ಮುಂಬೈ ಹಾಟ್‌ ಸ್ಪಾಟ್‌ನಲ್ಲಿ ಸ್ಯಾಂಡಲ್‌ವುಡ್‌ ನ ಖ್ಯಾತ ನಾಯಕಿ; ಹೇಗಿದೆ ಪರಿಸ್ಥಿತಿ?

By Suvarna News  |  First Published Apr 20, 2020, 4:06 PM IST

'ಪ್ರಿನ್ಸ್' ಚಿತ್ರದ ನಾಯಕಿ ನಿಖಿತಾ ತುಕ್ರಾಲ್‌ ಈಗ ಮುಂಬೈನ ಹಾಟ್‌ ಸ್ಪಾಟ್ನಲ್ಲಿದ್ದಾರೆ ಎನ್ನಲಾಗಿದೆ. ಕೊರೋನಾ ವಿರುದ್ಧ ಹೋರಾಡಲು ನಿಖಿತಾ ಏನು ಮಾಡುತ್ತಿದ್ದಾರೆ? 
 


2005ರಲ್ಲಿ ಮಹಾರಾಜ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನಿಖಿತಾ ತುಕ್ರಾಲ್‌ ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಉದ್ಯಮಿ ಗಗನ್‌ದೀಪ್‌ ಸಿಂಗ್‌ಮಾಗೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಮುಂಬೈನ ಜುಹುನಲ್ಲಿ ನೆಲೆಸಿದ್ದಾರೆ.  

ಮಹಾಮಾರಿ ಕೊರೋನಾ ವೈರಸ್‌ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಕೆಲವೊಂದು ಮಹಾನಗರಗಳನ್ನು ಸೀಲ್‌ ಡೌನ್‌ ಆಗುತ್ತಿದೆ, ಹಾಟ್‌ ಸ್ಪಾಟ್‌ ತಾಣಗಳ ಪಟ್ಟಿಯಲ್ಲಿ ಜುಹು ಕೂಡ ಸೇರಿಕೊಂಡಿದೆ. ಗಂಡ, ಮಗಳು ಹಾಗೂ ಅತ್ತೆ-ಮಾವ ಜೊತೆ ನೆಲೆಸಿರುವ ನಿಖಿತಾ ಕುಟುಂಬದ ಕಾಳಜಿ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

Tap to resize

Latest Videos

ಅಮ್ಮನಾದ ಸಂಗೊಳ್ಳಿ ರಾಯಣ್ಣ ಹೀರೋಯಿನ್ ನಿಖಿತಾ

ಮನೆಯಲ್ಲಿ ಮಗು ಹಾಗೂ ಹಿರಿಯರು ಇರುವ ಕಾರಣದಿಂದ ನಿಖಿತಾ ಗಂಭೀರವಾಗಿ ಲಾಕ್‌ಡೌನ್‌ ಪಾಲಿಸುತ್ತಿದ್ದಾರೆ. ದಿನದ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ವಾರಕ್ಕೊಮ್ಮೆ ಹೊರಗೆ ಸುರಕ್ಷಿತ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಕ್ಯಾರಿ ಮಾಡುತ್ತಾರಂತೆ. 

18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ನಿಖಿತಾ ವೃತ್ತಿ ಜೀವನದಲ್ಲಿ ಬ್ರೇಕ್‌ ಕೊಟ್ಟಂತ ಸಿನಿಮಾ 'ನೀ ಟಾಟ ನಾ ಬಿರ್ಲಾ' ಹಾಗೂ ಪುನೀತ್‌ ರಾಜ್‌ಕುಮಾರ್‌ಗೆ ಜೋಡಿಯಾಗಿ ಕಾಣಿಸಿಕೊಂಡ ಸಿನಿಮಾ 'ವಂಶಿ'

click me!