
ಈ ಕಪಲ್ ಅಂದ್ರೆ ಹಾಗೆನೇ. ಬರೋವರ್ಗೂ ಮಾತ್ರ ಬೇರೆಯವರ ಹವಾ..! ಬಂದ್ಮೇಲೆ ಇವರದ್ದೇ ಹವಾ! ಸ್ಯಾಂಡಲ್‌ವುಡ್ ರಾಕಿಂಗ್ ಜೋಡಿ ರಾಧಿಕಾ ಪಂಡಿತ್ ಮತ್ತು ಯಶ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕೆಲ ದಿನಗಳ ಹಿಂದೆ ರಾಧಿಕಾ ಪಂಡಿತ್ ಆಪ್ತ ಸ್ನೇಹಿತರು ಬೇಬಿ ಶವರ್ ಆಯೋಜಿಸಿದ್ದರು. ಹಳದಿ ಹಾಗೂ ಬಿಳಿ ಬಣ್ಣದ ಡಿಸೈನರ್ ವೇರ್ ಗೌನ್‌ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ತಮ್ಮ ಇನ್‌ಸ್ಟಾಗ್ರಾ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಅಪ್ಪ-ಅಮ್ಮನ ಗುರುತಿಸುವ ಐರಾ, ಮಾತೃಭಾಷೆ ಯಾವುದೆಂದವರಿಗೆ ರಾಧಿಕಾ ಖಡಕ್ ಉತ್ತರ!
'ನನ್ನ ಸ್ನೇಹಿತರು ಮಾಡಿದ ವಂಡರ್ ಫುಲ್ ಬೇಬಿ ಶವರ್ ಇದು. ಇನ್ನಷ್ಟು ಫೋಟೋ ಹಾಗೂ ಅಪ್ಡೇಟ್ಸ್ ಕೊಡ್ತೀನಿ' ಎಂದು ಬರೆದುಕೊಂಡಿದ್ದಾರೆ.
ಈಗಾಗಲೆ ಐರಾ ಯಶ್ ಸೆಲೆಬ್ರಿಟಿ ಕಿಡ್ ಆಗಿದ್ದು ಮಾಡುವ ಪ್ರತಿಯೊಂದು ಚಟುವಟಿಕೆಗಳು ವೈರಲ್ ಆಗುತ್ತದೆ ಅಷ್ಟೇ ಏಕೆ ತನ್ನ ಆಟಿಕೆಗಳನ್ನು ತಮ್ಮ/ತಂಗಿ ಜೊತೆ ಶೇರ್ ಮಾಡಬೇಕು, ಕುಟುಂಬಕ್ಕೆ ಮತ್ತೊಂದು ಅತಿಥಿ ಆಗಮನವಾಗುತ್ತಿದೆ ಎಂದು ಬಹಿರಂಗಪಡಿಸಿದ್ದೇ ಐರಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.