ನಟ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಲು ಬಂದಿರುವ ಆ ವಿಶೇಷ ಚೇತನ ವ್ಯಕ್ತಿಯ ಮುಖದಲ್ಲಿ ತಾವೇನೋ ಸಾಧಿಸಿದ ಭಾವ ಎದ್ದು ಕಾಣುತ್ತಿದೆ. ವಿಶೇಷ ಚೇತನ ಅಭಿಮಾನಿ ವ್ಯಕ್ತಿಯನ್ನು ಸುದೀಪ್ ತುಂಬಾ ಗೌರವದಿಂದ ನಡೆಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರನ್ನು ನೋಡಿ, ಮಾತನಾಡಿಕೊಂಡು ಹೋಗಲು ಅಭಿಮಾನಿಯೊಬ್ಬರು ಅವರ ಮನೆಗೆ ಹೋಗಿದ್ದಾರೆ. ಅವರು ಸಾಮಾನ್ಯರಂತಲ್ಲ, ವಿಶೇಷ ಚೇತನ ವ್ಯಕ್ತಿ. ಮಾತು ಬಾರದ ಆ ವಿಶೇಷ ಚೇತನ ವ್ಯಕ್ತಿ ಕಿಚ್ಚ ಸುದೀಪ್ ಮನೆಗೆ ಹೋಗಿ, ಅವರಿಗೆ ಪುನೀತ್ ರಾಜ್‌ಕುಮಾರ್ ಜತೆಗಿನ ಅವರದೇ ಫೋಟೋ ಕೊಟ್ಟು ಕೈ ಮುಗಿದು ನಿಂತಿದ್ದಾರೆ. ಜತೆಗೆ, ಅವರಿಗೊಂದು ಲೆಟರ್ ಕೂಡ ಬರೆದುಕೊಂಡು ಬಂದಿದ್ದು, ಅದನ್ನೂ ಸುದೀಪ್ ಕೈಗೆ ಕೊಟ್ಟಿದ್ದಾರೆ.
ಸುದೀಪ್ ಲೆಟರ್ ಓದಿ, 'ನಿಮಗೆ ಏನು ಸಹಾಯ ಬೇಕು' ಎಂದು ಕೇಳಿದ್ದಾರೆ. ಮಾತು ಬಾರದ ಆತ ಸನ್ನೆ ಮಾಡಿ ಅದೇನೋ ಹೇಳಿದ್ದಾರೆ. ಬಳಿಕ, ತಾನು ನಿಮ್ಮನ್ನು ಭೇಟಿಯಾಗಿ ನೋಡಿಕೊಂಡು ಹೋಗಲಷ್ಟೇ ಬಂದಿದ್ದು ಎಂಬಂತೆ ಸನ್ನೆ ಮಾಡಿ, ಹೊರಟುನಿಂತಿದ್ದಾರೆ. ತಕ್ಷಣ ಸುದೀಪ್ ಮನೆಯಲ್ಲಿದ್ದ ಯಾರೋ ಒಬ್ಬರನ್ನು ಕರೆದು, ಅವರು ತಂದಿದ್ದ ಆ ಫೋಟೋವನ್ನು ಅವರ ಕೈನಲ್ಲಿ ಹಿಡಿಸಿ, ತಾವೂ ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿ ವೀಡಿಯೋ ಕೂಡ ಮಾಡಿಕೊಂಡಿದ್ದಾರೆ. ಬಳಿಕ, ಬಂದಿದ್ದವರು ಊಟ ಬೇಡವೆಂದರೂ ಊಟ ಮಾಡಿಸಿ, ಕೈಗೆ ಹಣವನ್ನೂ ಕೊಟ್ಟು ಕಳುಹಿಸಿದ್ದಾರೆ.
ಆ್ಯಂಕರ್ ಅನುಶ್ರೀ ಜತೆ ಸೀಕ್ರೆಟ್ ಟಾಕ್; ಬಡವರ ಮನೆ ಹೆಣ್ಮಕ್ಳಿಗೆ ಹೀರೋಯಿನ್ ಆಗೋದಕ್ಕೆ ಬಿಡ್ತಾರಾ?
ನಟ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಲು ಬಂದಿರುವ ಆ ವಿಶೇಷ ಚೇತನ ವ್ಯಕ್ತಿಯ ಮುಖದಲ್ಲಿ ತಾವೇನೋ ಸಾಧಿಸಿದ ಭಾವ ಎದ್ದು ಕಾಣುತ್ತಿದೆ. ವಿಶೇಷ ಚೇತನ ಅಭಿಮಾನಿ ವ್ಯಕ್ತಿಯನ್ನು ಸುದೀಪ್ ತುಂಬಾ ಗೌರವದಿಂದ ನಡೆಸಿಕೊಂಡಿದ್ದಾರೆ. ನಟ ಸುದೀಪ್ ಅವರ ವಿಷಯದಲ್ಲಿ ಯಾವಾಗಲೂ ಹೇಳುವ ಮಾತು ನಿಜ ಎನ್ನುವುದಕ್ಕೆ ಪ್ರೂಫ್ ಎಂಬಂತೆ ಸುದೀಪ್ ನಡತೆ ಆ ವೀಡಿಯೋದಲ್ಲಿ ಕಾಣಿಸುತ್ತಿದೆ.
ನಿವೇದಿತಾ ಜೈನ್: ಕೊಲ್ಲೂರಿನಲ್ಲಿ ಕೇರಳದ ಜ್ಯೋತಿಷಿ ಭವಿಷ್ಯ ನುಡಿದಿದ್ರು, ಹೇಳಿದಂತೆ ಆಯ್ತು!
ಸುದೀಪ್ ಈಗ ಅಂತಲ್ಲ, ಬಹಳಷ್ಟು ಬಾರಿ ಕಷ್ಟದಲ್ಲಿದ್ದ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಮಾತು ಬಾರದ ವಿಶೇಷ ಚೇತನ ಅಭಿಮಾನಿಯನ್ನ ಭೇಟಿ ಮಾಡಿ ಪ್ರೀತಿಯಿಂದ ಹಣದ ಸಹಾಯ ಮಾಡಿ ಊಟ ಮಾಡಿಸಿ ಕಳಿಸಿಕೊಟ್ಟ ಕಿಚ್ಚ ಸುದೀಪ್ ಬಗ್ಗೆ ಬಹಳಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಮನಕ್ಕೆ ವಿರಾಟ್ ಕೊಹ್ಲಿ ಚಪ್ಪಾಳೆ; ಉತ್ತರ ಸಿಕ್ತಾ ಅಂದ್ರು ಅಪ್ಪು ಫ್ಯಾನ್ಸ್!
ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಸಾವಿರಾರು ಕಾಮೆಂಟ್ ಬಂದಿದ್ದು, ಹಲವರು 'ಸುದೀಪ್ ತುಂಬಾ ಜಂಟಲ್‌ಮ್ಯಾನ್. ಅವರ ಬಗ್ಗೆ ಕೆಲವು ಕಿಡಿಗೇಡಿಗಳು ಏನೇ ಅಪಪ್ರಚಾರ ಮಾಡಿದರೂ ಅವರು ತಮ್ಮ ಒಳ್ಳೆಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ಎಂದೂ ಸಹಾಯ ಹಸ್ತ ಚಾಚುವುದನ್ನು ಬಿಡುತ್ತಿಲ್ಲ' ಎಂದಿದ್ದಾರೆ. ಒಟ್ಟಿನಲ್ಲಿ, ಸ್ಯಾಂಡಲ್‌ರವುಡ್ ನಟ ಇಚ್ಚ ಸುದೀಪ್ ಅವರದು 'ಹೆಲ್ಪಿಂಗ್ ಹ್ಯಾಂಡ್' ಎನ್ನುವುದು ಮತ್ತೆಮತ್ತೆ ಬೆಳಕಿಗೆ ಬರುತ್ತಿದೆ.