
ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ (Sandalwood actress Haripriya) ಹಾಗೂ ನಟ ವಸಿಷ್ಠ ಸಿಂಹ (actor Vasishtha Simha) ಮನೆಗೆ ಮುದ್ದಾದ ಮರಿ ಸಿಂಹದ ಆಗಮನವಾಗಿ ಒಂದು ತಿಂಗಳಾಯ್ತು. ಈ ಶುಭ ಸಮಯದಲ್ಲಿ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ, ಮಗುವನ್ನು ವೆಲ್ ಕಂ ಮಾಡಿಕೊಂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯಿಂದ ಮಗುವನ್ನು ಮನೆಗೆ ಸ್ವಾಗತಿಸಿದ ವಿಡಿಯೋ ಹಾಕಿರುವ ಜೋಡಿ ಮಹಾ ಶಿವರಾತ್ರಿ (Maha Shivaratri)ಗೆ ಶುಭಕೋರಿದ್ದಾರೆ. ಈವರೆಗೆ ಮಗುವಿನ ಯಾವುದೇ ವಿಡಿಯೋವನ್ನು ಈ ಜೋಡಿ ಹಂಚಿಕೊಂಡಿರಲಿಲ್ಲ.
ವಸಿಷ್ಠ ಸಿಂಹ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮಹಾ ಶಿವರಾತ್ರಿಯ ಶುಭಾಶಯಗಳು. ಹರ ಹರ ಮಹಾದೇವ. ನಮ್ಮ ಪುಟ್ಟ ಮಗುವಿಗೆ ಈಗ ಒಂದು ತಿಂಗಳು ತುಂಬಿದೆ. ಹೌದು, ಸಮಯ ಕಳೆದುಹೋಗಿದೆ. ಜೂನಿಯರ್ ಅನ್ನು ಮನೆಗೆ ಸ್ವಾಗತಿಸಿದ್ದು ಹೀಗೆ. ನಮಗಾಗಿ ಈ ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದಕ್ಕಾಗಿ @clickmadi ಗೆ ಧನ್ಯವಾದಗಳು ಎಂದು ಶೀರ್ಷಿಕೆ ಹಾಕಿದ್ದಾರೆ.
ಆರತಿಗೂ ಪುಟ್ಟಣ್ಣಗೂ ಮಧ್ಯೆ ಬಂದ ಮಂತ್ರಿ..! ಆದ್ರೆ ಆ ಮಂತ್ರಿಯೂ ಕೈ ತಪ್ಪಿ ಹೋಗಿ ಆಮೇಲೇನಾಯ್ತು!
ವಿಡಿಯೋದಲ್ಲಿ ಮಗುವಿನ ಮುಖ ಸರಿಯಾಗಿ ಕಾಣೋದಿಲ್ಲ. ಆದ್ರೆ ದೊಡ್ಡ ಸಿಂಹನ ಕೈನಲ್ಲಿ ಸಣ್ಣ ಸಿಂಹದ ಮರಿ ತಬ್ಬಿ ಮಲಗಿರೋದನ್ನು ನೀವು ಕಾಣ್ಬಹುದು. ಆಸ್ಪತ್ರೆಯನ್ನೂ ಬಲೂನ್ ಗಳಿಂದ ಸಿಂಗರಿಸಲಾಗಿದೆ. ಹರಿಪ್ರಿಯಾ ಹಾಗೂ ಮಗುವನ್ನು ಕಾರಿನಲ್ಲಿ ಕರೆ ತರುವ ವಸಿಷ್ಠ ಸಿಂಹ, ಮಗುವನ್ನು ಮನೆಯಲ್ಲಿ ಪ್ರೀತಿಯಿಂದ ವೆಲ್ ಕಂ ಮಾಡ್ತಾರೆ. ಮನೆಯನ್ನು ಸಿಂಪಲ್ ಆಗಿ ಸಿಂಗರಿಸಿ, ಸಂತೋಷದಿಂದ ಮಗುವನ್ನು ಕುಟುಂಬಸ್ಥರು ಸ್ವಾಗತಿಸಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ವಸಿಷ್ಠ ಸಿಂಹ ಗ್ಲಾಸ್ ನಲ್ಲಿಯೇ ಮಗುವಿನ ಮುಖ ನೋಡುವ ಪ್ರಯತ್ನ ಕೂಡ ನಡೆಸಿದ್ದಾರೆ. ನಿಮ್ಮ ಸುಂದರ ಸಂಸಾರಕ್ಕೆ ಶಿವನ ಕೃಪೆ ಸದಾ ಇರಲಿ ಎಂದು ಜನರು ಆಶೀರ್ವದಿಸಿದ್ದಾರೆ.
ಜನವರಿ 26ರಂದು, ಮದುವೆ ವಾರ್ಷಿಕೋತ್ಸವದ ದಿನ ಹರಿಪ್ರಿಯಾ ಹಾಗೂ ವಸಿಷ್ಠ ಅವರಿಗೆ ಡಬಲ್ ಖುಷಿ ಸುದ್ದಿ ಸಿಕ್ಕಿತ್ತು. ಅಂದೇ ಮರಿ ಸಿಂಹನ ಆಗಮನವಾಗಿತ್ತು. ಈ ವಿಷ್ಯವನ್ನು ವಸಿಷ್ಠ ಫ್ಯಾನ್ಸ್ ಮುಂದೆ ಹಂಚಿಕೊಂಡಿದ್ದರು. ವಸಿಷ್ಠ ಹಾಗೂ ಹರಿಪ್ರಿಯ ಎರಡು ವರ್ಷ ಪ್ರೀತಿಸಿ 2023, ಜನವರಿ 26ರಂದು ಮದುವೆ ಆಗಿದ್ದರು. ಮದುವೆಯಾದ ಎರಡನೇ ವರ್ಷಕ್ಕೆ ಮಗುವೊಂದು ಮನೆಗೆ ಬಂದಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಮಾಲ್ಡೀವ್ಸ್ ಟ್ರಿಪ್ ಗೆ ಹೋದ ಟೈಂನಲ್ಲಿ ಫ್ರೆಗ್ನೆನ್ಸಿ ಬಗ್ಗೆ ವಿಡಿಯೋ ಹಂಚಿಕೊಂಡು ಖುಷಿ ಸುದ್ದಿ ನೀಡಿದ್ದರು. ಅದಾದ್ಮೇಲೆ ಹರಿಪ್ರಿಯಾ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಳು. ನಂತ್ರ ಹರಿಪ್ರಿಯಾ ಅವರ ಸೀಮಂತ ಅದ್ಧೂರಿಯಾಗಿ ನಡೆದಿತ್ತು. ಸ್ಯಾಂಡಲ್ವುಡ್ ಸ್ಟಾರ್ಸ್, ನಿರ್ದೇಶಕರು ಸೇರಿದಂತೆ ಅನೇಕರು ಸೀಮಂತಕ್ಕೆ ಬಂದು ಹರಿಪ್ರಿಯಾ ಸಿಂಹ ಜೋಡಿಯನ್ನು ಹರಸಿದ್ದರು.
ವಿಷ್ಣುವರ್ಧನ್‌ಗೆ 'ಕೈ ಕಡಗ' ಸಿಕ್ಕಿದ್ದು ಎಲ್ಲಿ? ಅದರ ಹಿಂದಿದೆ ಬಲು ರೋಚಕ ಕಹಾನಿ!
ಡೆಲಿವರಿ ಟೈಂನಲ್ಲಿ ಹರಿಪ್ರಿಯಾ ಸಾಕಷ್ಟು ನೋವು ತಿಂದಿದ್ದರು ಎಂದು ವಸಿಷ್ಠ ಸಿಂಹ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಗುವನ್ನು ಮೊದಲ ಬಾರಿ ಕೈನಲ್ಲಿ ಎತ್ತಿಕೊಂಡಾಗ ಆದ ಖುಷಿಯನ್ನು ಮರೆಯೋಕೆ ಸಾಧ್ಯವಿಲ್ಲ. ಹರಿಪ್ರಿಯಾ ಡೆಲಿವರಿ ಟೈಂನಲ್ಲಿ ಸಾಕಷ್ಟು ನೋವು ತಿಂದ್ರೂ ಮಗು ಕೈಗೆ ಬಂದ್ಮೇಲೆ ಎಲ್ಲ ಮರೆತು ಹೋಯ್ತು ಎಂದು ವಸಿಷ್ಠ ಹೇಳಿದ್ದರು. ಎರಡು ದಿನಗಳ ಹಿಂದಷ್ಟೆ ವಸಿಷ್ಠ ಸಿಂಹ ಮಹಾಕುಂಭ ಮೇಳದಲ್ಲಿ ಬಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ ಜೊತೆ ಕಾಣಿಸಿಕೊಂಡಿದ್ದಾರೆ. ಒಡೆಲಾ ಸಿನಿಮಾ ಟೀಸರನ್ನು ಮಹಾಕುಂಭ ಮೇಳದಲ್ಲಿ ಬಿಡುಗಡೆ ಮಾಡಲಾಗಿದೆ. ತಮನ್ನಾ ಜೊತೆ ಪುಣ್ಯಸ್ನಾನ ಮಾಡಿರುವ ವಸಿಷ್ಠ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ. ವಸಿಷ್ಠ ಸದ್ಯ ಸಿನಿಮಾದಲ್ಲಿ ಬ್ಯುಸಿಯಿದ್ರೆ ಹರಿಪ್ರಿಯಾ ಮಗುವಿನ ಆರೈಕೆಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.