
ಬೆಂಗಳೂರು (ಅ. 15): ವಿದೇಶದಲ್ಲಿ ಕಿಚ್ಚ ಸುದೀಪ್ ನಟನೆಯ ಸಿನಿಮಾದ ಚಿತ್ರೀಕರಣಕ್ಕೆ ಸೌಲಭ್ಯ ಕಲ್ಪಿಸುವುದಾಗಿ ನಂಬಿಸಿ .45 ಲಕ್ಷ ಹೆಚ್ಚುವರಿ ಹಣ ಪಡೆದು ವಂಚಿಸಿದ್ದಾರೆ ಎಂದು ಸಂಘಟಕನೊಬ್ಬನ ವಿರುದ್ಧ ಪೊಲೀಸ್ ಆಯುಕ್ತರಿಗೆ ಸೋಮವಾರ ನಿರ್ಮಾಪಕ ಸೂರಪ್ಪ ಬಾಬು ದೂರು ನೀಡಿದ್ದಾರೆ.
ಬೇರೆ ಹೀರೋಗಳ ಚಿತ್ರಗಳಲ್ಲಿ ನಟಿಸಲು ಭಯವಾಗುತ್ತದೆ : ಸುದೀಪ್
ಪೋಲೆಂಡ್‌ನಲ್ಲಿ ‘ಕೋಟಿಗೊಬ್ಬ-3’ ಸಿನಿಮಾ ಚಿತ್ರೀಕರಣ ನಡೆದಿತ್ತು. ಈ ವೇಳೆ ಸಿನಿಮಾ ಚಿತ್ರೀಕರಣದ ವ್ಯವಸ್ಥೆಗೆ ಸಂಜಯ್ ಪೌಲ್ ಎಂಬಾತನಿಗೆ .3 ಕೋಟಿ ನೀಡಲಾಗಿತ್ತು. ಆದರೆ ಪೂರ್ವ ಒಪ್ಪಂದದಂತೆ ನಡೆದುಕೊಳ್ಳದೆ ವಂಚಿಸಿದ್ದಾರೆ ಎಂದು ಸೂರಪ್ಪ ಬಾಬು ದೂರಿದ್ದಾರೆ.
ಒಪ್ಪಂದದಂತೆ ಸಂಜಯ್ ಅವರಿಗೆ ಹಣ ಕೂಡಾ ಕೊಡಲಾಗಿತ್ತು. ಆದಾಗ್ಯೂ ಸಹ ಮತ್ತೆ ಹೆಚ್ಚುವರಿ .45 ಲಕ್ಷಕ್ಕೆ ಅವರು ಬೇಡಿಕೆ ಇಟ್ಟರು. ಈ ಹಣ ಕೊಡದೆ ಹೋದರೆ ಸಿನಿಮಾ ಕೆಲಸಗಾರರನ್ನು ಒತ್ತೆಯಾಗಿಸಿಕೊಳ್ಳುವುದಾಗಿ ಸಹ ಆತ ಬೆದರಿಕೆ ಹಾಕಿದ. ಕೊನೆಗೆ ಆತನಿಗೆ ಹೆಚ್ಚುವರಿ ಹಣ ಪಾವತಿಸಿ ಬರಬೇಕಾಯಿತು ಎಂದು ವಿವರಿಸಿದ್ದಾರೆ. ದೂರು ಸ್ವೀಕರಿಸಿದ ಆಯುಕ್ತರು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.