
ಬಳೆ, ಓಲೆ, ಬಿಂದಿ ಜೊತೆ ಮೂಗುತಿ ಇದ್ರೆ ಹೆಣ್ಮಕ್ಕಳ ಸೌಂದರ್ಯ ಡಬಲ್ ಆಗುತ್ತೆ. ಮೂಗುತಿ ಕೇವಲ ಸೌಂದರ್ಯಕ್ಕೆ ಮೀಸಲಿಲ್ಲ. ಇದು ಸಾಂಪ್ರದಾಯದ ಜೊತೆ ಆರೋಗ್ಯಕರ. ಹಿಂದೆ ಹೆಣ್ಮಕ್ಕಳು ಚಿಕ್ಕವರಿರುವಾಗ್ಲೇ ಮೂಗು ಚುಚ್ಚುತ್ತಿದ್ರು. ದಿನ ಕಳೆದಂತೆ ಖಾಲಿ ಮೂಗಿನ ಫ್ಯಾಷನ್ ಟ್ರೆಂಡ್ ಆಗಿತ್ತು. ಇದೇ ಕಾರಣಕ್ಕೆ ಅನೇಕರು ಮೂಗು ಚುಚ್ಚಿಕೊಂಡಿರಲಿಲ್ಲ. ಆದ್ರೀಗ ಮೂಗು ಚುಚ್ಚಿಕೊಳ್ಳೋದು ಮತ್ತೆ ಟ್ರೆಂಡ್ ಆಗಿದೆ. ಕೆಲವರು ಆರೋಗ್ಯದ ದೃಷ್ಟಿಯಿಂದ ಮತ್ತೆ ಕೆಲವರು ಸೌಂದರ್ಯದ ದೃಷ್ಟಿಯಿಂದ ಇನ್ನು ಅಪರೂಪಕ್ಕೆ ಕೆಲವರು ಸಾಂಪ್ರದಾಯ ಎನ್ನುವ ಕಾರಣಕ್ಕೆ ಮೂಗು ಚುಚ್ಚಿಕೊಳ್ತಿದ್ದಾರೆ. ಈ ಸಾಲಿಗೆ ನಮ್ಮ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Dimple Queen Rachita Ram) ಕೂಡ ಸೇರಿದ್ದಾರೆ.
ರಚಿತಾ ರಾಮ್ ಈವರೆಗೆ ಮೂಗು ಚುಚ್ಚಿಕೊಂಡಿರಲಿಲ್ಲ. ನವರಾತ್ರಿ ಸಂದರ್ಭದಲ್ಲಿ ಮೂಗು ಚುಚ್ಚಿಸಿಕೊಳ್ಳುವ ಪ್ಲಾನ್ ಮಾಡಿದ್ರಂತೆ. ಪ್ಲಾನ್ ನಂತೆ ರಚಿತಾ ಮೂಗು ಚುಚ್ಚಿಸಿಕೊಂಡಿದ್ದು, ದೊಡ್ಡ ಮೂಗುತಿ ಹಾಕಿಕೊಂಡಿದ್ದಾರೆ. ನಾಲ್ಕು ಡೈಮಂಡ್ ಇರುವ ಮೂಗುತಿ ಸೌಂದರ್ಯ, ರಚಿತಾ ರಾಮ್ ಅಂದವನ್ನು ಡಬಲ್ ಮಾಡಿದೆ.
Rani Mukerji: ಮಗಳನ್ನು ಮಾಧ್ಯಮಕ್ಕೆ ತೋರಿಸದ ನಟಿ ರಾಣಿ ಮುಖರ್ಜಿ ಮಗಳ ಪ್ರೀತಿ ತೋರಿಸಿದ್ದು ಹೀಗೆ
ಇನ್ಸ್ಟಾಗ್ರಾಮ್ ನಲ್ಲಿ ರಚಿತಾ ರಾಮ್ ಫೋಟೋ ಹಂಚಿಕೊಂಡಿದ್ದಾರೆ. ಮೂಗುತಿ ಸೆಲ್ಫಿ ತೆಗೆದಿರುವ ರಚಿತಾ ರಾಮ್, ನಾಲ್ಕು ಫೋಟೋಗಳನ್ನು ಕೊಲಾಜ್ ಮಾಡಿ ಹಾಕಿದ್ದಾರೆ. ಅದ್ರಲ್ಲಿ ಅವ್ರ ಮೂಗುತಿ ಸ್ಪಷ್ಟವಾಗಿ ಕಾಣ್ತಿದೆ. ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ನಾನು ಬಹಳ ದಿನಗಳಿಂದ ಮೂಗು ಚುಚ್ಚಿಸಿಕೊಳ್ಳಲು ಬಯಸಿದ್ದೆ. ಈ ವಿಶೇಷ ದಿನದಂದು ನಾನು ಮೂಗು ಚುಚ್ಚಿಸಿಕೊಂಡಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ ಅಂತ ಶೀರ್ಷಿಕೆ ಹಾಕಿದ್ದಾರೆ.
ರಚಿತಾ ರಾಮ್ ಪೋಸ್ಟ್ ಗೆ ಕಮೆಂಟ್ ಗಳ ಸುರಿಮಳೆ :
ರಚಿತಾ ರಾಮ್,ಮೂಗುತಿ ಫೋಟೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅನೇಕರು ಕಮೆಂಟ್ ಮಾಡಿದ್ದಾರೆ. ರಚಿತಾಗೆ ಮೂಗುತಿ ಸುಂದರಿ ಅಂತ ಕೆಲವರು ನಾಮಕರಣ ಮಾಡಿದ್ರೆ ಮತ್ತೆ ಕೆಲವರು ಮೂಗುತಿ ಹಾಕಿಕೊಂಡ ರಚಿತಾ ರಾಮ್, ಮಹಾಲಕ್ಷ್ಮಿ ತರ ಕಾಣ್ತಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ.
ಮದುವೆ ಆಗ್ತಾರಾ ರಚಿತಾ ರಾಮ್? :
ಮದುವೆ ಆಗೋ ಮುನ್ನ ಮೂಗು ಚುಚ್ಚಿರಬೇಕು ಎನ್ನುವ ವಾಡಿಕೆ ನಮ್ಮಲ್ಲಿದೆ. ಈ ಹಿಂದೆ ಅನೇಕ ನಟಿಯರು ಮದುವೆ ಹತ್ತಿರ ಬರ್ತಾ ಇದೆ ಎನ್ನುವ ಟೈಂನಲ್ಲಿ ಮೂಗು ಚುಚ್ಚಿಕೊಂಡಿದ್ದರು. ಈಗ ರಚಿತಾ ರಾಮ್ ಮೂಗು ಚುಚ್ಚಿಸಿಕೊಂಡಿದ್ದು, ಅವರು ಮದುವೆ ಆಗ್ತಿದ್ದಾರಾ ಎನ್ನುವ ವದಂತಿ ಕೇಳಿ ಬರ್ತಿದೆ. ರಚಿತಾ ರಾಮ್ ಸಹೋದರಿಗೆ ಈಗಾಗಲೇ ಮದುವೆ ಆಗಿದ್ದು, 32 ವರ್ಷದ ರಚಿತಾ ರಾಮ್ ಇನ್ನೂ ಸಿಂಗಲ್. ಹುಡುಗ ಸಿಕ್ದಾಗ ಮದುವೆ ಅಂದಿದ್ದ ರಚ್ಚುಗೆ ಕಂಕಣ ಭಾಗ್ಯ ಕೂಡಿ ಬಂದಿದ್ಯಾ? ಇನ್ನೂ ರಚಿತಾ ರಾಮ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಹಾಲಿವುಡ್ ಸ್ಟಾರ್ ಜೊತೆ One Night Stand…. ಆತನಿಗಾಗಿ ಏನು ಬೇಕಾದ್ರು ಮಾಡ್ತೀನಿ ಎಂದ ಅಮೀಷಾ ಪಟೇಲ್
ಸಿನಿಮಾದಲ್ಲಿ ರಚಿತಾ ರಾಮ್ ಬ್ಯುಸಿ :
ಸದಾ ಸ್ಮೈಲ್ ಮಾಡ್ತಾ, ತಮ್ಮ ಡಿಂಪಲ್ ತೋರಿಸ್ತಾ, ಹುಡುಗ್ರ ಮನಸ್ಸು ಕದ್ದಿರುವ ರಚಿತಾ ರಾಮ್, ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ರಜನಿಕಾಂತ್, ಉಪೇಂದ್ರ ಸೇರಿದಂತೆ ಸೂಪರ್ ಸ್ಟಾರ್ ಜೊತೆ ಕೂಲಿ ಚಿತ್ರದಲ್ಲಿ ನಟಿಸಿದ್ದರು ರಚಿತಾ ರಾಮ್ . ಅವರ ಆಕ್ಟಿಂಗ್ ಗೆ ಫುಲ್ ಮಾರ್ಕ್ಸ್ ಸಿಕ್ಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ರಚಿತಾ ರಾಮ್ ಈಗ ಮೂಗುತಿಯನ್ನು ಫ್ಯಾನ್ಸ್ ಗೆ ತೋರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.