ಆಕೆ ಎಲ್ಲೇ ಹೋದರೂ ಎಲ್ಲರೂ ಆಕೆಯನ್ನು ಮೇಲಿಂದ ಕೆಳಗಿನ ತನಕ ನೋಡುತ್ತಾರೆ. ಅದು ರಿಯಾಲಿಟಿ . ಈ ಎಲ್ಲ ಕಾರಣಗಳನ್ನು ಯೋಚಿಸಿಯೇ ನಾನು ಆ ಪಾತ್ರ ಒಪ್ಪಿಕೊಂಡೆ. ಜತೆಗೆ, ಆ ಚಿತ್ರದಲ್ಲಿ ಬರುವ 'ಕುಚು ಕುಚು' ಶಬ್ಧ ಇದ್ಯಲ್ಲಾ..
ಕನ್ನಡದ ರಿಯಲ್ ಸ್ಟಾರ್ ಅಭಿನಯದ ಉಪೇಂದ್ರ ನಿರ್ದೇಶನದ 'ಉಪೇಂದ್ರ' ಸಿನಿಮಾ ಆ ಕಾಲದಲ್ಲಿ ಮಾಡಿರುವಹೆಸರು, ಹಣ ಅಷ್ಟಿಷ್ಟಲ್ಲ. ಅದನ್ನು ಅಂದು ಒಂದು ಪ್ರಯೋಗಾತ್ಮಕ ಚಿತ್ರವೆಂದೇ ಹೇಳಬಹುದು. ಆದರೆ, ಅಂತಹ ಚಿತ್ರಕತೆ ಬರೆದು, ನಿರ್ದೇಶನ ಮಾಡಲು ನಿಜವಾಗಿಯೂ ಎಂಟೆದೆ ಬೇಕು ಎನ್ನಬಹುದು. ಅದರಲ್ಲೂ ಅಂತಹ ಚಿತ್ರಕ್ಕೆ ತಾವೇ ಹೀರೋ ಆಗಿ ನಟಿಸಲು ಇನ್ನಷ್ಟು ಧೈರ್ಯ ಬೇಕು. ಅವೆಲ್ಲವೂ ಇದ್ದ ಉಪೇಂದ್ರರ ಚಿತ್ರದಲ್ಲಿ ನಟಿಸಲು ಸಹ ಗುಂಡಿಗೆ ತುಂಬಾ ಗಟ್ಟಿಯಾಗಿರಬೇಕು ಎನ್ನಲೇಬೇಕು.
ಇಷ್ಟೆಲ್ಲಾ ಹೇಳಲು ಕಾರಣವಿದೆ. ಉಪೇಂದ್ರ ಚಿತ್ರದಲ್ಲಿ ನಟಿ ಪ್ರೇಮಾ ನಟಿಸಿರುವ 'ವೇಶ್ಯೆ' ಪಾತ್ರ ತುಂಬಾ ರಗಡ್ ರೋಲ್ಎನ್ನಬಹುದು. ಬೀದಿ ಬದಿಯಲ್ಲಿ ನಿಲ್ಲುವ ವೇಶ್ಯೆ ಥರದ ಪಾತ್ರದಲ್ಲಿ ನಟಿ ಪ್ರೇಮಾ ನಟಿಸಿದ್ದೇ ಅಚ್ಚರಿ ಎನ್ನಬಹುದು. ತಾವು ವೃತ್ತಿಜೀವನದಲ್ಲಿ ಪೀಕ್ ನಲ್ಲಿದ್ದ ವೇಳೆಯಲ್ಲಿ ಬಂದ ಈ ಆಫರ್ ಒಪ್ಪಿಕೊಳ್ಳಲು ನಟಿ ಪ್ರೇಮಾ ಕೊಂಚ ಯೋಚಿಸಿದ್ದರಂತೆ. ಕಾರಣ, ಅದೇ ಇಮೇಜ್ ಪ್ರಾಬ್ಲಂ. ನಾಯಕಿಯಾಗಿ ಅಷ್ಟೂ ದಿನವೂ ನಟಿಸಿದ್ದ ನಟಿ ಪ್ರೇಮಾ ಅವರಿಗೆ ಇದೊಂಥರಾ ವೇಶ್ಯೆಯ ಪಾತ್ರ. ಉಪೇಂದ್ರ ಚಿತ್ರದ ಮೂರು ಹೀರೋಯಿನ್‌ಗಳಲ್ಲಿ ಪ್ರೇಮಾ ಕೂಡ ಒಬ್ಬರು.
'ಹೆಲ್ಪಿಂಗ್ ಹ್ಯಾಂಡ್' ಖ್ಯಾತಿಯ ಕಿಚ್ಚ ಸುದೀಪ್ ಮನೆಗೇ ಬಂದಿದ್ದ ಅಭಿಮಾನಿ ವ್ಯಕ್ತಿಗೆ ಮಾಡಿದ್ದೇನು?
ಉಪೇಂದ್ರ ಚಿತ್ರದ ಆಫರ್ ಬಂದ ಸಮಯವನ್ನು ನೆನಪಿಸಿಕೊಂಡು ನಟಿ ಪ್ರೇಮಾ ಮುಂದೊಮ್ಮೆ ಈ ಬಗ್ಗೆ ಮಾತನಾಡಿ 'ಫಸ್ಟ್ ಆಫ್ ಆಲ್ ಅದು ವೇಶ್ಯೆಯ ಪಾತ್ರ ಎಂದಾಗಲೇ ನಾನು ತಕ್ಷಣಕ್ಕೆ ಯೋಚನೆಗೆ ಬಿದ್ದೆ. ಅದರಲ್ಲೂ ಆ ಸಿನಿಮಾದಲ್ಲಿ ಬರುವ 'ಹದಿನೈದು ಸಾವಿರ ರೂಪಾಯಿ' ಎಂಬ ಡೈಲಾಗ್ ನನಗೆ ಒಂಥರಾ ಮುಜುಗರದ ಫೀಲ್ ಕೊಟ್ಟಿತ್ತು. ಆದರೂ ಸವಾಲಾಗಿ ಸ್ವೀಕರಿಸಿ ಆ ಪಾತ್ರ ಮಾಡಿದೆ. ಈ ಪಾತ್ರದ ಶೂಟಿಂಗ್ ಮಾಡುತ್ತಾ ಮಾಡುತ್ತಾ ನನಗೆ ರಿಯಲ್ ಲೈಫ್‌ನಲ್ಲಿ ವೇಶ್ಯೆ ಆಗಿರುವ ಹೆಣ್ಣುಮಗಳೊಬ್ಬಳು ಏನೆಲ್ಲಾ ಕಷ್ಟಪಡಬೇಕು ಎಂಬುದನ್ನು ಅರ್ಥ ಮಾಡಿಕೊಂಡೆ.
ಆ್ಯಂಕರ್ ಅನುಶ್ರೀ ಜತೆ ಸೀಕ್ರೆಟ್ ಟಾಕ್; ಬಡವರ ಮನೆ ಹೆಣ್ಮಕ್ಳಿಗೆ ಹೀರೋಯಿನ್ ಆಗೋದಕ್ಕೆ ಬಿಡ್ತಾರಾ?
ಆಕೆ ಎಲ್ಲೇ ಹೋದರೂ ಎಲ್ಲರೂ ಆಕೆಯನ್ನು ಮೇಲಿಂದ ಕೆಳಗಿನ ತನಕ ನೋಡುತ್ತಾರೆ. ಅದು ರಿಯಾಲಿಟಿ . ಈ ಎಲ್ಲ ಕಾರಣಗಳನ್ನು ಯೋಚಿಸಿಯೇ ನಾನು ಆ ಪಾತ್ರ ಒಪ್ಪಿಕೊಂಡೆ. ಜತೆಗೆ, ಆ ಚಿತ್ರದಲ್ಲಿ ಬರುವ 'ಕುಚು ಕುಚು' ಶಬ್ಧ ಇದ್ಯಲ್ಲಾ ಅದನ್ನು ಕೇಳಿ ನಾನು ತುಂಬಾ ಗಾಬರಿಯಾಗ್ಬಿಟ್ಟಿದ್ದೆ. ಶೂಟಿಂಗ್ ವೇಳೆಯಲ್ಲೂ ನಾನು ಸಾಕಷ್ಟು ಮುಜುಗರ ಅನುಭವಿಸಿದ್ದೇನೆ' ಎಂದಿದ್ದಾರೆ.
ಮದುವೆಗೂ ಮೊದ್ಲು ಅತೀ ಅಗತ್ಯ ಎನ್ನುವ 'ಅದನ್ನೇ' ಕಲಿತುಕೊಂಡಿರಲಿಲ್ಲ; ಪ್ರಿಯಾಂಕಾ ಹೇಳಿದ್ದೇನು?
ಉಪೇಂದ್ರ ಸಿನಿಮಾ ತೆರೆಕಂಡಾಗ ನನ್ನ ಪಾತ್ರದ ಬಗ್ಗೆ ಹಲವರು ಬೈಯ್ದಿದ್ದಾರೆ, ಹಲವರು ಹೊಗಳಿದ್ದಾರೆ. ಆದರೆ, ವೈಯಕ್ತಿಕವಾಗಿ ಹೇಳಬೇಕೆಂದರೆ, ನಾನು ಕೆಲವೊಂದು ಗೊಂದಲಗಳ ಮೂಲಕವೇ ಆ ಪಾತ್ರ ಮಾಡಲು ಒಪ್ಪಿಕೊಂಡಿದ್ದೆ. ಆದರೆ ನನಗೆ ಉಪೇಂದ್ರ ಚಿತ್ರದ ಆ ವೇಶ್ಯೆ ಪಾತ್ರ ಪ್ಲಸ್ ಆಗಿದೆ ಅಂತಲೇ ನಾನು ಭಾವಿಸಿದ್ದೇನೆ. ನಾನು ಆ ಪಾತ್ರ ಮಾಡಿದ್ದ ಬಗ್ಗೆ ನನಗೆ ಯಾವುದೇ ರೀಗ್ರೆಟ್ ಇಲ್ಲ ಎಂದು ನಟಿ ಪ್ರೇಮಾ ಅನೇಕ ಬಾರಿ ಹೇಳಿಕೊಂಡಿದ್ದಾರೆ.