
ಇತ್ತೀಚೆಗಷ್ಟೇ ಕೇರಳದ ಮಡಾಯಿಕ್ಕಾವು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ನಟ ದರ್ಶನ್, ಇದೀಗ ಕೇರಳದ ಕಣ್ಣೂರ್ ಬಳಿ ಬರುವ ಕೊಟ್ಟಿಯೂರ್ ಶಿವನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಫ್ಯಾಮಿಲಿ ಸಮೇತ ಹೋಗಿ ಮಹಾದೇವನ ದರ್ಶನವನ್ನು ಮಾಡಿದ್ದಾರೆ. ಈ ವೇಳೆ ದರ್ಶನ್‌ಗೆ ಧನ್ವೀರ್ ಸಾಥ್ ಕೊಟ್ಟಿದ್ದಾರೆ. ವಿಶೇಷವಾಗಿ ದರ್ಶನ್ ನೀರಿನಲ್ಲಿ ನಡೆದುಕೊಂಡು ದೇವರ ಮೋರೆ ಹೋಗಿದ್ದಾರೆ. ಈ ವೇಳೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಶಿವನ ತಪೋಭೂಮಿ ಎಂತೆಂದು ಹೇಳಲಾಗುವ ಈ ಕ್ಷೇತ್ರ, ವರ್ಷದಲ್ಲಿ ಕೇವಲ 30 ದಿನಗಳ ಕಾಲ ಮಾತ್ರ ಭಕ್ತರಿಗೆ ತೆರೆಯಲಾಗುತ್ತದೆ. ನದಿಯ ಮಧ್ಯದಲ್ಲಿರುವ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ನೀರಿನಲ್ಲಿ ನಡೆಯುತ್ತಲೇ ಹೋಗಬೇಕಾದದ್ದು ಈ ಕ್ಷೇತ್ರದ ವಿಶೇಷತೆ.
ಕೊಟ್ಟಿಯೂರು ದೇವಸ್ಥಾನದ ಹಿನ್ನಲೆ: ಕೊಟ್ಟಿಯೂರು ದೇವಸ್ಥಾನವು ಕೇರಳದ ಕಣ್ಣೂರು ಜಿಲ್ಲೆಯಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಈ ದೇವಸ್ಥಾನವು ಎರಡು ಭಾಗಗಳನ್ನು ಹೊಂದಿದೆ. ಇಂದು ಅಕ್ಕರೆ ಕೊಟ್ಟಿಯೂರು ಇನ್ನುಂದು ಇಕ್ಕರೆ ಕೊಟ್ಟಿಯೂರು. ಅಕ್ಕರೆ ಕೊಟ್ಟಿಯೂರು ಉತ್ಸವದ ಸಮಯದಲ್ಲಿ ಮಾತ್ರ ತೆರೆಯುತ್ತದೆ, ಆದರೆ ಇಕ್ಕರೆ ಕೊಟ್ಟಿಯೂರು ವರ್ಷಪೂರ್ತಿ ತೆರೆದಿರುತ್ತದೆ. ಈ ದೇವಸ್ಥಾನವು ತನ್ನ ಧಾರ್ಮಿಕ ಮಹತ್ವ ಮತ್ತು ವಾರ್ಷಿಕ ವೈಶಾಖ ಮಹೋತ್ಸವಕ್ಕೆ ಹೆಸರುವಾಸಿಯಾಗಿದೆ.
ಶತ್ರು ಸಂಹಾರ ಯಾಗ ನಡೆಸಿದ್ದ ದರ್ಶನ್: ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್, ಕೇರಳದ ಕಣ್ಣೂರಿನ ಮಾಡಾಯಿಕಾವು ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ಶತ್ರು ಸಂಹಾರ ಯಾಗ ನಡೆಸಿದ್ದರು. ಈ ದೇವಾಲಯವು ಶತ್ರು ನಿವಾರಣೆಗೆ ಹೆಸರುವಾಸಿಯಾಗಿದ್ದು, ವಾಮಾಚಾರ ನಿವಾರಣಾ ಕ್ಷೇತ್ರವೆಂದೂ ಪ್ರಸಿದ್ಧಿ ಪಡೆದಿದೆ. ಈ ದೇವಾಲಯದಲ್ಲಿ ಶತ್ರು ಸಂಹಾರ ಪೂಜೆಯೇ ಬಹಳ ಫೇಮಸ್. ಪಕ್ಕ ಮಾಂಸಹಾರ ಪ್ರಿಯೆಯೂ ಆಗಿರುವ ಈ ದೇವಿಗೆ ಕೇರಳ ಮತ್ತು ಕರ್ನಾಟಕ ಸೇರಿದಂತೆ ಹಲವು ಪ್ರಭಾವಿಗಳು ಭಕ್ತರಿದ್ದಾರೆ.
ಶತ್ರು ಸಂಹಾರಕ್ಕೆ ಹೆಸರುವಾಸಿಯಾಗಿರುವುದರ ಜೊತೆಗೆ ಇದು ವಾಮಾಚಾರ ಮಾಟಮಂತ್ರ ನಿವಾರಣಾ ಕ್ಷೇತ್ರವೂ ಹೌದು. ಈ ದೇವಾಲಯ ಕೇರಳದ ಕಣ್ಣೂರು ಜಿಲ್ಲೆಯಲ್ಲಿದ್ದು, ಮಂಗಳೂರಿನಿಂದ ತಿರುವನಂತಪುರಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಿಗುವ ದೇವಾಲಯವೇ ಮಾಡಾಯಿಕಾವು ಭಗವತೀ ಕ್ಷೇತ್ರ ಅಥವಾ ತಿರುವಾಡು ಭಗವತೀ ದೇವಾಸ್ಥಾನ. ಈ ದೇಗುಲದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಉಗ್ರರೂಪದಲ್ಲಿ ನೆಲೆಸಿದ್ದಾಳೆ ಎಂಬುದು ನಂಬಿಕೆ ಇದೆ. ಶತ್ರು ಸಂಹಾರದಲ್ಲಿ ಈಕೆಯ ಹೊಂದಿರುವಷ್ಟು ಶಕ್ತಿ ಬೇರೆ ಯಾರೂ ಹೊಂದಿರಲಾರರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.