Radhika Kumaraswamy: ಮಗಳ ಬಗ್ಗೆ ಶೀಘ್ರದಲ್ಲೇ ಸರ್​ಪ್ರೈಸ್​ ಕೊಡ್ತೇನೆ ಎಂದ ರಾಧಿಕಾ ಕುಮಾರಸ್ವಾಮಿ! ಏನದು ಸೀಕ್ರೇಟ್?

Published : Jun 19, 2025, 01:09 PM ISTUpdated : Jun 19, 2025, 01:14 PM IST
Radhika Kumaraswamy about daughter Shamika

ಸಾರಾಂಶ

ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಪುತ್ರಿ ಶಮಿಕಾ ಬಗ್ಗೆ ಮಾತನಾಡುತ್ತಾ ಶೀಘ್ರದಲ್ಲೇ ಸರ್​ಪ್ರೈಸ್​ ಕೊಡ್ತೇನೆ ಎಂದಿದ್ದಾರೆ. ಏನದು ಸೀಕ್ರೇಟ್​? ನಟಿ ಹೇಳಿದ್ದೇನು ಕೇಳಿ... 

ಸ್ಯಾಂಡಲ್​ವುಡ್​ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ವಯಸ್ಸು 38 ಆಗಿದ್ದು, ಮಗಳು ಶಮಿಕಾಗೆ ಈಗ 14 ವರ್ಷ ತುಂಬಿದೆ. ಹೀಗಿದ್ದರೂ, ರಾಧಿಕಾ ಮಾತ್ರ ಈಗಿನ ನಟಿಯರಿಗೆ ಪೈಪೋಟಿ ನೀಡುವಂಥ ಮೈಮಾಟ ಹೊಂದಿದ್ದು, ಅದೇ ಫಿಟ್​ನೆಸ್​​, ಬ್ಯೂಟಿ ಕಾಪಾಡಿಕೊಂಡು ಬಂದಿದ್ದಾರೆ. ಮಗು ಆದ ಮೇಲೆ ಮಹಿಳೆಯರ ಸೌಂದರ್ಯ ಕೆಟ್ಟು ಹೋಗುತ್ತದೆ ಎಂದು ಹಲವರು ಅಂದುಕೊಳ್ಳುವುದು ಉಂಟು. ಆದರೆ ರಾಧಿಕಾ ಮಾತ್ರ ಇದಕ್ಕೆ ತದ್ವಿರುದ್ಧ. ಮಗಳು ಶಮಿಕಾ ಹುಟ್ಟಿದ ಮೇಲೆ ಮತ್ತಷ್ಟು ಹಾಟ್​ ಆಗಿದ್ದಾರೆ ರಾಧಿಕಾ. ಈಚೆಗೆ ಅವರ ಭೈರಾದೇವಿ ಚಿತ್ರ ರಿಲೀಸ್​ ಆಗಿದ್ದು, ಅದರಲ್ಲಿನ ರಾಧಿಕಾ ನಟನೆಗೆ ಮನಸೋಲದವರೇ ಇಲ್ಲ.

ಆದರೆ, ಮಗಳು ಶಮಿಕಾ ಬಗ್ಗೆ ರಾಧಿಕಾ ಅವರು ಎಲ್ಲಿಯೂ ರಿವೀಲ್​ ಮಾಡುವುದಿಲ್ಲ, ಅಷ್ಟೇ ಅಲ್ಲದೇ ಆಕೆಯ ಜೊತೆಯೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಓರ್ವ ಸೆಲೆಬ್ರಿಟಿಯಾಗಿ ಎಲ್ಲಿ ಹೋದರೂ ಪಾಪರಾಜಿಗಳ ಕಣ್ಣು ಅವರ ಮೇಲೆಯೇ ಇರುತ್ತದೆ. ಅದರಲ್ಲಿಯೂ ರಾಧಿಕಾ ಅವರ ಮಗಳನ್ನು ನೋಡಲು ಹಲವರು ಉತ್ಸುಕರಾಗಿರುತ್ತಾರೆ. ಇದರ ಹೊರತಾಗಿಯೂ ಫೋಟೋಗೂ ಸಿಗದೇ ರಾಧಿಕಾ ಅವರು ತಮ್ಮಮಗಳನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇದೀಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾಧಿಕಾ ಅವರ ಮಗಳು ಶಮಿಕಾ ಬಗ್ಗೆ ಕೇಳಲಾಗಿದೆ. ಆದರೆ ನಟಿ, ತುಂಬಾ ಜಾಣತನದಿಂದ ನುಣುಚಿಕೊಂಡಿದ್ದಾರೆ. ಈಗಲೇ ಅವಳ ಬಗ್ಗೆ ಏನೂ ಹೇಳುವುದಿಲ್ಲ. ಶೀಘ್ರದಲ್ಲಿ ಬೇರೆಯದ್ದೇ ರೀತಿಯಲ್ಲಿ ಸರ್​ಪ್ರೈಸ್​ ಕೊಡುವುದಾಗಿ ಹೇಳಿದ್ದಾರೆ. ಏನದು ಎಂದು ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಮಗಳು ಕೂಡ ಸಿನಿಮಾ ಇಂಡಸ್ಟ್ರಿಗೆ ಬರ್ತಾಳಾ ಎನ್ನುವುದು ಹಲವರ ಪ್ರಶ್ನೆ ಮತ್ತು ಆಸೆ ಕೂಡ.

 

ಇನ್ನು ರಾಧಿಕಾ ಅವರ, ಭೈರಾದೇವಿ ಚಿತ್ರ ಇದಾಗಲೇ ಬಿಡುಗಡೆಯಾಗಿದೆ. ಇದರಲ್ಲಿ ಅವರು ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ದೇವಿ ಆರಾಧಕಿಯೂ ಆಗಿರುವ ರಾಧಿಕಾ ಅವರು ಈ ಚಿತ್ರದ ಕುರಿತು ಇದಾಗಲೇ ಸಾಕಷ್ಟು ಕುತೂಹಲ, ವಿಚಿತ್ರ ಘಟನೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು ಅವರು. ಈ ಸಂದರ್ಭದಲ್ಲಿ ಮಗಳ ಬಗ್ಗೆಯೂ ಹೇಳಿದ್ದರು. ಪುತ್ರಿ ಶಮಿಕಾ 13ನೇ ದಿನದ ಕೂಸು ಇರುವಾಗಿನ ಘಟನೆಯನ್ನು ಅವರು ಮಾಧ್ಯಮಗಳ ಎದುರು ನೆನಪಿಸಿಕೊಂಡಿದ್ದರು. ಆಗ ಮಗಳು ಹುಟ್ಟಿ 13 ದಿನ ಆಗಿತ್ತಷ್ಟೇ. ನಾನು ಮಂಚದ ಮೇಲೆ ಮಲಗಿದ್ದೆ. ನನ್ನ ಮಗಳೆಂದರೆ ನನ್ನ ಅಪ್ಪನಿಗೆ ಪಂಚಪ್ರಾಣ. ಮಗಳನ್ನು ಅವರ ಬಳಿಯೇ ಮಲಗಿಸಿಕೊಂಡಿದ್ದರು. ರಾತ್ರಿ ಇದ್ದಕ್ಕಿದ್ದಂತೆಯೇ ವಿಚಿತ್ರ ಶಬ್ದದಲ್ಲಿ ಗಾಳಿ ಬಂತು. ಅಪ್ಪನಿಗೆ ಎಚ್ಚರವಾದಾಗ ಶಮಿಕಾಳ ಕಣ್ಣು ಗುಡ್ಡೆ ಮೇಲೆ ಹೋಗಿತ್ತು. ಕಣ್ಣಿನ ಕಪ್ಪು ಗುಡ್ಡೆ ಕಾಣಿಸುತ್ತಲೇ ಇರಲಿಲ್ಲ. ಮೈ-ಕೈಯೆಲ್ಲಾ ಸೆಟೆದು ಹೋಗಿತ್ತು. ಉಸಿರು ನಿಂತಂತೆ ಆಗಿಬಿಟ್ಟಿತು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದನ್ನು ಅಪ್ಪ ನೋಡಿ ಗಾಬರಿಯಾದರು. ಓಡಿ ಬಂದು ನನಗೆ ವಿಷಯ ತಿಳಿಸಿದರು. ನನಗೂ ಶಾಕ್​ ಆಗಿ ಏನು ಮಾಡಬೇಕು ಎಂದೇ ತೋಚಲಿಲ್ಲ. ಕೂಡಲೇ ಮಗುವನ್ನು ದೇವರ ಕೋಣೆಗೆ ಕರೆದುಕೊಂಡು ಹೋದಾಗ ಆದ ಪವಾಡದ ಕುರಿತು ಹೇಳಿದ್ದರು. ದೇವರಿಗೆ ಮಾಡಿದ್ದ ಅರ್ಚನೆಯ ಕುಂಕುಮವನ್ನು ಮಗುವಿನ ಹಣೆಗೆ ಅಮ್ಮ ಇಟ್ಟರು. ಅಷ್ಟೇ ಮಗಳ ಕಣ್ಣುಗುಡ್ಡೆ ಸರಿಯಾಯಿತು. ಸೆಟೆದುಕೊಂಡಿದ್ದ ಕೈ-ಕಾಲುಗಳು ಸರಿಯಾದವು. ಬಾಡಿ ರಿಲೀಸ್​ ಆಯ್ತು, ಉಸಿರಾಟವೂ ಸರಿಯಾಯ್ತು. ಇದು ದೇವಿ ಮಹಿಮೆ ಎಂದ ನಟಿ ಪಾಸಿಟಿವ್​ ಎನರ್ಜಿ ಇರುವಂತೆಯೇ ನೆಗೆಟಿವ್​ ಕೂಡ ಇರುತ್ತದೆ. ಇದೊಂದು ಘಟನೆಯಲ್ಲ, ನನ್ನ ಜೀವನದಲ್ಲಿ ಇಂಥ ಘಟನೆಗಳು ಹಲವು ನಡೆದಿವೆ. ಆದರೆ ದೈವ ಶಕ್ತಿ ನನ್ನನ್ನು ಕಾಪಾಡಿಕೊಂಡು ಬಂದಿದೆ. ಅದೇ ಶಕ್ತಿಯಿಂದ ಇಲ್ಲಿಯವರೆಗೆ ಬಂದು ನಿಂತಿದ್ದೇನೆ ಎಂದು ರಾಧಿಕಾ ಹೇಳಿದ್ದರು.

ಇನ್ನು ಮಗಳು ಸಿನಿಮಾಗೆ ಎಂಟ್ರಿ ಕೊಡೋ ವಿಷಯದ ಬಗ್ಗೆಯೂ ಅವರು ಮಾತನಾಡಿದ್ದರು. ಮಗಳು ಶಮಿಕಾಳ ವಿಷಯದಲ್ಲಿ ನನಗೇನೂ ಟೆನ್ಷನ್ನೇ ಇಲ್ಲ. ನಾನು ಹೇಳಿದಂತೆ ಕೇಳ್ತಾಳೆ. ಡಾನ್ಸ್​ ಮಾಡು ಅಂದ್ರೆ ಮಾಡ್ತಾಳೆ, ಅಭ್ಯಾಸನೂ ಚೆನ್ನಾಗಿ ಮಾಡ್ತಾಳೆ, ನನಗೆ ಒಂದು ರೀತಿಯಲ್ಲಿ ಅವಳೇ ಅಮ್ಮ ಇದ್ದಹಾಗೆ. ಹೀಗೆ ಡ್ರೆಸ್​ ಮಾಡ್ಕೊ, ವೇಟ್​ ಲಾಸ್​ ಮಾಡ್ಕೋ ಎಂದೆಲ್ಲಾ ಹೇಳ್ತಾ ಇರ್ತಾಳೆ. ನನ್ನ ಆ್ಯಕ್ಟಿಂಗ್​ ಬಗ್ಗೆನೂ ಸಜೆಷನ್​ ಕೊಡ್ತಾನೇ ಇರ್ತಾಳೆ. ಹಾಗೆ ನೋಡಿದರೆ ಅವಳಿಗಿಂತ ನಾನೇ ಸ್ವಲ್ಪ ಹೆಚ್ಚು ತುಂಟಿ ಎಂದಿರೋ ರಾಧಿಕಾ, ಮಗಳಿಗೆ ಸಿನಿಮಾ ವಿಷಯದಲ್ಲಿ ಇರೋ ಅತ್ಯಾಸಕ್ತಿಯ ಬಗ್ಗೆ ಹೇಳಿದ್ದರು. ಆದರೆ ಸದ್ಯ ಅವರು ಸ್ಟಡಿ ಮುಗಿಸಲಿ ಎಂದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?