ನಿರ್ದೇಶಕ ಹಾಗೂ ಗೀತ ರಚನೆಕಾರ ಕವಿರಾಜ್‌ಗೆ ಪಿತೃ ವಿಯೋಗ!

By Web Desk  |  First Published Oct 15, 2019, 10:55 AM IST

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಗೀತಾರಚನೆಕಾರ ಕವಿರಾಜ್‌ ತಂದೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.


 

'ಕರಿಯಾ' ಚಿತ್ರದಲ್ಲಿ ಗೀತರಚನೆಕಾರನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕವಿರಾಜ್‌ ಚಿತ್ರಗಳಿಗೆ ಸೂಪರ್ ಹಿಟ್‌ ಹಾಡುಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Tap to resize

Latest Videos

 

ಕವಿರಾಜ್‌ ತಂದೆ ಹರಿಯಪ್ಪ ಅವರು ಸಮಾಜವಾದಿ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದರು ಹಾಗೂ ಬಂಗಾರಪ್ಪ ಅವರ ಶಿಷ್ಯರಾಗಿದ್ದರು. ಕೆಲ ತಿಂಗಳುಗಳಿಂದ ಕ್ಯಾನ್ಸರ್‌ಯಿಂದ ಹರಿಯಪ್ಪ ಬಳಲುತ್ತಿದ್ದು ಚಿಕಿತ್ಸೆ ಫಲವಾಗದೇ ಇಹಲೋಕ ತ್ಯಜಿಸಿದ್ದಾರೆ.

 

ಹರಿಯಪ್ಪನವರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರ ಅವರ ಹುಟ್ಟೂರಾದ ಮಂಡಗದ್ದೆಯಲ್ಲಿ ಇಂದು (ಮಂಗಳವಾರ) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಹರಿಯಪ್ಪನವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರನಿದ್ದಾನೆ.

ಸದ್ಯ ಜಗ್ಗೇಶ್ ಜೊತೆ 'ಕನ್ನಡ ಮೇಸ್ಟ್ರು ಕಾಳಿದಾಸ'ದಲ್ಲಿ ಬ್ಯುಸಿಯಾಗಿದ್ದಾರೆ. ನನ್ನಲಿ ನಾನಿಲ್ಲ, ಮನದಲಿ ನೀನಿಲ್ಲ, ಬಾನಿಂದ ಬಾ ಚಂದಿರ, ಬಾನಿಂದ ಜಾರಿದಂತಾ ಚುಕ್ಕಿನಾ ನೀನು ಹೇಳು, ಆಕಾಶಕ್ಕೆ ಚಪ್ಪರ ಹಾಕಿ ಸೇರಿದಂತೆ ಸಾಕಷ್ಟು ಹಾಡುಗಳನ್ನು ಕವಿರಾಜ್ ಕೊಟ್ಟಿದ್ದಾರೆ.

click me!