ಬೋರ್ ಆದಾಗ ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗ್ತಾರೆ ಸ್ಯಾಂಡಲ್‌ವುಡ್ ನಟಿಮಣಿಯರು..!

By Kannadaprabha NewsFirst Published Apr 20, 2020, 4:33 PM IST
Highlights

ಮನೆಯಲ್ಲೇ ಇದ್ದೂ ಇದ್ದೂ ಎಲ್ಲರಿಗೂ ಬೋರ್ ಆಗುತ್ತೆ. ಅದಕ್ಕಾಗಿ ಬೇರೆ ಬೇರೆ ರೀತಿಯ ಚಟುವಟಿಕೆಯಲ್ಲಿ ತೊಡಗಿಕೊಳ್ಳೋಕೆ ಮನಸ್ಸು ತುಡಿಯುತ್ತೆ. ಆಗ ಏನು ಮಾಡುವುದು? ಈ ಪ್ರಶ್ನೆಗೆ ನಟಿಯರು ತಾವೇನು ಮಾಡುತ್ತೇವೆ ಎಂದು ಇಂಟರೆಸ್ಟಿಂಗ್ ಆಗಿ ಹೇಳಿಕೊಂಡಿದ್ದಾರೆ. ಓದಿ ಅವರದ್ದೇ ಮಾತುಗಳಲ್ಲಿ.

ಕೆಂಡಪ್ರದಿ

ಪ್ರಕಾಶ್ ರೈ ಪುಸ್ತಕ ಓದುತ್ತಿದ್ದೇನೆ!

ಈಗ ನನ್ನ ಮುಂದೆ ಒಂದಷ್ಟು ಕನ್ನಡ ಪುಸ್ತಕಗಳು ಇವೆ. ಈಗಷ್ಟೇ ಪ್ರಕಾಶ್ ರೈ ಸರ್ ಅವರ ‘ಇರುವುದೆಲ್ಲವ ಬಿಟ್ಟು’ ಎನ್ನುವ ಪುಸ್ತಕ ಓದಿ ಮುಗಿಸಿದೆ. ನನಗೆ ತುಂಬಾ ಚೆನ್ನಾಗಿ ಕನೆಕ್ಟ್ ಆದ ಪುಸ್ತಕ ಇದು. ಇದರೊಂದಿಗೆ ಇನ್ನಷ್ಟು ಪುಸ್ತಕಗಳು ಇವೆ. ಇಂತಹ ಸಮಯದಲ್ಲಿ ಪುಸ್ತಕ ಓದುವ ಆಯ್ಕೆ ಮಾಡಿಕೊಂಡಿದ್ದಕ್ಕೆ ಮುಖ್ಯವಾದ ಕಾರಣ ಇದೆ. ಅದು ನನ್ನ ಕನ್ನಡ ಉಚ್ಚರಣೆಯನ್ನು ಮುಖ್ಯವಾಗಿ ಹ ಕಾರ, ಅ ಕಾರಗಳನ್ನು ಸರಿ ಮಾಡಿಕೊಳ್ಳಬೇಕು, ಕನ್ನಡವನ್ನು ನಿರರ್ಗಳವಾಗಿ ಓದುವುದನ್ನು ಕಲಿಯಬೇಕು ಎನ್ನುವುದು. ಮನೆಯಲ್ಲಿಯೇ ಜೋರಾಗಿ ಓದುತ್ತೇನೆ. ತಪ್ಪು ಆದಾಗ ನನ್ನ ತಂದೆ ಸರಿಯಾಗಿ ತಿದ್ದುತ್ತಾರೆ. ಇದು ನನಗೆ ಡಬ್ಬಿಂಗ್ ಸಮಯದಲ್ಲಿ ತುಂಬಾ ಹೆಲ್ಪ್ ಆಗುತ್ತದೆ ಎನ್ನುವ ನಂಬಿಕೆ ನನಗೆ ಇದೆ. ಇದಲ್ಲದೇ ಸೋಷಲ್ ಮೀಡಿಯಾ ನೋಡುವುದು, ವಿವಿಧ ಬಗೆಯ ಅಡುಗೆ ರೆಸಿಪಿಗಳನ್ನು ಕಲಿಯುವುದು, ಮನೆ ಕೆಲಸ ಮಾಡುವುದು... ಹೀಗೆ ದಿನ ಕಳೆದು ಹೋಗುತ್ತಿದೆ. ಹಾಗಾಗಿ ನನಗೆ ಬೋರ್ ಆಗುತ್ತಿಲ್ಲ.

- ಸೋನು ಗೌಡ
---------

ಬೇರೆ ಧಾರಾವಾಹಿಗಳನ್ನು ನೋಡುತ್ತಾ ಎಂಜಾಯ್‌ ಮಾಡುತ್ತಿರುವ 'ಕಮಲಿ'!

ಪೇಂಟಿಂಗ್ ಶುರು ಮಾಡಿದ್ದೇನೆ

ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ಸಾಕಷ್ಟು ಸಿನಿಮಾ ಮಿಸ್ ಮಾಡಿಕೊಂಡಿದ್ದೆ. ಈಗ ಅವೆಲ್ಲವನ್ನೂ ಪಟ್ಟಿ ಮಾಡಿಕೊಂಡು ಒಂದೊಂದಾಗಿ ನೋಡುತ್ತಾ ಬರುತ್ತಿದ್ದೇನೆ. ದಿನಕ್ಕೆ ಇಷ್ಟು ಕೆಲಸ ಮಾಡಬೇಕು, ಇಷ್ಟು ಸಿನಿಮಾ ನೋಡಬೇಕು, ಹೀಗೆ ಸಮಯ ಕಳೆಯಬೇಕು ಎಂದು ಮೊದಲೇ ಪಟ್ಟಿ ಮಾಡಿಕೊಳ್ಳುತ್ತೇನೆ. ಅದೇ ಪ್ರಕಾರ ದಿನ ಸಾಗುತ್ತದೆಯಾದರೂ ಒಮ್ಮೆಮ್ಮೊ ಬೋರ್ ಆಗಿಬಿಡುತ್ತದೆ. ಆಗ ನನ್ನ ಸಹಾಯಕ್ಕೆ ಬರುವುದು ನನ್ನ ಹಳೆಯ ಹವ್ಯಾಸಗಳಲ್ಲಿ ಒಂದಾದ ಪೇಂಟಿಂಗ್. ಇದು ಬಿಟ್ಟರೆ ನ್ಯೂಸ್ ನೋಡುವುದು, ಬುಕ್ಸ್ ಓದುವುದು, ಒಂದಷ್ಟು ಕರಕುಶಲ ಕೆಲಸ ಮಾಡುವುದು ಇದೆ. ಎಷ್ಟೇ ಆದರೂ ಪೇಂಟಿಂಗ್ಸ್ ನನ್ನ ಮೂಡ್ ಬದಲಾಯಿಸುವುದರಲ್ಲಿ ಸಾಕಷ್ಟು ಸಹಾಯ ಮಾಡಿದೆ. ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ಈ ಅವಧಿಯಲ್ಲಿ ನಾನು ಬಿಡಿಸಿದ್ದೇನೆ. ಅವುಗಳನ್ನೆಲ್ಲಾ ಒಟ್ಟಾಗಿ ಇಟ್ಟು ನೋಡಿದರೆ ನನಗೇ ತುಂಬಾ ಸಂತೋಷ ಆಗುತ್ತೆ.

- ದೀಪಿಕಾ ದಾಸ್

ಬಿಗ್‌ ಬಾಸ್‌ ದೀಪಿಕಾ ದಾಸ್‌ ಹೊಸ ಪ್ರಯೋಗ; ಮನೆಯಲ್ಲಿರುವವರು ಹೀಗ್ ಮಾಡಿ!
---------

ದಿನಕ್ಕೆ ಮೂರು ಗಂಟೆ ವರ್ಕೌಟ್


ಬೆಳಿಗ್ಗೆ ಒಂದೂವರೆ ತಾಸು, ಸಂಜೆ ಒಂದೂವರೆ ತಾಸು ಮನೆಯಲ್ಲಿಯೇ ವರ್ಕ್‌ಔಟ್ ಮಾಡುತ್ತಿದ್ದೇನೆ. ಹೀಗಾಗಿ ನನಗೆ ಇಡೀ ದಿನ ಉಲ್ಲಾಸದಿಂದ ಇರುವುದಕ್ಕೆ ಸಾಧ್ಯವಾಗುತ್ತದೆ. ನನ್ನನ್ನು ನಾನು ಸಂಪೂರ್ಣವಾಗಿ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿದ್ದೇನಾದ್ದರಿಂದ ಬೋರ್ ಅಂತ ಅನ್ನಿಸುವುದಿಲ್ಲ. ನನಗೆ ಮೊದಲಿನಿಂದಲೂ ಸದಾ ಹೊಸದನ್ನು ಕಲಿಯುವ ಹವ್ಯಾಸ ಇದೆ. ಹೊಸ ಸಿನಿಮಾ ನೋಡುವುದು, ಫ್ಯಾಮಿಲಿ ಜೊತೆಗೆ ಇನ್‌ಡೋರ್ ಗೇಮ್ಸ್ ಆಡುವುದು ಇದೆ. ಮೊದಲೆಲ್ಲಾ ಫ್ಯಾಮಿಲಿ ಜೊತೆಗೆ ಕಳೆಯೋಕೆ ಟೈಮ್ ಸಿಕ್ತಿಲ್ಲ ಅನ್ನಿಸ್ತಿತ್ತು. ಈಗ ಸಾಕಷ್ಟು ಸಮಯ ಸಿಕ್ಕಿರುವುದರಿಂದ ನಾನು ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದೇನೆ. ಇನ್ನು ನನ್ನ ಮನೆಯ ಸುತ್ತ ಮುತ್ತಲೂ ಇರುವ ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರು ಒದಗಿಸುವುದು, ನನ್ನ ಸಂಪರ್ಕಕ್ಕೆ ಸಿಕ್ಕವರಿಗೆ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ.

- ಮೇಘ ಶೆಟ್ಟಿ

ಡಾಕ್ಟರ್‌ ವಿಠಲ್‌ ರಾವ್‌ ಕೈಯಲ್ಲಿ ಕತ್ತರಿ; ಮಗನಿಗೆ ಮಾಡಿದ ಹೇರ್‌ಕಟ್ ನೋಡಿ!
--------------

ಅಡುಗೆ ಮನೆಗೆ ದಾಳಿ

ಮನೆಯಲ್ಲಿಯೇ ಇದ್ದಾಗ ಸಾಕಷ್ಟು ಆಲೋಚನೆಗಳು ಹುಟ್ಟುತ್ತವೆ. ಆದರೆ ಅದಕ್ಕೆ ಬೇಕಾದ ಸಂಪನ್ಮೂಲಗಳು ಈಗ ಸಿಗುವುದು ಕಷ್ಟ. ಅದಕ್ಕಾಗಿಯೇ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ವಿವಿಧ ರೀತಿಯ ಕೆಲಸ ಮಾಡುತ್ತಾ ಸಮಯವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದೇನೆ. ಜಿಮ್‌ಗೆ ಹೋಗುವುದು ತಪ್ಪಿರುವುದರಿಂದ ವರ್ಕ್ ಔಟ್ ಸರಿಯಾಗಿ ಆಗುತ್ತಿಲ್ಲ. ಮನೆಯ ಕೆಲಸ ಒಂದಷ್ಟು ಮಾಡುತ್ತಿದ್ದೇನೆ. ಇದು ಸಮ್ಮರ್ ಆಗಿರುವುದರಿಂದ, ಯಾವಾಗಲೂ ಮನೆಯಲ್ಲೇ ಇರುವುದರಿಂದ ಸ್ಕಿನ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ. ಬಾಲ್ಯದ ಹವ್ಯಾಸಗಳಿಗೆ ಮರಳಿದ್ದೇನೆ. ಚಿತ್ರ ಬಿಡಿಸುವುದು ನನ್ನ ನೆಚ್ಚಿನ ಹವ್ಯಾಸ. ಜೊತೆಗೆ ಅಮ್ಮನ ಜೊತೆ ಸೇರಿ ಅಡುಗೆ ಮಾಡುವುದು ಕಲಿಯುತ್ತಿರುವೆ, ಪಾಲಾಕ್ ಪನ್ನೀರ್ ನನ್ನ ೇವರಿಟ್. ಅದನ್ನು ಮಾಡುವ ಯೋಚನೆ ಇದೆ. ನಿನ್ನೆಯಷ್ಟೇ ಕ್ಯಾರೆಟ್ ಹಲ್ವಾ ಮಾಡಿ ಮನೆಯವರೊಂದಿಗೆ ಕೂತು ಸವಿದದ್ದೂ ಆಯ್ತು.

- ಕಾರುಣ್ಯ ರಾಮ್
-----

ಬರವಣಿಗೆ ಶುರು ಮಾಡಿದ್ದೇನೆ

ಸಿನಿಮಾ ನೋಡ್ತೀನಿ, ಮನೆ ಕೆಲಸ ಮಾಡ್ತೀನಿ, ಬಂಧುಗಳಿಗೆ ವಿಡಿಯೋ ಕಾಲ್ ಮಾಡಿ ಮಾತಾಡ್ತೀನಿ. ಏನೇ ಆದ್ರೂ ಒಮ್ಮೊಮ್ಮೆ ಬೇಸರ ಆಗಿಬಿಡುತ್ತೆ. ಶೂಟಿಂಗ್ ಅದೂ ಇದೂ ಅಂತ ಹೊರಗಡೆ ಇದ್ದವರಿಗೆ ಹೀಗೆ ಮನೆಯಲ್ಲೇ ಇರುವುದು ಎಂದರೆ ಬೇಸರ ಸಹಜ. ಪ್ರಾರಂಭದಲ್ಲಿ ತುಸು ಹಿಂಸೆ ಅನ್ನಿಸಿದರೂ ನಂತರ ಒಂದಷ್ಟು ಬರವಣಿಗೆ ಯಾಕೆ ಮಾಡಬಾರದು ಎನ್ನಿಸುತು. ಅದೇ ನನಗೆ ಇಂದು ವರವಾಗಿದೆ. ಸ್ಕ್ರಿಪ್ಟ್ ಬರೆಯೋಕೆ ಶುರು ಮಾಡಿದ್ದೇನೆ. ಇದು ತುಂಬಾ ಚೆನ್ನಾಗಿ ಇದೆ ಅಂತ ಅಲ್ಲ, ಬಟ್ ಇದು ಕಲಿಕೆಯ ಹಂತ ಅಷ್ಟೇ. ಒಂದಷ್ಟು ಮಂದಿಯ ಸಹಾಯ ಪಡೆದು, ಬರೆಯೋಕೆ ಶುರು ಮಾಡಿದ ಮೇಲೆ ನನಗೆ ಸ್ವಲ್ಪ ಐಡಿಯಾ ಬಂದಿದೆ. ಬರೆಯುವುದು, ತಿದ್ದುವುದು, ಬೇರೆ ಬೇರೆ ಆ್ಯಂಗಲ್‌ನಲ್ಲಿ ಥಿಂಕ್ ಮಾಡುವುದು... ಹೀಗೆ ಬೇಗನೇ ಸಮಯ ಕಳೆಯುತ್ತಿದೆ. ಇದರಿಂದ ನನಗೆ ಹೆಚ್ಚು ಖುಷಿಯೂ ಸಿಕ್ಕುತ್ತಿದೆ.

- ಆರೋಹಿ ನಾರಾಯಣ್

click me!