ ಮಗಳು ತ್ರಿದೇವಿ ಪೊನ್ನಕ್ಕ ಮೊದಲ ವರ್ಷದ ಹುಟ್ಟುಹಬ್ಬದ ಸಪ್ರೈಸ್. ಒಂದು ಗಟ್ಟಿ ಕತೆಯ ಮೂಲಕ ಮತ್ತೆ ನಟನೆಗೆ ಮರಳುತ್ತಿರುವುದು ನನಗೆ ಖುಷಿ ಕೊಟ್ಟಿದೆ’ ಎಂದಿದ್ದಾರೆ. ಚಿತ್ರವನ್ನು ನಿರ್ಮಿಸುತ್ತಿರುವುದು ಅಮ್ರಿತಾ ವಿಜಯ್ ಟಾಟಾ ಅವರು. ಈಗಾಗಲೇ ಭುವನ್ ಪೊನ್ನಣ್ಣ ನಟನೆಯಲ್ಲಿ ‘ಹಲೋ 123’ ಚಿತ್ರವನ್ನು ವಿಜಯ್ ಟಾಟಾ ಅವರು ತಮ್ಮ ನಿರ್ಮಾಣದಲ್ಲಿ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೂ ಯೋಗರಾಜ್ ಭಟ್ ಅವರೇ ನಿರ್ದೇಶಕರು.
ಭುವನ್ ಪೊನ್ನಣ್ಣ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಮಗಳು ತ್ರಿದೇವಿ ಪೊನ್ನಕ್ಕ ಒಂದನೇ ವರ್ಷದ ಜನ್ಮದಿನದಂದು ಈ ಸಿನಿಮಾ ಶೀರ್ಷಿಕೆ ಅನಾವರಣಗೊಂಡಿದೆ. ಇತ್ತೀಚೆಗೆ ಭುವನ್ ಹರ್ಷಿಕಾ ದಂಪತಿ ಮಗುವಿನ ಮೊದಲ ವರ್ಷದ ಜನ್ಮದಿನವನ್ನು ಅದ್ದೂರಿಯಿಂದ ಆಚರಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ‘ಬುಲ್ಲಿ’ ಸಿನಿಮಾದ ನಿರ್ಮಾಣ ಸಂಸ್ಥೆ ಗಣೇಶ ಮಹಾದೇವ್ ಸ್ಟುಡಿಯೊಸ್ ಮುಂಗಡ ಚೆಕ್ ಅನ್ನು ಭುವನ್ ಅವರಿಗೆ ನೀಡಿತು.
ತಾರಾ ದಂಪತಿ ಪುತ್ರಿಯ ಜನ್ಮದಿನ ಕಾರ್ಯಕ್ರಮದಲ್ಲಿ ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ, ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ, ಚಿತ್ರರಂಗದಿಂದ ಗಣೇಶ್, ರಮೇಶ್ ಅರವಿಂದ್, ಜಯಮಾಲಾ, ಪ್ರಣಿತಾ, ಶ್ರುತಿ, ಸುಧಾರಾಣಿ, ಮಾಲಾಶ್ರೀ , ತಾರಾ, ಯೋಗರಾಜ್ ಭಟ್ನಿ, ನಿರ್ಮಾಪಕ ವೆಂಕಟ್ ನಾರಾಯಣ್ , ರಾಜಕೀಯ ಕ್ಷೇತ್ರದ ಗಣ್ಯರಾದ ಡಾ. ಅಶ್ವತ್ಥನಾರಾಯಣ್, ಎ.ಎಸ್. ಪೊನ್ನಣ್ಣ, ಎನ್.ಎ. ಹ್ಯಾರಿಸ್, ರೋಷನ್ ಬೇಗ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.