ಪುಟ್ಟ ಮಕ್ಕಳೊಂದಿಗೆ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ನಟಿ ಅಮೂಲ್ಯ ದಂಪತಿ!

By Shriram Bhat  |  First Published Dec 7, 2024, 2:26 PM IST

ನಟಿ ಅಮೂಲ್ಯಾ ಸಹೋದರ ದೀಪಕ್ ಅರಸು ಅವರು ಸ್ವಲ್ ದಿನಗಳ ಹಿಂದಷ್ಟೇ ಅನಾರೋಗ್ಯದ ನಿಮಿತ್ತ ನಿಧನರಾಗಿದ್ದಾರೆ. ಆ ವೇಳೆ ನಟಿ ಅಮೂಲ್ಯಾ ಅವರ ದುಃಖದ ಕ್ಷಣಕ್ಕೆ ಇದೇ ಸೋಷಿಯಲ್ ಮೀಡಿಯಾ ಕೂಡ ಸಾಕ್ಷಿಯಾಗಿತ್ತು. ನಟಿ ಅಮೂಲ್ಯಾ ಹಾಗೂ..


ಕನ್ನಡ ಸಿನಿಮಾ 'ಚೆಲುವಿನ ಚಿತ್ತಾರ' ಖ್ಯಾತಿ ನಟಿ ಅಮೂಲ್ಯಾ (Amulya) ದಂಪತಿಗಳು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸುದ್ದಿಯಾಗಿದ್ದಾರೆ. ಅವರು ಶೃಂಗೇರಿಯ ಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅವರ ಅವಳಿ ಮಕ್ಕಳಿಗೆ 'ಅಕ್ಷರಾಭ್ಯಾಸ' ಪ್ರಾರಂಭಿಸುವ ಪ್ರಯುಕ್ತ ಅವರು ಶೃಂಗೇರಿ ದೇವಿಯ ದರ್ಶನ ಪಡೆದು ಅಲ್ಲಿಯೇ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಆ ಮೂಲಕ ನಮ್ಮ ಸನಾತಮ ಧರ್ಮದ ಸಂಸ್ಕೃತಿಯನ್ನು ಅಮೂಲ್ಯಾ ದಂಪತಿಗಳು ಅನುಸರಿಸಿದ್ದಾರೆ.

ಮೊದಲೆಲ್ಲ, ಶಾಲೆಗೆ ಕಳುಹಿಸುವ ಮೊದಲು ಮನೆಯಲ್ಲಿ ಅಥವಾ ದೇವಾಲಯದಲ್ಲಿ ಮಕ್ಕಳಿಗೆ ಧಾರ್ಮಿಕ ಸಂಸ್ಕಾರದ ಮೂಲಕ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಈಗಲೂ ಹಲವರು ಅದನ್ನು ಪಾಲಿಸುತ್ತಾರೆ. ಅದರಂತೆ, ನಟಿ ಅಮೂಲ್ಯಾ ಹಾಗೂ ಜಗದೀಶ್ ಚಂದ್ರ ದಂಪತಿಗಳು ಶೃಂಗೇರಿಗೆ ಹೋಗಿ, ಅಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸ್ವತಃ ಅಮೂಲ್ಯಾ ಪತಿ ಜಗದೀಶ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Tap to resize

Latest Videos

ಗೀತಾ ಪಿಕ್ಚರ್ಸ್‌ ನಿರ್ಮಾಣದ 4ನೇ ಸಿನಿಮಾ ಘೋಷಣೆ; ಹೀರೋ ಯಾರು?

ಈ ವಿಡಿಯೋ ನೋಡಿ ಹಲವರು ಕಾಮೆಂಟ್ ಮಾಡಿದ್ದಾರೆ. 'ಶಾರದಾಂಬೆ ಅಮ್ಮನ ಮಡಿಲಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದೀರ, ಒಳ್ಳೆಯದಾಗುತ್ತದೆ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ನಟಿ ಅಮೂಲ್ಯಾ ಸಹೋದರ ದೀಪಕ್ ಅರಸು ಅವರು ಸ್ವಲ್ ದಿನಗಳ ಹಿಂದಷ್ಟೇ ಅನಾರೋಗ್ಯದ ನಿಮಿತ್ತ ನಿಧನರಾಗಿದ್ದಾರೆ. ಆ ವೇಳೆ ನಟಿ ಅಮೂಲ್ಯಾ ಅವರ ದುಃಖದ ಕ್ಷಣಕ್ಕೆ ಇದೇ ಸೋಷಿಯಲ್ ಮೀಡಿಯಾ ಕೂಡ ಸಾಕ್ಷಿಯಾಗಿತ್ತು. ನಟಿ ಅಮೂಲ್ಯಾ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದ ಈ ವಿಡಿಯೋಗಳು ಹಾಗು ಫೋಟೋಗಳು ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿಗೇ ತಲುಪಿದ್ದವು. ಇದೀಗ ಅಮೂಲ್ಯರ ಅವಳಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿರುವ ವಿಡಿಯೋ ಕೂಡ ಸಖತ್ ವೈರಲ್ ಆಗುತ್ತಿದೆ. 

ಅಂದಹಾಗೆ, ನಟಿ ಅಮೂಲ್ಯಾ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚೆಲುವಿನ ಚಿತ್ತಾರ' ಸಿನಿಮಾ ಮೂಲಕ 2007ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅದಕ್ಕೂ ಮೊದಲು ಅವರು 2000ದಲ್ಲಿ ಬಾಲನಟಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಚೆಲುವಿನ ಚಿತ್ತಾರದ ಬಳಿಕ ಅವರು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ನಟಿ ಅಮೂಲ್ಯಾ ಅವರು ಜಗದೀಶ್ ಚಂದ್ರ ಅವರನ್ನು ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಇದೀಗ ಇಬ್ಬರು ಅವಳಿ ಗಂಡುಮಕ್ಕಳ ತಾಯಿಯಾಗಿರುವ ನಟಿ ಅಮೂಲ್ಯ, ಮಕ್ಕಳಿಗೆ ಸಂಸ್ಕಾರಯುತವಾಗಿ ಅಕ್ಷರಾಭ್ಯಾಸ ಮಾಡಿಸಿ ಸುದ್ದಿಯಾಗುತ್ತಿದ್ದಾರೆ. 

ಖ್ಯಾತ ಗಾಯಕ ಎಸ್‌ಪಿಬಿ ಅವರನ್ನೇ ಟ್ರಾಕ್ ಸಿಂಗರ್ ಮಾಡಿದ್ದ ಆ ನಟ!

click me!